ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......
ಭೂಪತಿಯ ಬಾಳಿನ ಕ್ಷಮಯಾಧರಿತ್ರಿ..... ಕಾರ್ಯೇಶು ದಾಸಿ ಕರುಣೇಶು ಮಂತ್ರಿ ಭೋಜೇಶು ಮಾತಾ ಶಯನೇಶು ರಂಭಾ ಕ್ಷಮಯಾಧರಿತ್ರಿ ರೂಪೇಶು ಲಕ್ಷ್ಮಿ ಸತ್ಕರ್ಮಯುಕ್ತ ಕುಲಧರ್ಮ ಪತ್ನಿ ಹೀಗೆ ನಮ್ಮ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ತ್ರೀ ಲಕ್ಷಣಗಳ ಬಗ್ಗೆ ವ್ಯಾಖ್ಯಾನಿಸಲಾಗಿದೆ. ಕವಲೊಡೆದರೆ ಕಾವ್ಯವಾಗುವಳು ಜ್ವಲಿಸಿದರೆ ಝರಿಯಾಗುವಳು ತ್ರಾಸವಾದರೆ ತ್ರಾಹಿಯಾಗುವಳು ದಮನಿಸಿದರೆ ಧರೆಯಾಗುವಳು ಸಂಕಟವಾದರೆ ಸಿಂಧೂರವಾಗುವಳು ಅವಳೇ ಸಂಸಾರದ ಕಣ್ಣಾಗಿರುವ ಹೆಣ್ಣು ಮಗಳು! ಊರನ್ನೇ ರಕ್ಷಿಸುವ ಕಾಟೇರನನ್ನು ರಕ್ಷಿಸಿದ, ಇಂತಹ ಲಕ್ಷಣಗಳನ್ನು ಹೊಂದಿರುವ 'ವಿಜಯಲಕ್ಷ್ಮಿ' ಎಂಬ ಹೆಣ್ಣುಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಒಂದು ವರ್ಷದ ಹಿಂದಷ್ಟೆ ತೆರೆ ಕಂಡ ಕಾಟೇರ ಚಿತ್ರವು ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರದ ನಂತರ ಉಳುವವನೇ ಹೊಲದೊಡೆಯ ಎಂಬ ಕಿಚ್ಚಿನ ವಿಷಯದ ಮೇಲೆ ಮೂಡಿ ಬಂದು ರೈತರಿಗೆ ಭರಪೂರ ಬೆಂಬಲ ನೀಡಿ ಹೃದಯಕ್ಕೆ ಹೆಚ್ಚು ಹತ್ತಿರವಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿ ಕೆರಿಯರ್ ಗೆ ಸಂಗೊಳ್ಳಿ ರಾಯಣ್ಣ, ಸಾರಥಿ ಚಿತ್ರಗಳಂತೆ ಕಳಶಪ್ರಾಯವಾಯಿತು. ಅದೇ ಖುಷಿಯಲ್ಲಿ ಮುಂದೆ ಸಾಗುತ್ತಿದ್ದ ದರ್ಶನ್ ಅವರ ಪಯಣಕ್ಕೆ 11-ಜೂನ್-2024ರಂದು ಸಡನ್ ಬ್ರೇಕ್ ಬಿದ್ದಿತು. ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಹತ್ಯೆಯ ಕೇಸ್ ನಲ್ಲಿ ದರ್ಶನ್ ಮತ್ತು ಅವರ ಗ್ಯಾಂಗ್ ಅರೆಸ್ಟ್ ಆಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಇಡೀ ಕರ್...