ನಮಗೆ ಬೇಕಿರುವುದು ಮಿಷನರಿ ಶಾಲೆಗಳಲ್ಲ, ಮೆಷಿನರಿ ಶಾಲೆಗಳು
ನಮಗೆ ಬೇಕಿರುವುದು ಮಿಷನರಿ ಶಾಲೆಗಳಲ್ಲ, ಮೆಷಿನರಿ ಶಾಲೆಗಳು
"ಹೆಲೋ ಚಿಲ್ಡ್ರನ್ ಗುಡ್ ಮಾರ್ನಿಂಗ್, ನಿಮ್ಮೆಲ್ಲರ ಮೇಲೂ ಜೀಸಸ್ ಕೃಪೆ ಇರಲಿ, ಅವರು ನಿಮ್ಮ ಪಾಪಗಳನ್ನೆಲ್ಲಾ ನಿರ್ಮೂಲನೆ ಮಾಡಲಿ. ನಮ್ಮ ಇಂಗ್ಲಿಷ್ ಮೀಡಿಯಂನ ಶಾಲೆಯಲ್ಲಿ ಸಾಕಷ್ಟು ನಿಯಮಗಳಿವೆ. ನಿಮ್ಮ ಮನಬಂದಂತೆ ಕುಂಕುಮ ಇಡುವಂತಿಲ್ಲ, ಸರ-ಬಳೆ ಏನೂ ಹಾಕುವಂತಿಲ್ಲ, ಹೂ ಮುಡಿಯುವಂತಿಲ್ಲ, ಕೈಗಳಿಗೆ ಧಾರ್ಮಿಕ ಸಂಕೇತವಾದ ದಾರ-ಖಡ್ಗಗಳನ್ನು ಹಾಕುವಂತಿಲ್ಲ, ಯಾರಾದರೂ ನಮ್ಮ ಮಾತನ್ನು ಮೀರಿ ಇವುಗಳನ್ನೆಲ್ಲಾ ಧರಿಸಿ ಬಂದರೆ ಅವರಿಗೆ ದಂಡ ವಿಧಿಸಲಾಗುವುದು. ಕನ್ನಡವನ್ನು ಮಾತನಾಡುವಂತೆಯೇ ಇಲ್ಲ, ಅದರ ಬಳಕೆ ಸಂಪೂರ್ಣ ನಿಷಿದ್ಧ. ಒಂದು ವೇಳೆ ಇಂಗ್ಲಿಷ್ ಅನ್ನು ಬಿಟ್ಟು ಕನ್ನಡ ಅಥವಾ ಬೇರೆ ಯಾವುದೇ ನಿಮ್ಮ ಮಾತೃಭಾಷೆಯನ್ನು ಬಳಸಿದ್ದು ನಮ್ಮ ಗಮನಕ್ಕೆ ಬಂದರೆ ಅದಕ್ಕೆ ದಂಡ ತೆರಬೇಕಾಗುವುದು. ನಾವು ಇದನ್ನೆಲ್ಲಾ ನಿಮ್ಮ ಸೇವೆಗಾಗಿ, ನಿಮ್ಮ ಉದ್ಧಾರಕ್ಕಾಗಿ ಮಾಡುತ್ತಿರುವುದು!! ಶಿಕ್ಷಣವೇ ಮಹತ್ತರ ಸೇವಾ ಕೆಲಸವಾಗಿದೆ". ಇದಿಷ್ಟು ಪ್ರತಿಯೊಬ್ಬ ಕ್ರಿಶ್ಚಿಯನ್ ಅಥವಾ ಮತಾಂತರಗೊಂಡ ಕ್ರಿಶ್ಚಿಯನ್ ತಾನು ಪಾಠ ಮಾಡುವ ಶಾಲೆಯ ಮಕ್ಕಳ ಮುಂದೆ ಕೋಡ್ ವರ್ಡ್ ಅಥವಾ ನೇರವಾದ ಭಾಷೆಯಾಗಿ ಹೇಳುವುದು. ಹೌದು ಎಂತಹ ಶಿಸ್ತುಬದ್ಧ ಶಾಲೆ, ಗುಣಮಟ್ಟದ ಶಾಲೆ, ಇಂಗ್ಲಿಷ್ ಪ್ರಾಮುಖ್ಯತೆಯ ಶಾಲೆ, ಉತ್ತಮ ವಾತಾವರಣದ ಶಾಲೆ ಎಂದೆಲ್ಲಾ ನೀವು ಯೋಚಿಸಲು ಆರಂಭಿಸಿರಬಹುದು. ತಾಳಿ ತಾಳಿ ತಾಳಿ ಆ ನಿಮ್ಮ ಆಲೋಚನಾ ತರಂಗಗಳನ್ನು ಪಾಜ್ ಮಾಡಿ. ಮಕ್ಕಳ ಮುಂದೆ ಕೋಡ್ ವರ್ಡ್ ಆಗಿ ಹೇಳುವ ಅವರ ಮಾತುಗಳನ್ನು ಡಿಕೋಡ್ ಮಾಡಿದರೆ ಯಾವ ಅರ್ಥ ಹೊರಬರುತ್ತದೆ ಎಂಬುದನ್ನು ತಿಳಿಯಿರಿ.
ಡಿಕೋಡ್: ನಾವು ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯನ್ನು ಒಂದಿನಿತೂ ಪಾಲಿಸುವಂತಿಲ್ಲ, ಅದರ ಬಗ್ಗೆ ಅಲ್ಪವೂ ಅಭಿಮಾನ ಹೊಂದುವಂತಿಲ್ಲ, ಬದಲಾಗಿ ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿಯನ್ನು ನಾವೇ ದ್ವೇಷಿಸುವ ಮೂಲಕ ನಮ್ಮ ಧರ್ಮದ ಅಂತ್ಯಕಾಲವನ್ನು ಆಹ್ವಾನಿಸಬೇಕು. ಇದರ ಮೂಲಕ ಬ್ರಿಟಿಷರ ಗುಲಾಮಗಿರಿಯ ಮಾನಸಿಕ ದಾಳಿಗೆ ಬಲಿಯಾಗಿ ಮಿಷನರಿಗಳಿಗಾಗಿ ಕೆಲಸ ಮಾಡಬೇಕು ಅಥವಾ ತಮ್ಮ ಶವಪೆಟ್ಟಿಗೆಗೆ ತಾವೇ ಕೊನೆಯ ಮೊಳೆಯನ್ನು ಹೊಡೆದುಕೊಳ್ಳಬೇಕು. ಯಾವ ಸ್ವಾತಂತ್ರ್ಯಕ್ಕಾಗಿ ಸಂಸ್ಕೃತಿ-ಪರಂಪರೆಯೆಂಬ ಭಾರತದ ಅಸ್ಮಿತೆಯ ಹಡಗು ನಮ್ಮ ಪೂರ್ವಜರ ರಕ್ತ-ಬಲಿದಾನಗಳ ಮೂಲಕ ಸಾಗಿ ಬಂತೊ ಅದನ್ನು ಹಂತ-ಹಂತವಾಗಿ ಮುಳುಗಿಸಿ ನಾಶ ಮಾಡಲು ಸಿದ್ಧರಾಗಬೇಕು. ಮತಾಂಧ ಮಿಷನರಿಗಳ ಆತ್ಮವಿಸ್ಮೃತಿ ಬಾಣಗಳ ದಾಳಿಗೆ ಒಳಗಾಗಿ ತಮ್ಮ ತನವನ್ನು ಮರೆತು ಅವರನ್ನೇ ಅಂಧರಾಗಿ ಅನುಸರಿಸುತ್ತಾ ಇದುವರೆವಿಗೂ ಸಾಧಿಸಿರುವ ವೈಜ್ಞಾನಿಕ-ಆಧ್ಯಾತ್ಮಿಕ ಪ್ರಗತಿಗೆ ವಿಮುಖವಾಗಿ ಜ್ಞಾನಜ್ಯೋತಿಯನ್ನು ನಂದಿಸಿ ದೇವ ಸಂತಾನರು, ಋಷಿ ಸಂತಾನರು ಎಂಬ ಶ್ರೇಷ್ಠ ಜನಾಂಗದ ಸ್ಥಾನದಿಂದ ಪಶುಸಂತಾನರೆಂಬ ಸ್ಥಾನಕ್ಕೆ ಕುಸಿದು ಬೀಳಬೇಕು. ಮಾತೃಭಾಷೆಯ ಮೂಲಕ ಪಡೆದುಕೊಳ್ಳಬಹುದಾದ ಸಮರ್ಥ ಜ್ಞಾನ, ತಿಳುವಳಿಕೆ, ವಿಷಯ ಗ್ರಹಣ, ಸ್ಪಷ್ಟ ಚಿತ್ರಣಗಳಿಂದ ವಂಚಿತರಾಗಿ ಇಂಗ್ಲೀಷ್ ಶಿಕ್ಷಣ ಮಾತ್ರವೇ ಪ್ರಮುಖವಾದುದೆಂಬ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿರುವ ಯೂರೋಪಿನ ಭ್ರಮಾ ಜಾಲದಲ್ಲಿ ಸಿಲುಕಿ ಅರಗಿಳಿಗಳಂತೆ ವಿಷಯವನ್ನು ಅರ್ಥೈಸಿಕೊಳ್ಳಲಾಗದೆ ಕಲಿಯಬೇಕು. ಕಣ್ಣಮುಂದೆಯೇ ಕಠೋರ ಸತ್ಯದ ಸಾಕ್ಷ್ಯವಿದ್ದರೂ ಕಣ್ಣು ಮುಚ್ಚಿ ಅದು ಸತ್ಯವಲ್ಲ ಎನ್ನಬೇಕು ಅಂದರೆ ಪ್ರಾಚೀನ ಜನಾಂಗವಾದ, ಹೆಚ್ಚು ಆಕ್ರಮಣಗಳಿಗೆ ಗುರಿಯಾಗಿರುವ ಜನಾಂಗವೆಂದು ದಾಖಲೆಗಳ ಮೂಲಕ ಗುರುತಿಸಲಾಗಿರುವ ಯಹೂದ್ಯ ಸಮಾಜವು ತಮ್ಮ ಮೇಲೆ ನಡೆದ ದೌರ್ಜನ್ಯದ ಸತ್ಯವನ್ನು ಜಗತ್ತಿನ ಮುಂದೆ ಅರುಹಿ ಮತ್ತೆಂದೂ ಹೀಗಾಗದಿರಲೆಂದು ಜಾಗೃತಿಗೊಳಿಸುವಂತೆ ಅದಕ್ಕಿಂತಲೂ ಪ್ರಾಚೀನವಾದ ಸನಾತನವಾದ, ಅವರಿಗಿಂತಲೂ ಘೋರ ಆಕ್ರಮಣಗಳಿಗೆ ಗುರಿಯಾದ ಹಿಂದೂ ಸಮಾಜದವರಾದ ನಾವು ಆ ಭೀಕರ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಡುವುದಿರಲಿ ಅದನ್ನು ನಾವೇ ತಿಳಿದುಕೊಳ್ಳಬಾರದು, ಅದು ನಮಗೆ ಗೊತ್ತಾಗಲೇಬಾರದು ಎಂಬಂತೆ ವ್ಯವಸ್ಥಿತವಾಗಿ ಅಸ್ತಿತ್ವದಲ್ಲಿಲ್ಲದ ಸೆಕ್ಯುಲರಿಸಂ ಎಂಬ ಮಾಯಾ ಪರದೆಯನ್ನು ಹಾಕಿ ಮುಚ್ಚಿರುವುದರಿಂದ ಆ ಸತ್ಯವನ್ನು ಸುಳ್ಳು ಎನ್ನಬೇಕು. ಒಟ್ಟಿನಲ್ಲಿ ಅವರ ಕೋಡ್ ವರ್ಡ್ ನ ಸಾರಾಂಶವನ್ನು ಹೇಳುವುದಾದರೆ, ಗುರುಕುಲಗಳೆಂಬ ಭಾರತೀಯ ಶಿಕ್ಷಣ ಪದ್ಧತಿಯ ವ್ಯವಸ್ಥೆಯನ್ನು ಧ್ವಂಸ ಮಾಡಿ ಈ ರೀತಿಯ ಕಾನ್ವೆಂಟ್ ಶಾಲಾ ಶಿಕ್ಷಣವನ್ನು ಜಾರಿಗೊಳಿಸಿದ ಕಾರ್ಲ್ ಮಾರ್ಕ್ಸ್ ನ ಗುರಿಯಂತೆ ಮಾನಸಿಕವಾಗಿ ಬ್ರಿಟಿಷರಾಗಿ ಶರೀರದಿಂದ ಮಾತ್ರ ಭಾರತೀಯರಂತೆ ಕಾಣುವ 'ಕಪ್ಪು ಬ್ರಿಟಿಷರ' ನಿರ್ಮಾಣವಾಗಬೇಕು.
ಈ ವರ್ಷ ಮಿಷನರಿ ಶಾಲೆಗಳ ನೈಜ ಮುಖವನ್ನು ಬಯಲು ಮಾಡಿದ ತಮಿಳುನಾಡಿನ ಲಾವಣ್ಯ ಅವರ ಪ್ರಕರಣದ ಬಗ್ಗೆ ನೀವೆಲ್ಲಾ ಕೇಳಿರಬೇಕು. ಹೇಗೆ ಆಕೆಯನ್ನು ಕ್ರಿಶ್ಚಿಯನ್ ಅಗಿ ಮತಾಂತರವಾಗಬೇಕೆಂದು ಹಿಂಸಿಸಲಾಯಿತು, ನಂತರ ಅವಳು ಮತಾಂತರವಾಗುತ್ತಿಲ್ಲ ಎಂಬ ಕೋಪಕ್ಕೆ ಶೌಚಾಲಯವನ್ನು ಶುಚಿ ಮಾಡುವ ಹಾಗೂ ಇನ್ನಿತರ ಅದೇ ತೆರನಾದ ಕೆಲಸಗಳನ್ನು ಕೊಡುವ ಮೂಲಕ ಮಾಡದಿದ್ದ ತಪ್ಪಿಗೆ ಶಿಕ್ಷಿಸಲಾಯಿತು ನಂತರ ಅವರ ಶೋಷಣೆಯು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದಯನೀಯ ಸ್ಥಿತಿಗೆ ಕೊಂಡೊಯ್ಯಿತು! ಇದು ಬಹಳ ದೂರದ ಸ್ಥಳದಲ್ಲಿ ನಡೆದ ದುರ್ಘಟನೆ ಎಂದಾದರೆ ನಮ್ಮದೇ ರಾಜ್ಯದ ಮಂಡ್ಯ ಜಿಲ್ಲೆಯ ನಿರ್ಮಲ ಹೆಸರಿನ ಮಿಷನರಿ ಶಾಲೆಯಲ್ಲಿ ಮಕ್ಕಳ ಮೇಲೆ ಬಲವಂತವಾಗಿ ಕ್ರಿಸ್ತನ ಶಿಲುಬೆಯನ್ನು ಹೊರಿಸಿ ಶೋಷಿಸುತ್ತಿರುವ ಸುದ್ದಿಯು ಹೆಚ್ಚು ವೈರಲ್ ಆಗಿತ್ತು. ಶೇ.100ಕ್ಕೆ 80-90ರಷ್ಟು ಹಿಂದೂ ವಿದ್ಯಾರ್ಥಿಗಳೇ ಆ ಶಾಲೆಯಲ್ಲಿದ್ದರೂ ಜೀಸಸ್ ನನ್ನು ಬಿಟ್ಟು ಬೇರೆ ಯಾವ ಒಂದೇ ಒಂದು ಹಿಂದೂ ದೇವರನ್ನು ಪೂಜಿಸಲು ಅಥವಾ ಪ್ರಾರ್ಥಿಸಲು ನಿರಾಕರಿಸುವ ಆ ಶಿಕ್ಷಕರ ದಾರ್ಷ್ಟ್ಯ ಮನಸ್ಥಿತಿಯು ಪೋಷಕರೊಂದಿಗಿನ ಸಂವಾದದಲ್ಲಿ ಬಹಿರಂಗವಾಯಿತು. ವಿಗ್ರಹಾರಾಧಕರನ್ನು (ಹಿಂದೂಗಳನ್ನು) ನಿಂದಿಸುವ ಕ್ರಿಶ್ಚಿಯನ್ನರು ಶಾಲೆಯ ಪ್ರತಿಯೊಂದು ತರಗತಿಯಲ್ಲೂ ಜೀಸಸ್ ಹಾಗೂ ಅವರ ಸಂಬಂಧಿತ ವಿಗ್ರಹಗಳನ್ನು ಇರಿಸುತ್ತಾರೆ. ಶಾಲೆಯ ಹೆಸರಿನಲ್ಲೇ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿ ಶಾಲೆಯ ಹೆಬ್ಬಾಗಿಲಿಗೇ ಆ ಧರ್ಮದ ಸೂಚಕಗಳನ್ನು ವಿಗ್ರಹಗಳನ್ನು ಹಾಕಿ, ಇಂಗ್ಲಿಷ್ ಮಾಯಾಜಿಂಕೆಯನ್ನು ಪೋಸ್ಟರ್ ಆಗಿ ಬಳಸಿ ತಮ್ಮನ್ನು ತಾವು ಸೆಕ್ಯುಲರ್ ಗಳು ಎಂದು ಬಿಂಬಿಸಿಕೊಳ್ಳುತ್ತಾರೆ. ಈ ಲೇಖನದ ಗಾತ್ರಕ್ಕನುಸಾರ ಕೇವಲ 2 ಪ್ರಮುಖ ಉದಾಹರಣೆಗಳನ್ನು ಮಾತ್ರ ದಾಖಲಿಸಿದ್ದೇನೆ. ದೇಶದಾದ್ಯಂತ ಇಂತಹ ಅದೆಷ್ಟೋ ಪ್ರಕರಣಗಳು ಜರಗುತ್ತಿವೆ, ಅದನ್ನು ಪ್ರತಿನಿತ್ಯ ಸತ್ಯ, ನಿಖರ ಮಾಹಿತಿಯನ್ನು ನೀಡುವ ಕೆಲವೇ ಕೆಲವು ಮಾಧ್ಯಮಗಳ ಮೂಲಕ ತಿಳಿದುಕೊಂಡು ಜಾಗೃತರಾಗಬಹುದು. ಅದರಲ್ಲೂ ಬೆಳಕಿಗೆ ಬರದೆ ಮರೆಯಾಗುವ ಪ್ರಕರಣಗಳೂ ಅಧಿಕವಾಗಿವೆ ಏಕೆಂದರೆ ಇಂಗ್ಲಿಷ್ ಪೋಸ್ಟರ್ ಅನ್ನು ಹಿಡಿದ ಈ ಮಿಷನರಿ ಶಾಲೆಗಳು ಹಳ್ಳಿ-ಹಳ್ಳಿಗಳಿಗೂ ಲಗ್ಗೆಯಿಡುತ್ತಿವೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುತ್ತೇವೆಂದು ಹೇಳುವ ಈ ಶಾಲೆಗಳು ಮತಾಂತರದ ಔಟ್ ಪುಟ್ ಅನ್ನು ಪಡೆಯಲು ನಾಟಕೀಯ ಸೇವೆಯನ್ನು ಇನ್ ಪುಟ್ ಆಗಿ ಬಳಸಿಕೊಳ್ಳುತ್ತಿವೆ! ಅವರ ಶಾಲೆಯಲ್ಲೇ ಓದುವ ಹಿಂದೂ ಅಥವಾ ಇತರ ಕ್ರಿಶ್ಚಿಯನೇತರ ವಿದ್ಯಾರ್ಥಿಗಳಿಗೆ ಆ ಶಾಲೆಯಲ್ಲೇ ಶಿಕ್ಷಕ ಹುದ್ದೆ ನೀಡುವ ಅಥವಾ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳಿಸುವ ಅಥವಾ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮುದ್ದು ಮಕ್ಕಳ ಮುಗ್ಧ ಮನಸ್ಸಿನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಅವರು ಶಾಲೆಯಲ್ಲೇ ಇರುವಾಗ ಅವರ ಮನಸ್ಸಿನ ಮೇಲೆ ಕ್ರಿಶ್ಚಿಯನ್ ಧರ್ಮದ ಪ್ರಭಾವ ಬೀಳುವಂತೆ ಮಾಡಿ ಅವರನ್ನು ಆಕರ್ಷಿಸುವ ಮೂಲಕ ಮತಾಂತರದ ಬೀಜವನ್ನು ಹಾಕುತ್ತಾರೆ.
ಕೊರೊನಾದಂತಹ ಅತೀವ ಸಂಕಟಮಯ ಕಾಲದಲ್ಲೂ ರೋಗಿಗಳ ಶುಶ್ರೂಷೆಯ ಕಾರ್ಯಕ್ಕೆ ಮತಾಂತರದ ಮೌಲ್ಯವನ್ನು ಗಳಿಸಿಕೊಳ್ಳಲು ಹೆಣಗಾಡಿದ ಇವರು ಯಾವುದೇ ಸಂಕಷ್ಟ-ಒತ್ತಡಗಳಿಲ್ಲದ ಶಾಲೆಯ ವಾತಾವರಣದಲ್ಲಿ ಈ ಕಾರ್ಯವನ್ನು ಮಾಡದೆ ಸುಮ್ಮನಿರುತ್ತಾರೆಯೇ!? ಇವರಿಗೆಲ್ಲಾ ವಿದೇಶಿ NGOಗಳ ಮೂಲಕ ಅಗಾಧ ಪ್ರಮಾಣದ ಧನರಾಶಿ ಹರಿದು ಬರುವಾಗ ಮತಾಂತರ ಮಾಡುವುದು, ಕಾನೂನು ಬಾಹಿರವಾಗಿ ಮತಾಂತರ ಮಾಡಿ ಬಂಧನಕ್ಕೊಳಗಾದರೂ ಅದನ್ನು ಭೇದಿಸಿ ಹೊರಬರುವುದು ಬಹಳ ಸಲೀಸು. ಶ್ರೀ ನರೇಂದ್ರಮೋದಿ ಅವರ ತಾಕತ್ತಿನ ಸರ್ಕಾರ ಬಂದ ಮೇಲೆ ಯೂರೋಪ್ ಅನ್ನು ಕೂಡ ಎದುರು ಹಾಕಿಕೊಂಡು NGO ಮುಖವಾಡ ಹಾಕಿ ಮಿಷನರಿಗಳಿಗಾಗಿ ಕಾರ್ಯ ಮಾಡುತ್ತಿದ್ದ ಸಾವಿರಾರು ಸಂಸ್ಥೆಗಳನ್ನು ನಿಷೇಧಿಸಲಾಯಿತು. ಇಂತಹ ಗಟ್ಟಿ ಸರ್ಕಾರ ಅಸ್ತಿತ್ವದಲ್ಲಿರುವಾಗ ನಾವೆಲ್ಲಾ ಜಾಗೃತರಾಗಿ ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಕಟಿಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕಿದೆ.
ನಮ್ಮ ಕಾಲದ ದೇಶಭಕ್ತ ಶ್ರೀ ರಾಜೀವ್ ದೀಕ್ಷಿತ್ ಅವರು ಇಂಗ್ಲೆಂಡ್ ಪಾರ್ಲಿಮೆಂಟ್ ನ ಗ್ರಂಥಾಲಯಗಳಲ್ಲಿ ನಡೆಸಿದ ಸಂಶೋಧನೆಗಳಿಗನುಸಾರ ಯೂರೋಪಿನ ಸಂಸ್ಕೃತಿಯಂತೆ ದೈಹಿಕ ಆಕರ್ಷಣೆಗೆ ಒಳಗಾಗಿ ವಿವಾಹವಿಲ್ಲದೆ ಜನಿಸಿದ ಅಥವಾ ವಿವಾಹದ ನಂತರ ವಿಚ್ಛೇದನ ಪಡೆಯುವಾಗ ಇದ್ದ ಮಕ್ಕಳು ಅನಾಥರಾಗುತ್ತಿದ್ದರು, ಅಂತಹ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾರಂಭವಾದ ಕಾನ್ವೆಂಟ್ ಶಾಲೆಗಳೇ ಮುಂದೆ ಅಗಾಧವಾಗಿ ಪ್ರಪಂಚದಾದ್ಯಂತ ಅವರ ವಸಾಹತು ದೇಶಗಳಲ್ಲಿ ಮುಂದುವರೆದವು ಎಂಬ ಸಂಗತಿಯು ಬೆಳಕಿಗೆ ಬಂದಿದೆ. ಈಗಲಾದರೂ ಯೋಚಿಸಿ, ಇಂತಹ ಯೂರೋಪಿನ ಸಂಸ್ಕೃತಿಯನ್ನು ಹೇರುವ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸುತ್ತೀರಾ? ಇಸ್ಲಾಂ ಆಂಕ್ರಾಂತಕರಾದರೂ ನೇರವಾಗಿ ಗೌರವದ ಪ್ರತೀಕವಾಗಿರುವ ಮಂದಿರ, ಸ್ಥಳ, ಸ್ತ್ರೀ ಸಂಕುಲಗಳ ಮೇಲೆ ನೇರವಾಗಿ ಯುದ್ಧ ಮಾಡುವ ಮೂಲಕ ಅವರ ವಿರುದ್ಧ ನೇರವಾಗಿ ಹೋರಾಟ ಮಾಡಲು ಅವಕಾಶ ನೀಡಿದರು. ಆದರೆ, ಈ ಕ್ರಿಶ್ಚಿಯನ್ ಆಕ್ರಮಣಕಾರರು ನಮ್ಮ ರಾಷ್ಟ್ರದ ಅಂತಃಶಕ್ತಿ, ಮೂಲಭೂತ ಆಸ್ತಿತ್ವವಾದ ಧರ್ಮ-ಸಂಸ್ಕೃತಿಗಳ ಮೇಲೆ ದಾಳಿ ಮಾಡಲು ಅದನ್ನು ತಲುಪಲು ಇರುವ ಏಕೈಕ ಮಾರ್ಗವಾದ ಶಿಕ್ಷಣವನ್ನೇ ಆರಿಸಿಕೊಂಡರು. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಳ್ಳಿ, ಇಂಗ್ಲಿಷ್ ನ ವ್ಯಾಮೋಹವನ್ನು ಅಸ್ತ್ರವಾಗಿಸಿಕೊಂಡು ಅರೆಬರೆ ಇಂಗ್ಲಿಷ್ ಕಲಿಸುವ ಅಥವಾ ಇಂಗ್ಲಿಷ್ ನ ಅರಗಿಳಿಗಳಾಗಿ ಮಾಡಿ ಸತ್ವವಿಲ್ಲದ ಶಿಕ್ಷಣ ನೀಡುತ್ತಾ ಭಾರತದ ಕ್ರಿಸ್ತೀಕರಣಕ್ಕಾಗಿ ಕಾರ್ಯ ಮಾಡುತ್ತಿರುವ ಮಿಷನರಿಗಳ ಮೋಸದ ಬಲೆಯನ್ನು ಕತ್ತರಿಸಿ, ಭಾರತದ ಭವಿಷ್ಯವನ್ನು ರಕ್ಷಿಸಿ. ಈ ಭವ್ಯ ಭಾರತದ ಮಹಾನತೆಯ ಬಗ್ಗೆ ನೀವು ಅರಿಯದೆ ಇದುವರೆವಿಗೂ ಅಜ್ಞಾನಿಗಳಾಗಿದ್ದರೆ ಇಂದಿನಿಂದಲೇ ತಿಳಿಯಲು ಪ್ರಯತ್ನಿಸಿ, ತಿಳಿದುಕೊಂಡ ಮೇಲೆ ಇಷ್ಟು ದಿನ ಅದರ ಬಗ್ಗೆ ಅರಿವಿಲ್ಲದ್ದಕ್ಕೆ ಅಥವಾ ಅರಿಯಲು ಬಿಡದಿದ್ದಕ್ಕೆ ನಿಮಗೆ ಉಗ್ರ ಕೋಪ ಬರುವುದು ಶೇ.100ರಷ್ಟು ಖಚಿತ. ಶ್ರೀಗುರು ಸ್ವಾಮಿ ವಿವೇಕಾನಂದರು ಭಾರತೀಯರು ಎಂದಿಗೂ ಭಾರತದ ಮಹಿಮೆಯನ್ನು ಹಾಗೂ ಜವಾಬ್ದಾರಿಯನ್ನು ಮರೆಯದಿರಲೆಂದು ಹೇಳಿರುವ ಈ ಕೆಳಗಿನ ವಾಕ್ಯವನ್ನು ಸದಾ ನೆನಪಿನಲ್ಲಿಡಿ: "ಭಾರತ ರಾಷ್ಟ್ರವು ಸೌಖ್ಯವಾಗಿ ಬದುಕಿದರೆ ಇಡೀ ಜಗತ್ತೇ ನೆಮ್ಮದಿಯಿಂದ ಬದುಕಿರುತ್ತದೆ, ಒಂದು ವೇಳೆ ಭಾರತ ನಾಶವಾದರೆ ಜಗತ್ತೂ ಕೂಡ ನಾಶವಾಗಿ ಹೋಗುತ್ತದೆ". ಅಮೆರಿಕಾದಲ್ಲಿ ಅಂದಿನ ಕ್ರಿಶ್ಚಿಯನ್ನರ ಮತಾಂತರದ ದಾಳಿಗೆ ಪ್ರತಿಯಾಗಿ ಈ ವೀರ ಸನ್ಯಾಸಿ ಉತ್ತರಿಸಿದ್ದ ಸತ್ಯನುಡಿಯನ್ನೇ ಇಂದೂ ಕೂಡ ಉಚ್ಛರಿಸಬೇಕಿದೆ. 'ನಮ್ಮ ಭಾರತದಲ್ಲಿ ಧರ್ಮ ತುಂಬಿ ತುಳುಕುತ್ತಿದೆ, ಸಮಸ್ತ ಜಗತ್ತಿಗೇ ಬೇಕಾಗುವಷ್ಟು ಧರ್ಮ ನಮ್ಮಲ್ಲಿದೆ, ಅದನ್ನು ನೀವೂ ಸಹ ಪಡೆದುಕೊಳ್ಳಿ. ವಾಸ್ತವದಲ್ಲಿ ನೀವು ಸೇವೆ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದರೆ ನಮ್ಮ ದೇಶದ ವೈಜ್ಞಾನಿಕ-ತಾಂತ್ರಿಕ ಶಿಕ್ಷಣಕ್ಕೆ ಮತ್ತಷ್ಟು ಬಲ ತುಂಬಲು ಕೈ ಜೋಡಿಸಿ' ಎಂದು. ಇದೀಗ ಬೇಸಿಗೆ ರಜೆ ಮುಗಿದು ಶಾಲೆಗಳು ಮತ್ತೆ ಆರಂಭವಾಗುತ್ತಿರುವ ಶುಭಗಳಿಗೆ. ನಮ್ಮ ಮನೆಯ ಎಲ್ಲಾ ಮಕ್ಕಳನ್ನು ಹಿಂದೂ ಶಾಲೆಗಳಿಗೆ ಸೇರಿಸಿ ಅವರನ್ನೂ, ಅವರ ಭಾರತೀಯತನವನ್ನು ಉಳಿಸೋಣ. ಒಂದು ವೇಳೆ ಕ್ರಿಶ್ಚಿಯನ್ ಮಿಷನರಿ ಶಾಲೆಗಳ ಬಗ್ಗೆ ತಿಳಿಯದೆ ನಿಮ್ಮ ಮಕ್ಕಳನ್ನು ಆ ಶಾಲೆಗಳಿಗೆ ದಾಖಲಿಸಿದ್ದರೆ ಕೂಡಲೆ ಆ ಪ್ರವೇಶಾತಿಯನ್ನು ರದ್ದುಗೊಳಿಸಿ, ಹಣದ ಬಗ್ಗೆ ಯೋಚಿಸುತ್ತಾ ಕೂರಬೇಡಿ. ಮತ್ತೆ ತಡ ಮಾಡಬೇಡಿ, ಈಗ ಜಾಗೃತರಾದೆರಲ್ಲವೆ? ಇಂದೇ ನಿಮ್ಮ ಮಕ್ಕಳನ್ನು ಹಿಂದೂ ಶಾಲೆಗಳಿಗೆ ಸೇರಿಸಿ. ಹಿಂದೂ ಮಲಗಿದ್ದರೆ ಕುಂಭಕರ್ಣ, ಜಾಗೃತಗೊಂಡು ಎದ್ದರೆ ಭಜರಂಗಬಲಿ ಆಂಜನೇಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿ. ಧರ್ಮೋ ರಕ್ಷತಿ ರಕ್ಷಿತಃ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment