ಬೆಳಗಬೇಕಾದ ದೀಪಗಳನ್ನು ನಂದಿಸಲಾಗುತ್ತಿರುವ ಕಥೆ - ದಿ ಕೇರಳ ಸ್ಟೋರಿ
ಬೆಳಗಬೇಕಾದ ದೀಪಗಳನ್ನು ನಂದಿಸಲಾಗುತ್ತಿರುವ ಕಥೆ - ದಿ ಕೇರಳ ಸ್ಟೋರಿ
ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದರೂ ನಿಮ್ಮ ಮಗಳು ಮನೆಗೆ ಬಂದಿಲ್ಲವೆಂದರೆ ನಿಮಗೆ ಹೇಗಾಗುತ್ತದೆ? ಅದನ್ನು ಕಲ್ಪಿಸಿಕೊಳ್ಳೋದಕ್ಕು ನಮಗೆ ಇಷ್ಟವಿಲ್ಲ ಅಲ್ಲವೆ? ಹಾಗಿದ್ದ ಮೇಲೆ ಕಳೆದ 12 ವರ್ಷಗಳಿಂದ ಅಧಿಕೃತವಾಗಿ 32000 ಹಾಗೂ ಅನಧಿಕೃತವಾಗಿ 50000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕೇರಳದಿಂದ ಹೊರಟ ಹೆಣ್ಣುಮಕ್ಕಳು ಅವರ ಮನೆಗೆ ಬಂದೇ ಇಲ್ಲವಲ್ಲ, ಅವರ ಮನೆಯವರ ಸ್ಥಿತಿ ಹೇಗಾಗಿರಬೇಡ! ಕೆಲವು ಸತ್ಯಗಳು ಎಷ್ಟೇ ಕಠೋರವಾಗಿದ್ದರೂ, ಅಹಿತಕರವಾಗಿದ್ದರೂ ಅದನ್ನು ಹೇಳಲೇಬೇಕಾಗುತ್ತದೆ. 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ತೋರಿಸಿರುವುದು ಅಂತಹದ್ದೇ ಒಂದು ಸತ್ಯ, 'ಲವ್ ಜಿಹಾದ್'ನ ಭೀಕರ ಸತ್ಯ. ಈ ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ನಾನು ಎಷ್ಟು ಪುಣ್ಯವಂತೆ, ನಮ್ಮ ಸಮಾಜದಲ್ಲಿರುವ ಈ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದೇನೆ, ಇದರಲ್ಲಿ ಸಿಲುಕಿಕೊಳ್ಳದಿರಲು ಅನಿವಾರ್ಯವಾಗಿರುವ ನಮ್ಮ ಹಿಂದೂ ಸಂಸ್ಕೃತಿ, ಸಂಸ್ಕಾರದ ಶಿಕ್ಷಣವನ್ನು ಪಡೆದುಕೊಂಡಿದ್ದೇನೆ. ಆದರೆ ಎಷ್ಟೋ ಜನ ಈಗಿನ ಹಿಂದೂ ಹೆಣ್ಣು ಮಕ್ಕಳು, ಅದರಲ್ಲೂ ಸೋ ಕಾಲ್ಡ್ ವೆಸ್ಟರ್ನೈಸ್ಡ್ ಮಾಡ್ರನೈಸ್ಡ್ ಹೆಣ್ಣು ಮಕ್ಕಳು ನಮ್ಮ ಧರ್ಮ - ಸಂಸ್ಕೃತಿಯ ಶಿಕ್ಷಣದಿಂದ ವಂಚಿತರಾಗಿ, ಧರ್ಮವೆಂದರೆ ಮೂಢನಂಬಿಕೆಗಳ ಕಂತೆಯೆಂಬ ಅಜ್ಞಾನದಿಂದ ಬದುಕುತ್ತಿದ್ದಾರೆ. ಲವ್ ಜಿಹಾದ್ ನ ಟ್ರ್ಯಾಪ್ ಗೆ ಒಳಗಾಗಿ ಚಿಕ್ಕಂದಿನಿಂದ ತಮ್ಮ ಸರ್ವಸ್ವವನ್ನೆಲ್ಲಾ ಧಾರೆ ಎರೆದು ಬೆಳೆಸಿದ ತಂದೆ-ತಾಯಿಯ ಎದೆಗೆ ಒದ್ದು ಹೋದಂತೆ ಅವರನ್ನು ಬಿಟ್ಟು ಹೊರಟು ಹೋಗುವ ಹೆಣ್ಣು ಮಕ್ಕಳದ್ದು ದೊಡ್ಡ ತಪ್ಪು ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅವರಿಗೆ ಉತ್ತಮ ಸಂಸ್ಕಾರ ನೀಡದ ಪೋಷಕರದ್ದೂ ತಪ್ಪು ಎಂಬುದು.
ಈ ಸಿನಿಮಾದಲ್ಲಿ ಬರುವ 4 ಜನ ಹುಡುಗಿಯರಲ್ಲಿ ಒಬ್ಬಳು ಸಂಪ್ರದಾಯಸ್ಥ ಕುಟುಂಬದ ಮುಗ್ಧ ಹಿಂದೂ, ಮತ್ತೊಬ್ಬಳು ಕಮ್ಯುನಿಸ್ಟ್ ಕುಟುಂಬದ ಹಿಂದೂ, ಇನ್ನೊಬ್ಬಳು ಕ್ಯಾಥೋಲಿಕ್ ಕ್ರಿಶ್ಚಿಯನ್, ಕೊನೆಯದಾಗಿ ಈ ಮೂವರನ್ನು ಬ್ರೈನ್ ವಾಶ್ ಮಾಡುವ ನಾಲ್ಕನೆಯವಳು ಮುಸ್ಲಿಂ. ಈ ರೀತಿ ವಿಭಿನ್ನ ಹಿನ್ನೆಲೆಯ ಹುಡುಗಿಯರು ಹೇಗೆ ಈ ಟ್ರ್ಯಾಪ್ ನಲ್ಲಿ ಬೀಳುತ್ತಾರೆ ಎಂಬುದನ್ನು ಒಂದು ಕಥೆಯಿಂದ ವಿವರಿಸುವ ಮೂಲಕ ಈ ರೀತಿಯ ಸಾವಿರಾರು ಹೆಣ್ಣು ಮಕ್ಕಳ ಕಥೆಯನ್ನು ಒಟ್ಟಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ. ಹೇಗೆ ವ್ಯವಸ್ಥಿತವಾಗಿ ಹುಡುಗಿಯರನ್ನು ಅವರ ಟ್ರ್ಯಾಪ್ ನಲ್ಲಿ ಸಿಲುಕಿಸಿ, ಅವರು ಮನೆಯವರಿಂದಲೂ ತಿರಸ್ಕೃತರಾಗಿ ಮರಳಿ ಹೋಗಲಾಗದೆ, ಆರ್ಥಿಕವಾಗಿ ಸ್ವತಂತ್ರವಿದ್ದು ಉದ್ಯೋಗ ಮಾಡಲಾಗದೆ, ಸಾಮಾಜಿಕ ಭಯದಿಂದ ಯಾವುದೇ ಆಯ್ಕೆಯಿಲ್ಲದೆ ಗುಲಾಮರಾಗಿ ಸಾಯುವಂತೆ ಮಾಡುತ್ತಾರೆ ಎಂಬುದನ್ನು ಕ್ರಮಬದ್ಧವಾಗಿ ತೋರಿಸಲಾಗಿದೆ. ನರ್ಸಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ ರೂಮ್ ಮೇಟ್ ಗಳಾಗಿದ್ದ ಈ 3 ಜನ ಹುಡುಗಿಯರು ಹೇಗೆ ಒಬ್ಬ ಮುಸಲ್ಮಾನ ಹುಡುಗಿ ಅವರ ಹಿಂದೂ/ಕ್ರಿಶ್ಚಿಯನ್ ಧರ್ಮದ ಬಗೆಗೆ ನಕಾರಾತ್ಮಕವಾದ ಪ್ರಶ್ನೆಗಳನ್ನು ಕೇಳುವಾಗ ನಿರುತ್ತರವಾಗುತ್ತಾರೆ ಎಂಬುದು ವಿದ್ಯಾವಂತರ ಸಂಸ್ಕೃತಿಯ ಬಗೆಗಿನ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಬಣ್ಣ ಬಣ್ಣಗಳ ಬೆಳಕಿನ ಪ್ರಪಂಚದಲ್ಲಿ ಸ್ವರ್ಗ ಸದೃಶ ಬದುಕನ್ನು ಕಂಡು ಸ್ವಾತಂತ್ರ್ಯವಾಗಿ ಹಾರಾಡುತ್ತಾ, ಕುಣಿಯುತ್ತಾ ಬದುಕುತ್ತಿರುವ ಪಕ್ಷಿಯನ್ನು ಕಪ್ಪು ಬಿಳುಪಿನ ಅಂಧಕಾರದ ನರಕ ಸದೃಶ ಪಂಜರದಲ್ಲಿ ಬಂಧಿಸಿ ಗುಲಾಮವನ್ನಾಗಿಸಿದರೆ ಯಾವ ಅನುಭವವಾಗುತ್ತದೊ, ಅದೇ ಅನುಭವ ಹಿಂದುವಾಗಿದ್ದ ಹುಡುಗಿ ಈ ಟ್ರ್ಯಾಪ್ ನಲ್ಲಿ ಸಿಲುಕಿ ಮುಸ್ಲಿಂ ಹುಡುಗನನ್ನು ಮದುವೆಯಾಗಲು ಮುಸ್ಲಿಂ ಆಗಿ ಮತಾಂತರವಾದರೆ ಆಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಬ್ರೈನ್ ವಾಶ್ ಗೆ ಒಳಗಾಗಿ, ಮೋಸದ ಪ್ರೀತಿಯ ಬಲೆಯಲ್ಲಿ ಸಿಲುಕಿ, ಡ್ರಗ್ಸ್ ಸೇವನೆಗೆ ದಾಸ್ಯರಾಗಿ, ಗರ್ಭಾವತಿಯರಾಗಿ ಆಯ್ಕೆಗಳೇ ಇಲ್ಲದೆ ಮುಸ್ಲಿಂ ಆಗಿ ಮತಾಂತರವಾಗಿ, ಕೊನೆಗೆ ಐಸಿಸ್ ನ ಕಾಮಾಂಧ ರಾಕ್ಷಸ ಭಯೋತ್ಪಾದಕರ ಸೆಕ್ಸ್ ಸ್ಲೇವ್ ಗಳಾಗಿ, ನಂತರ ಅಪ್ರಯೋಜಕವಾದ ಮೇಲೆ ಸೂಸೈಡ್ ಬಾಂಬರ್ ಗಳಾಗಿ ಅಂತ್ಯವಾಗುವ ಲವ್ ಜಿಹಾದ್ ನ ವ್ಯೂಹದಲ್ಲಿ ಸಿಲುಕಿ ಸತ್ತ ಅಥವಾ ಸಾಯುತ್ತಿರುವ ಮುಸ್ಲಿಮೇತರ ಮುಗ್ಧ ಹಿಂದೂ ಹೆಣ್ಣು ಮಕ್ಕಳು ಅದೆಂತಹ ಘೋರಾತಿ ಘೋರ ವೇದನೆಯನ್ನು ಅನುಭವಿಸಿರಬಹುದು!! ಅವರ ಯಾವ ತಪ್ಪಿಗೆ ಈ ಶಿಕ್ಷೆ? ಅವರು ಮಾಡಿದ್ದು ಒಂದೇ ಒಂದು ತಪ್ಪು, ತನ್ನನ್ನು ಪ್ರೀತಿಸುವಂತೆ ನಾಟಕವಾಡುತ್ತಾ ಅವರ ಮೃತ್ಯುಶಯ್ಯೆಯನ್ನು ಸಿದ್ಧಪಡಿಸುತ್ತಿದ್ದ ಮುಸ್ಲಿಂ ಹುಡುಗರ ಮೋಸವನ್ನು ಅರಿಯಲಾಗದೆ ನಿಜವಾಗಿ ಪ್ರೀತಿ ಮಾಡಿದ್ದು. ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಸುಧಾರಣೆಯಲ್ಲೇ ತಮ್ಮ ಸಂಪೂರ್ಣ ಜೀವನವನ್ನು ವಿನಿಯೋಗಿಸ ಹೊರಟಿರುವ ಹಿಂದೂ ಕುಟುಂಬಗಳು ಧಾರ್ಮಿಕ, ಸಾಂಸ್ಕೃತಿಕ ಜೀವನಪಾಠವನ್ನು ನಿರ್ಲಕ್ಷಿಸಿ ಮಕ್ಕಳ ಭವಿಷ್ಯವನ್ನೇ ಕತ್ತಲಲ್ಲಿ ಮುಳುಗಿಸುತ್ತಿವೆ.
ಈ ಸಿನಿಮಾದಲ್ಲಿ ಇಸ್ಲಾಂ ಜಗತ್ತಿನಲ್ಲಿ ಮಹಿಳೆಯರನ್ನು ಹೇಗೆ ಕಾಣಲಾಗುತ್ತದೆ? ಅವರು ಹೇಗೆ ತಮ್ಮಿಡೀ ಜೀವನವನ್ನು ಗುಲಾಮರಂತೆ ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ? ಅದರಲ್ಲೂ ಐಸಿಸ್ ನ ಒಳಗೆ ನರಕದಲ್ಲಿರುವ ಮಹಿಳೆಯರನ್ನು ಬದುಕಲೂ ಬಿಡದೆ, ತಪ್ಪಿಸಿಕೊಳ್ಳಲೂ ಬಿಡದೆ ಹೇಗೆ ಜೀವಂತ ಶವಗಳನ್ನಾಗಿ ಮಾರ್ಪಾಡಿಸಲಾಗುತ್ತದೆ? ಎಂಬುದನ್ನು ವಾಸ್ತವಿಕವಾಗಿ ತೆರೆದಿಟ್ಟಿದ್ದಾರೆ. ಇನ್ನು ಆ ಮುಸಲ್ಮಾನ ಮಹಿಳೆಯರ ಅಥವಾ ಮತಾಂತರಗೊಂಡ ಮುಸಲ್ಮಾನ ಮಹಿಳೆಯರ ಬದುಕನ್ನು ನರಕವನ್ನಾಗಿ ಮಾಡಿರುವ ಮುಸಲ್ಮಾನ ಮತಾಂಧ ಪುರುಷರು ಯಾವುದೇ ಭಯ, ಪಾಪಪ್ರಜ್ಞೆಗಳಿಲ್ಲದೆ ಈ ರೀತಿಯ ಪೈಶಾಚಿಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಜಗತ್ತಿನಲ್ಲಿರುವ ದೀಪಗಳನ್ನೆಲ್ಲಾ ಆರಿಸುತ್ತಾ ಅಂಧಕಾರದ ಬದುಕನ್ನು ಸೃಷ್ಟಿಸುತ್ತಿದ್ದಾರೆ. ಈ ಸಿನಿಮಾದುದ್ದಕ್ಕೂ ಮತ್ತೆ ಮತ್ತೆ ಕಾಡುವುದು ಅದೇ. ಇಂತಹ ಐಸಿಸ್ ಕಾಮಾಂಧ ರಾಕ್ಷಸರು ನಮ್ಮ ಸಮಾಜದಲ್ಲಿದ್ದಾರಾ? ಅವರ ನಡುವೆ ಮನುಷ್ಯರಾದ ನಾವು ಹೇಗೆ ಬದುಕುವುದು? ಅದರಲ್ಲೂ ಕೋಮಲವಾದ ಹೆಣ್ಣು ಮಕ್ಕಳು ಈ ಸೈತಾನರ ಮಧ್ಯೆ ಹೇಗೆ ಸುರಕ್ಷಿತವಾಗಿರುವುದು? ಎಂಬ ದಿಗಿಲು ಬಡಿಯುವ ಪ್ರಶ್ನೆಗಳು. ಇವರನ್ನು ನೋಡುತ್ತಿದ್ದರೆ ಭಯ, ಕೋಪ, ದುಃಖ, ಅಸಹ್ಯ, ಆತಂಕ, ಉದ್ವೇಗ, ಅನಿಶ್ಚಿತತೆಗಳೆಲ್ಲಾ ಒಮ್ಮೆಲೆ ಅಪ್ಪಳಿಸಿ ತಲೆ ಸುತ್ತಿ ಬರುವಂತಾಗುತ್ತದೆ. ನಮ್ಮ ಮನೆಯ ಹೆಣ್ಣು ಮಕ್ಕಳನ್ನೆಲ್ಲಾ ಕಾಪಾಡಪ್ಪ ಎಂದು ಮತ್ತೆ ಮತ್ತೆ ದೇವರನ್ನು ಪ್ರಾರ್ಥಿಸಬೇಕೆನಿಸುತ್ತದೆ. ಸಿನಿಮಾ ನೋಡಿ ಹೊರಬಂದ ಮೇಲೆ ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆಯರನ್ನು ನೋಡಲು ಸಾಧ್ಯವಾಗದೆ ಬೇರೆಡೆಗೆ ದೃಷ್ಟಿ ಹಾಯಿಸುವಂತಾಯ್ತು. ಈ ಸಮಾಜದಲ್ಲಿ ಎಂದಿಗೆ ಇವರ ದುಃಸ್ಥಿತಿ ಸುಧಾರಣೆಯಾಗುವುದು? ಯಾರು ಇವರ ಪರವಾಗಿ ಹೋರಾಟ ಮಾಡುವುದು? ಈ ಕಥೆಗಳನ್ನು ಓದಿ, ಭಾಷಣಗಳಲ್ಲಿ ಕೇಳಿದ್ದರೂ ಸಿನಿಮಾ ದೃಶ್ಯದ ಮೂಲಕ ನೋಡಿದ ಮೇಲೆ ಮತ್ತಷ್ಟು ಹೆಚ್ಚಾಗಿ ನನ್ನನ್ನು ಘಾಸಿಗೊಳಿಸಿತು. ಇನ್ನು ಇದರ ಬಗ್ಗೆ ಅರಿವೇ ಇಲ್ಲದವರು ಸಿನಿಮಾ ನೋಡಿದರೆ ಅವರಿಗೆ ಎಂತಹ ಆಘಾತಕಾರಿ ಅನುಭವವಾಗುವುದೊ ಏನೋ!?
ಒಟ್ಟಿನಲ್ಲಿ ಈ ಸಿನಿಮಾವನ್ನು ಜೀರ್ಣಿಸಿಕೊಳ್ಳುವುದು ಅಸಾಧ್ಯ. ಚಿತ್ರದ ಕಥಾವಸ್ತುವಂತು ತುಂಬಾ ಆಳಕ್ಕಿದೆ, ವಿಸ್ತಾರವಾಗಿದೆ. ಹೆಚ್ಚೆಚ್ಚು ಕೆದಕಿದಷ್ಟು ಭಯಾನಕ ಸಂಗತಿಗಳು ಹೊರಬೀಳುವುದು ಖಚಿತ. ಸಿನಿಮಾದ ಪ್ರಾರಂಭದಲ್ಲೇ ಮಿಲಿಟರಿ ಅಧಿಕಾರಿಗಳು ಶಾಲಿನಿ ಅಲಿಯಾಸ್ ಫಾತಿಮಾಳ ವಿಚಾರಣೆ ಮಾಡುವಾಗ ನೀನು ಯಾವಾಗ ಐಸಿಸ್ ಸೇರಿದೆ? ಎಂದು ಪ್ರಶ್ನಿಸುತ್ತಾರೆ. ಆಗ ಅವಳು ನಾನು ಯಾವಾಗ ಸೇರಿದೆ ಅನ್ನೋದಕ್ಕಿಂತ ಏಕೆ ಸೇರಿದೆ, ಹೇಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಅದನ್ನು ಯಾಕೆ ಯಾರೂ ಚರ್ಚಿಸುವುದಿಲ್ಲ? ಎಂದು ಮರುಪ್ರಶ್ನಿಸುತ್ತಾಳೆ. ಹೌದು ಈ ಸಿನಿಮಾ ರಿಲೀಸ್ ಆಗಿ ಜನರಿಂದ ಅಭೂತಪೂರ್ವವಾಗಿ ಸ್ವಾಗತಿಸಲ್ಪಟ್ಟರೂ, ಕೇರಳದ ದೊಡ್ಡ ದೊಡ್ಡ ಮಂತ್ರಿಗಳನ್ನು ಸೇರಿದಂತೆ ದೇಶದ ಹಲವು ರಾಜಕಾರಣಿಗಳು, ಮಹಾ ಮಾನವತಾವಾದಿಗಳು ಎಂದು ಹೇಳಿಕೊಂಡು ತಿರುಗುವ ಬುದ್ಧಿ ಜೀವಿಗಳು ಇದನ್ನು ಒಂದು ಪ್ರೋಪಗ್ಯಾಂಡ ಎಂದು ಅಲ್ಲಗಳೆಯುತ್ತಿದ್ದಾರೆ. ಇನ್ನು ಉಳಿದವರದ್ದು ನಿಗೂಢ ಮೌನ, ನೋ ಕಮೆಂಟ್ಸ್. ಯಾಕಿಂತಹ ರಾಜಕೀಯ, ವೈಚಾರಿಕ ನಿಶಬ್ಧತೆ? ಮುಸಲ್ಮಾನರನ್ನು ಓಲೈಸುವ ಇಂತಹ ರಾಜಕಾರಣಕ್ಕೆ ಇನ್ನೆಷ್ಟು ದುಬಾರಿ ಬೆಲೆಯನ್ನು ನಾವು ತೆರಬೇಕು? ಸತ್ಯವು ಎಷ್ಟೇ ಕಠಿಣವಾಗಿದ್ದರೂ ಅದನ್ನು ಎದುರಿಸುವ ಧೈರ್ಯ ತೋರಿದರೆ ಪರಿಹಾರ ಕಂಡುಕೊಳ್ಳಬಹುದು. ಅದನ್ನು ಬಿಟ್ಟು ಸತ್ಯಕ್ಕೆ ವಿಮುಖರಾಗಿಯೇ ಉಳಿದರೆ ಕ್ಲಿಷ್ಟತೆ ಹೆಚ್ಚಾಗುತ್ತದೆಯೇ ಹೊರತು ಪರಿಹಾರ ದೊರೆಯುವುದಿಲ್ಲ. ಸಾಕ್ಷ್ಯಾಧಾರಗಳ ಕೊರತೆ, ಭಾವನಾತ್ಮಕ ಸಂದಿಗ್ಧತೆ, ಸಾರ್ವಜನಿಕರಲ್ಲಿ ಜಾಗೃತಿಯಿಲ್ಲದ ಅಸಂಬದ್ಧತೆ, ರಾಜಕೀಯ ಸಂಗತಿಗಳಿಂದ ಅನಿರ್ದಿಷ್ಟತೆ ಮುಂತಾದ ಕಾರಣಗಳಿಂದ ಈ ಸಮಸ್ಯೆಗೆ ಕಾನೂನಾತ್ಮಕ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ ಹಾಗೆಯೇ ದೀರ್ಘಮಯ! ಆದ್ದರಿಂದ ಕಾನೂನಿಗೆ ಪೂರಕವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿ ರಾಕ್ಷಸರ ವಿರುದ್ಧ ಹೋರಾಡಲು ಶಿವಾಜಿ ಮಹಾರಾಜ್, ಮಹರಾಣಾ ಪ್ರತಾಪ ಸಿಂಹ, ಶ್ರೀಕೃಷ್ಣದೇವರಾಯ, ಗುರು ಗೋವಿಂದ್ ಸಿಂಗರಂತಹ ಯುದ್ಧ ಪರಿಣಿತಿ ಇರುವ ಧರ್ಮವೀರ ಕ್ಷತ್ರಿಯರು, ಅವರ ಆದರ್ಶವನ್ನನುಸರಿಸುವ ಭಜರಂಗದಳದಂತಹ ಸಂಘಟನೆಗಳು ಮತ್ತಷ್ಟು ಶಕ್ತಿಶಾಲಿಯಾಗಿ ಹೋರಾಡಿದರೆ ನಮ್ಮ ಗೆಲುವು ನಿಶ್ಚಿತ. ಈಗ ದೇಶದ ಪ್ರಧಾನಮಂತ್ರಿ ಮೋದೀಜಿ ಅವರೇ ಈ ಸಿನಿಮಾವನ್ನು ಬೆಂಬಲಿಸಿ ಮಾತನಾಡಿರುವುದರಿಂದ ಹೊಸ ಭರವಸೆಯಂತು ಮೂಡಿದೆ. ಕೇರಳದ ಈ ಹುಡುಗಿಯರಿಗೆ ನ್ಯಾಯ ದೊರಕಿಸಲು ನಾವೆಲ್ಲಾ ಒಗ್ಗಟ್ಟಾಗಿ ಹೋರಾಡೋಣ, ಈ ಹುಡುಗಿಯರಿಗೆ ಅನ್ಯಾಯ ಮಾಡಿ ಇಂದಿಗೂ ರಾಜಾರೋಷವಾಗಿ ತಿರುಗಾಡಿಕೊಂಡಿರುವ ಪಾಪಿರಕ್ಕಸರಿಗೆ ತಕ್ಕ ಶಿಕ್ಷೆ ಕೊಡಿಸೋಣ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment