ಹರ್ಷ ಶೋಕಂ ನಿರಂತರಂ.....
ಹರ್ಷ ಶೋಕಂ ನಿರಂತರಂ.....
ಪ್ರತಿಯೊಬ್ಬ ಹಿಂದುವೂ ಶಿವಾಜಿಯಾಗುವ ಕಾಲ ಬಂತು
ಹರ್ಷ ಅವರ ಬಲಿದಾನದ ಮೌಲ್ಯ==ಸಹಸ್ರಾರು ಸಹಸ್ರಾರು ಶಿವಾಜಿ ನಿರ್ಮಾಣ
ಜಾತ್ಯಾತೀತ ದೇಶ ಭಾರತದಲ್ಲಿ ಅಲ್ಪಸಂಖ್ಯಾತ ಹುಡುಗಿಯೊಬ್ಬಳು (ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್) ನೂರಾರು ಹಿಂದೂ ಹುಡುಗರ ಜೈ ಶ್ರೀರಾಮ್ ಘೋಷಗಳ ನಡುವೆಯೂ ಒಬ್ಬಳೇ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾಳೆ. ಬುದ್ಧಿಜೀವಿಗಳ ಭ್ರಮಾಲೋಕದ ಕಲ್ಪನೆಯಲ್ಲಿ ಅಸುರಕ್ಷತೆ ಎಂದೆನಿಸಿಕೊಳ್ಳುವ ಈ ಸನ್ನಿವೇಶದಲ್ಲಿ ಅದಕ್ಕೆ ಸಂಪೂರ್ಣ ವಿರೋಧವಾಗಿ ಅತ್ಯಂತ ಸುರಕ್ಷತೆಯ ಜೊತೆಗೆ ಹೊಸ ಐಫೋನ್, ಲಕ್ಷಾಂತರ ಹಣ ಮುಂತಾದ ಉಡುಗೊರೆಗಳ ಪುರಸ್ಕಾರವನ್ನು ಗಳಿಸಿಕೊಳ್ಳುತ್ತಾಳೆ. ಈ ಸನ್ನಿವೇಶಕ್ಕೆ ವ್ಯತಿರಿಕ್ತವೆಂಬಂತೆ ಹರ್ಷ ಎಂಬ ಶಿವಮೊಗ್ಗದ ಹಿಂದೂ ಯುವಕ ಮತಾಂತರ, ಮೂಲಭೂತವಾದದಂತಹ ಮತಾಂಧತೆಗಳಿಂದ ನಮ್ಮ ಸಂಸ್ಕೃತಿ, ಅಸ್ಮಿತೆಗಳನ್ನು ರಕ್ಷಿಸಲು ಹಿಂದುತ್ವದ ಮಾರ್ಗವನ್ನು ಆಯ್ದುಕೊಂಡಿದ್ದರ ಪರಿಣಾಮ ಸೈತಾನರಿಂದ ಅತ್ಯಂತ ಭಯಾನಕ ಹತ್ಯೆಗೆ ಒಳಗಾಗುತ್ತಾರೆ. ಹಿಂದುತ್ವದ ಸತ್ಯಪಥವನ್ನು ಆರಿಸಿಕೊಂಡವರ ಬಾಳಲ್ಲಿ ಅಬ್ರಹಾಮಿಕ್ ಪಥಗಳ ಮೂಲಭೂತವಾದ, ಮತಾಂಧತೆ, ಭಯೋತ್ಪಾದಕತೆಗಳು ಹೇಗೆ ಮಾರಕಾಸ್ತ್ರಗಳಾಗಿ ಪರಿಣಮಿಸುತ್ತಿವೆ? ಹೇಗೆ ಇವುಗಳು ಭಯಾನಕ ಆಕ್ರಮಣದ ಸೂಚಿಗಳಾಗಿವೆ? ಹಾಗೂ ಇವುಗಳಿಂದ ಸಮಾಜವನ್ನು ರಕ್ಷಿಸಲು ಹಿಂದೂ ವೀರರೇಕೆ ಸಾಮ, ದಾನ, ದಂಡ, ಭೇದ ಎಲ್ಲಾ ಮಾರ್ಗಗಳನ್ನು ಅನುಸರಿಸಬೇಕಾಗಿದೆ? ಒಟ್ಟಿನಲ್ಲಿ ಈಗ ಪ್ರತೀ ಹಿಂದುವೂ ಛತ್ರಪತಿ ಶಿವಾಜಿ ಮಹಾರಾಜರಂತೆ ಧರ್ಮರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಕಾಲ ಬಂದಿದೆಯೇ?
ವಾಸ್ತವದಲ್ಲಿ ಹರ್ಷ ಅವರ ಹತ್ಯೆಗೆ ಏನು ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಈ ಮೇಲಿನ ಕಟುವಾದ ಆದರೆ ಅನಿವಾರ್ಯವಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ. ಅಧಿಕೃತವಾದ ದಾಖಲೆಗಳ ಪ್ರಕಾರ ನಮ್ಮ ರಾಜ್ಯದಲ್ಲಿ ಇದುವರೆವಿಗೂ ಹಿಂದುತ್ವ, ರಾಷ್ಟ್ರೀಯತೆಯ ಧ್ವನಿಯಾಗಿದ್ದ 25 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇನ್ನು ಸಂಪೂರ್ಣ ದೇಶದಲ್ಲಿ ಎಷ್ಟಾಗಿರಬಹುದು, ನೀವೇ ಅಂದಾಜಿಸಿ. ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಾಗಲೆಲ್ಲಾ ಪ್ರತಿಯೊಂದು ಪ್ರಕರಣವನ್ನೂ ಪ್ರತ್ಯೇಕವಾದ ದೃಷ್ಟಿಕೋನದಿಂದ ವಿಶ್ಲೇಷಿಸುತ್ತಾ ಕೇವಲ ಸನ್ನಿವೇಶ ಆಧಾರಿತವಾಗಿ ತನಿಖೆ ಮಾಡುತ್ತಿದ್ದರೆ ಈ ಹತ್ಯೆಗಳ ಚಕ್ರ ಎಂದಿಗೂ ನಿಲ್ಲುವ ಸಂಭವವಿಲ್ಲ. ಏಕೆಂದರೆ ಈ ಪ್ರಕರಣಗಳು ಕೇವಲ ಹತ್ಯೆಯ ಪ್ರಕರಣಗಳಲ್ಲ, ಇವೆಲ್ಲ ಭಯೋತ್ಪಾದನೆಯ ಪ್ರಕರಣಗಳು!! ಈ ಪ್ರಕರಣದ ಅಪರಾಧಿಗಳೆಲ್ಲರೂ ಭಯೋತ್ಪಾದಕರಂತೆ ಇಸ್ಲಾಂ ಮೂಲಭೂತವಾದದಿಂದ ಪ್ರೇರಿತರಾಗಿ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರೇ. ಇಂತಹ ಪ್ರಕರಣಗಳು ಸಂಭವಿಸಿದ ಕೂಡಲೇ ಶೀಘ್ರವಾಗಿ ಇದು ಕೋಮೂವಾದದ ಹತ್ಯೆಯಲ್ಲ, ವೈಯಕ್ತಿಕ ದ್ವೇಷ ಅಥವಾ ಸಾಲ ಅಥವಾ ಪ್ರೇಮ ಎಂಬ ನಾನಾದಿಕ್ಕುಗಳೆಡೆಗೆ ಸಮಾಜದ ಗಮನವನ್ನು ತಿರುಗಿಸಿ ಸತ್ಯವನ್ನು ಮುಚ್ಚಿ ಹಾಕುವ ಸುಲಭ ಆದರೆ ಅತಿ ದೊಡ್ಡ ಮೌಲ್ಯವನ್ನು ತೆರಬೇಕಾದ ದೌರ್ಬಲ್ಯ ಮಾರ್ಗವನ್ನೇ ಸರ್ಕಾರಗಳು, ನ್ಯಾಯಾಲಯಗಳು ಆಯ್ದುಕೊಳ್ಳಲು ನಿರತವಾಗಿರುವಾಗ ಸತ್ಯಪಥದ ಧೀರತ್ವದ ಹಾದಿಯಲ್ಲಿ ಸಾಗಿ ಬಲಿದಾನವಾದ ಮಹಾನ್ ಜೀವಗಳಿಗೆ ನ್ಯಾಯ ದೊರಕಿಸಲು ಹೇಗೆ ಸಾಧ್ಯ? ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯಲು ಹೇಗೆ ಸಾಧ್ಯ?
ಹಲವಾರು ವರ್ಷಗಳಿಂದ ಹಿಂದುತ್ವ, ರಾಷ್ಟ್ರೀಯತೆಯ ಮಹೋನ್ನತ ಧ್ಯೇಯದ ಆದರ್ಶವನ್ನು ಪಾಲಿಸಿಕೊಂಡು ಬಂದಿದ್ದ ಹರ್ಷ ಅವರಿಗೆ ವಿರಳಾತಿ ವಿರಳವಾಗುತ್ತಿರುವ ಪಾಶ್ಚಿಮಾತ್ಯ ದಾಸ್ಯದಿಂದ ಮುಕ್ತವಾದ ಸ್ವದೇಶಾಭಿಮಾನದ ಆತ್ಮನಿರ್ಭರ ವ್ಯಕ್ತಿತ್ವವೇ ಮುಳುವಾಯಿತೆ? ಪ್ರತ್ಯೇಕತಾವಾದ, ವಿಸ್ತಾರವಾದದ ರಾಜಕೀಯ ಧೋರಣೆಯನ್ನೇ ಹೊಂದಿರುವ ಅಬ್ರಹಾಮಿಕ್ ಮತಗಳಿಂದ ಮಾನವ ಜೀವನದ ಅತ್ಯವಶ್ಯಕ ಸಂಗತಿಗಳಾದ ಸ್ವಾತಂತ್ರ್ಯ, ಆತ್ಮನಿರ್ಭರತೆ, ಸತ್ಯ, ಜ್ಞಾನಗಳನ್ನು ಸಂರಕ್ಷಿಸಲು ಅದೇ ರಾಜಕೀಯ ಮಾರ್ಗದಲ್ಲಿ ಪ್ರಯೋಗಿಸಲಾಗುತ್ತಿರುವ ನಮ್ಮ ರಾಷ್ಟ್ರದ ಪ್ರಮುಖ ಅಸ್ತ್ರ ಹಿಂದುತ್ವ ಹಾಗೂ ರಾಷ್ಟ್ರೀಯತೆ. ಭಯೋತ್ಪಾದಕತೆ, ಮತಾಂಧತೆ, ಮತಾಂತರಗಳೆಂಬ ಮಾನವ ಜೀವನಕ್ಕೆ ಅಂಟಿರುವ ಕಳಂಕದ ಹಾಗೂ ಹಿಂದುತ್ವ, ರಾಷ್ಟ್ರೀಯತೆಗಳೆಂಬ ಮಾನವ ಜೀವನಕ್ಕೆ ದೊರೆತಿರುವ ಕಳಂಕ ನಿವಾರಣಾ ಶಕ್ತಿ ಅಸ್ತ್ರಗಳ ನಡುವೆ ನಡೆಯುತ್ತಿರುವ ಈ ಸಂಘರ್ಷದಲ್ಲಿ ಜೀವಜಗತ್ತಿನ ಬೆಳವಣಿಗೆ ಮುಂದುವರಿಯಬೇಕೆಂದು ನೀವು ಆಶಿಸಿದರೆ ಹಿಂದುತ್ವ-ರಾಷ್ಟ್ರೀಯತೆಗೆ ಸಂಪೂರ್ಣ ಬೆಂಬಲವನ್ನು ನೀಡಬೇಕಾಗುತ್ತದೆ. ಒಂದು ವೇಳೆ ಈ ಅನಿವಾರ್ಯತೆಯ ಸಂದರ್ಭದಲ್ಲಿ ಇದನ್ನು ಅರ್ಥಮಾಡಿಕೊಳ್ಳಲಾಗದೆ ಬುದ್ಧಿಜೀವಿಗಳ ಭ್ರಮಾಲೋಕದ ಅವಾಸ್ತವಿಕ, ಉಚಿತ ಭೋದನೆಗಳಿಗೆ ಬಲಿಪಶುಗಳಾದರೆ ಇದುವರೆವಿಗೂ ಸಾಧಿಸಿರುವ ವೈಜ್ಞಾನಿಕ ಪ್ರಗತಿ, ಆಧ್ಯಾತ್ಮಿಕ ಉನ್ನತಿಗಳಿಗೆಲ್ಲಾ ಕೊಳ್ಳಿ ಇಟ್ಟು ಮಧ್ಯಯುಗದ 5ನೆ ಶತಮಾನಕ್ಕೆ ಹಿಂತಿರುಗಬೇಕಾಗುತ್ತದೆ. ಈ ಗಂಭೀರ ಸಂಗತಿ ನಮ್ಮ ಹಿಂದೂಗಳ ಜೊತೆಗೆ ಅನ್ಯರಾದರೂ ಭಾರತೀಯ ಸಂಸ್ಕೃತಿಯನ್ನು ಆರಾಧಿಸುವ ದೇಶಭಕ್ತರಿಗೆ ಅರ್ಥವಾಗಿಲ್ಲದಿರಬಹುದು. ಆದರೆ ಮತಾಂಧರಿಗಂತೂ ನೂರಕ್ಕೆ ನೂರು ಪ್ರತಿಶತ ಅರ್ಥವಾಗಿದೆ, ಅವರಿಗೆ ಇನ್ನು ಯಾವುದೇ ಸಂಶಯ ಉಳಿದಿಲ್ಲ. ಆದ್ದರಿಂದಲೇ ಅಂದಿನಿಂದ ಇಂದಿನವರೆಗೆ ಸತತವಾಗಿ ಹಿಂದುತ್ವ, ರಾಷ್ಟ್ರೀಯತೆಯ ಆದರ್ಶಕ್ಕೆ ನಿರ್ಭಯ ಧ್ವನಿಯಾಗುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಯೋಜನಾಬದ್ಧವಾಗಿ ಹತ್ಯೆ ಮಾಡುವ ಮೂಲಕ ಭಯೋತ್ಪಾದನಾ ದಾಳಿ ನಡೆಸುತ್ತಿದ್ದಾರೆ.
26 ವರ್ಷದ ಹರ್ಷ ಅವರಂತಹ ತೇಜಸ್ವಿ ಯುವ ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಲು ಇಂತಹ ಅಮಾನವೀಯ ಮತಾಂಧ ರಾಕ್ಷಸರಿಗೆ ಮಾತ್ರ ಸಾಧ್ಯ! ಯಾವ ಯುವ ಚೈತನ್ಯದ ಬೆಳಕು ಎಲ್ಲೆಡೆ ಹರ್ಷವನ್ನು ಹರಡುತ್ತಾ ತನ್ನ ಮಾತೃಭೂಮಿ, ಮಾತೃಧರ್ಮದ ಉದ್ಧಾರಕ್ಕಾಗಿ ಕಾರ್ಯಪ್ರವೃತ್ತವಾಗಿತ್ತೊ ಆ ಉಜ್ವಲ ಬೆಳಕನ್ನು ಬಲವಂತವಾಗಿ, ಅನ್ಯಾಯವಾಗಿ ಹೇಡಿಗಳಂತೆ ನಂದಿಸಲಾಯಿತು. ಪುತ್ರಶೋಕಂ ನಿರಂತರಂ ಎಂಬುದನ್ನು ಮೀರಿ ತಮ್ಮ ಜೀವನದಲ್ಲಿ ಆಗಮಿಸುತ್ತಿದ್ದ ಎಲ್ಲರ ಬಾಳಲ್ಲಿ ಹರ್ಷವನ್ನೇ ತರುತ್ತಿದ್ದ ಈ ದೇಶದ ಮಗನ ಹತ್ಯೆ 'ಹರ್ಷಶೋಕಂ ನಿರಂತರಂ' ಎಂಬಂತಾಗಿದೆ. ಏಕೆಂದರೆ ನಮ್ಮ ಬಾಳಿನ ಶೋಕವನ್ನು ಕಳೆಯುವುದು ಹರ್ಷ, ಹರ್ಷವೇ ಶೋಕ ನೀಡಲು ಆರಂಭಿಸಿದರೆ ಅದಕ್ಕೆ ಅಂತ್ಯವಿರುವುದಿಲ್ಲ. ಮನೆಯ ಒಬ್ಬನೇ ಒಬ್ಬ ಮಗನನ್ನು ಇಷ್ಟು ನಿರ್ದಾಕ್ಷಿಣ್ಯವಾಗಿ, ಬರ್ಬರವಾಗಿ, ಅಮಾನುಷವಾಗಿ ಕೊಂದಿರುವ ಆಸಿಫ್ ಉಲ್ಲಾ ಖಾನ್, ರಿಯಾನ್ ಶರೀಫ್, ಅಬ್ದುಲ್ ಅಫಾನ್, ಮೊಹಮ್ಮದ್ ಖಾಸಿಫ್, ಸೈಯದ್ ನದೀಮ್, ನಿಹಾನ್ ಎಂಬ ರಾಕ್ಷಸರಿಗೆ ಅವರದೇ ರೀತಿಗಿಂತಲೂ ಬರ್ಬರವಾದ ನಿಕೃಷ್ಟವಾದ ಶಿಕ್ಷೆಯನ್ನು ವಿಧಿಸಬೇಕು. ಒಂದಲ್ಲ ಎರಡಲ್ಲ ಸಾಲು ಸಾಲಾಗಿ ಅದು ಯಾವ ಧೈರ್ಯದ ಮೇಲೆ ಹಿಂದೂ ಕಾರ್ಯಕರ್ತರನ್ನು ಸಾಮಾನ್ಯ ಕಾರ್ಯದಂತೆ ಹತ್ಯೆ ಮಾಡುತ್ತಾ ಬಂದಿದ್ದಾರೆ? ಬೇಕಾದಾಗ ಸ್ವಯಂಘೋಷಿತ ಸಂವಿಧಾನ ಪಂಡಿತರಾಗಿ ಅಪರಾಧದಿಂದ ಮುಕ್ತಿ ಹೊಂದಲು ಬಲಿಪಶುವಾದವರಂತೆ ನಾಟಕವಾಡುವ, ಬೇಡವಾದಾಗ ಶರಿಯಾ ಕಾನೂನಿನ ಪಂಡಿತರಾಗಿ ತಮಗೇ ಪ್ರತ್ಯೇಕ ಕಾನೂನು ಎಂದು ಬೋರ್ಡ್ ಹಾಕಿಕೊಳ್ಳುವ ಎರಡು ಮುಖದ ವ್ಯಕ್ತಿಗಳಿಂದ ದೇಶದ ಕಾನೂನು ಸುವ್ಯವಸ್ಥೆ ಬಗೆಗೆ ಗೌರವ ಹೊಂದಿರುವ ಆಶಾಭಾವನೆಯನ್ನು ನಿರೀಕ್ಷಿಸುವುದು ಅಕ್ಷಮ್ಯ ಅಪರಾಧ! ಹೈಕೋರ್ಟ್ ನ ಮಧ್ಯಂತರ ಆದೇಶವನ್ನೂ ಮೀರಿ ಹಿಜಾಬ್ ಧರಿಸುತ್ತಿರುವ ಹಾಗೂ ಅಂತಿಮ ಆದೇಶ ಏನಾದರೂ ಸರಿ ನಾವು ಹಿಜಾಬ್ ಧರಿಸಿಯೇ ಶಾಲಾ-ಕಾಲೇಜಿಗೆ ಬರುತ್ತೇವೆ ಎನ್ನುತ್ತಿರುವವರ ಮಾನಸಿಕತೆಯೇ ಇದಕ್ಕೆ ಸ್ಪಷ್ಟ ನಿದರ್ಶನ. ಪ್ರತೀ ಬಾರಿಯೂ ತಮ್ಮ ಪ್ರೊಪಗ್ಯಾಂಡಗಳ ವರ್ಧನೆಗಳಿಗನುಗುಣವಾಗಿ ಧ್ವನಿಯೆತ್ತುವ ಜಾತ್ಯಾತೀತವಾದಿಗಳು ಹತ್ಯೆಯಂತಹ ಗಂಭೀರ ಪ್ರಕರಣವಾದಾಗ ಅದಕ್ಕೆ ಬಲಿಪಶುವಾದ ವ್ಯಕ್ತಿಯು ಅಲ್ಪಸಂಖ್ಯಾತರಾಗಿದ್ದರೆ ಅವರ ಬಗ್ಗೆ ಕರುಣಾಜನಕ, ಭಾವಪರವಶ ಮಾತುಗಳನ್ನಾಡುವ ಅಥವಾ ಲೇಖನಗಳನ್ನು ಬರೆಯುವ ಕೆಲಸವನ್ನು ಮಾಡುತ್ತಾರೆ ಹಾಗೂ ಒಂದು ವೇಳೆ ಬಲಿಪಶುವಾದ ವ್ಯಕ್ತಿಯು ಹಿಂದುವಾಗಿದ್ದಾರೆ ಅವರ ಬಗ್ಗೆ ಸಂದೇಹಾಸ್ಪದ, ಭಾವ ವಿಹೀನ ಮಾತುಗಳನ್ನಾಡಿ ಬರೆದು ಅವರ ಕೊಲೆಗೆ ಅವರೇ ಕಾರಣ ಎಂದು ಯಾರೂ ಕೇಳದಿದ್ದರೂ ತಮ್ಮ ಸಿದ್ಧ ತೀರ್ಪನ್ನು ನೀಡುತ್ತಾರೆ. ಹರ್ಷ ಅವರ ಪ್ರಕರಣದಲ್ಲೂ ಇದೇ ರೀತಿ ಅವರ ಮೇಲೆ ಹಲವಾರು ಕ್ರಿಮಿನಲ್ ಕೇಸ್ ಗಳಿದ್ದವು, ಆತನ ಸಾಮಾಜಿಕ ಜಾಲತಾಣದ ಪೋಸ್ಟ್ ಗಳು ಪ್ರಚೋದಕವಾಗಿದ್ದವು ಹಾಗೆ ಹೀಗೆ ಎಂದು ಸಾರುತ್ತಾರೆ. ಹಾಗೆಯೇ ಟ್ವಿಟ್ಟರ್ ನಲ್ಲಿ ಈ ಕೃತ್ಯ ಯೋಜನಾಬದ್ಧವೇ ಎಂದು ಸ್ಪಷ್ಟವಾಗಿ ನಮ್ಮಂತಹ ಜಾಗೃತ ಹಿಂದುತ್ವವಾದಿಗಳಿಗೆ ಅರ್ಥವಾಗುವಂತೆ ಆದರೆ ಸಮಾಜದೆದುರು ಅಪರಾಧಿಗಳ ಜಾಡು ಸಿಗದಿರಲೆಂದು #SaveShimoggaMuslims ಎಂದು ಟ್ರೆಂಡ್ ಮಾಡುತ್ತಾರೆ. ಈ ಪ್ರಪಂಚಕ್ಕೆ ಕೊರೊನಾ ಅಲ್ಲ, ಕೊರೊನಾದಂತಹ ಸಾವಿರ ರೋಗಗಳು ಬಂದರೂ ವ್ಯಾಕ್ಸಿನ್ ಕಂಡು ಹಿಡಿದು ಗುಣಪಡಿಸಬಹುದೇನೊ, ಆದರೆ ಈ ಬುದ್ಧಿಜೀವಿಗಳಿಗೆ ಬಂದಿರುವ ಭ್ರಮಾರೋಗಕ್ಕೆ ವ್ಯಾಕ್ಸಿನ್ ಅನ್ನು ಕಂಡು ಹಿಡಿಯುವುದು ಅಸಂಭವ! ಹರ್ಷ ಅವರ ಮೇಲೆ ಕ್ರಿಮಿನಲ್ ಕೇಸ್ ಗಳಿದ್ದವು ಎಂದು ಹೇಳುತ್ತಿದ್ದೀರಲ್ಲ ಯಾವ ಭಜರಂಗದಳದ ಸಕ್ರಿಯ ಕಾರ್ಯಕರ್ತನ ಮೇಲೆ ಕೇಸ್ ಗಳಿಲ್ಲ ನೀವೇ ಹೇಳಿ. ಭಜರಂಗದಳದವರ ಮೇಲೆ ಕೇಸ್ ಹಾಕುವುದು ಸುಲಭ. ಏಕೆಂದರೆ ಅವರು ಈ ನೆಲದ ಕಾನೂನನ್ನು ಗೌರವಿಸುತ್ತಾರೆ, ಮತಾಂಧರಂತೆ ಅಗೌರವವನ್ನು ತೋರುವುದಿಲ್ಲ. ಹಿಂದೂ ಎಂದು ಹೆಮ್ಮೆಯಿಂದ ತನ್ನ ಅಸ್ತಿತ್ವದ ಬಗ್ಗೆ ಅಭಿಮಾನ ತೋರುವ ಹಿಂದುತ್ವವಾದಿಗಳನ್ನು ಹೇಡಿಗಳಂತೆ ಹತ್ಯೆ ಮಾಡಿ ಹಿಂದುತ್ವದ ಶಕ್ತಿಯನ್ನು ಕಡಿಮೆ ಮಾಡುತ್ತೇವೆ ಎಂದು ಹೀಗೆ ಅಮಾನವೀಯ ಕೃತ್ಯವನ್ನೆಸಗುತ್ತಿರುವ ಸೈತಾನರಿಗೆ ಹರ್ಷ ಅವರ ತಾಯಿ ಸೇರಿದಂತೆ ಹುತಾತ್ಮರ ತಾಯಂದಿರು ಹೇಳಿರುವ 'ತಮ್ಮ ಮಕ್ಕಳ ಬಲಿದಾನ ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ' ಎಂಬ ಹೇಳಿಕೆಯೇ ತಿರುಗುಬಾಣ. ಆದರೆ ಇನ್ನೆಷ್ಟು ಬಲಿದಾನ? ಎಂಬುದೇ ಈಗಿನ ಗಾಢವಾದ ಪ್ರಶ್ನೆ. ತಮ್ಮ ಮನೆಯ ಮಕ್ಕಳು ದೇಶಕ್ಕಾಗಿ, ಧರ್ಮಕ್ಕಾಗಿ ಬಲಿದಾನವಾದ ನಂತರ ಮತ್ತೆ ಇನ್ನ್ಯಾರ ಮನೆಯವರಿಗೂ ಈ ಸ್ಥಿತಿ ಬರದಿರಲಿ ಇದೇ ಕೊನೆಯ ಪ್ರಕರಣವಾಗಲಿ ಎಂಬುದೇ ಅವರೆಲ್ಲರ ಮನದಾಳದ ಶೋಕಭರಿತ ಮಾತು. ನಾವು ನೀವು ಅವರ ಮನೆಯವರೇ ಎಂದೆಲ್ಲಾ ಎಷ್ಟೇ ಸಂತೈಸಿದರೂ ಎಷ್ಟೇ ಧನ ಸಹಾಯ ಮಾಡಿದರೂ ಅವರ ದುಃಖ ಕೊನೆಯಾಗುವುದೆ? ಹಾಗಾದರೆ ಈ ಭಯಾನಕ ರಾಕ್ಷಸೀ ಪ್ರವೃತ್ತಿಯ ಮತಾಂಧರ ವಿರುದ್ಧ ಹೇಗೆ ಹೋರಾಡುವುದು? ಸರ್ಕಾರದ ಮೇಲೆ ಸಕಲ ಭಾರವನ್ನು ಹಾಕಿ ಸುಮ್ಮನಾಗಬೇಕೆ? ಸರ್ಕಾರವನ್ನು ಶಪಿಸುತ್ತಾ ನಾವು ಮಾತ್ರ ರಾಜಕೀಯದ ಚಕ್ರವ್ಯೂಹಕ್ಕಿಳಿದು ಭೇದಿಸದೆ ಸರಳ ಸಾಮಾಜಿಕ ಕಾರ್ಯಕರ್ತರಾಗಿ ಉಳಿದುಬಿಡಬೇಕೆ? ಹಿಂದುತ್ವದ ಆಧಾರದ ಮೇಲೆ ಬೆಳೆದು ಅಧಿಕಾರಕ್ಕೇರಿದ ಭಾಜಪಾ ಸರ್ಕಾರದ ಆಡಳಿತದಲ್ಲೂ ಹೀಗೆ ನಡೆದಿರುವುದು ದುರಂತವಾಗಿರುವಾಗ ಸರ್ಕಾರವನ್ನು ಪ್ರಶ್ನಿಸುವುದು, ತರಾಟೆಗೆ ತೆಗೆದುಕೊಳ್ಳುವುದು ಖಂಡಿತಾವಾಗಿಯೂ ಸರಿ. ಆದರೆ ಕೇವಲ ಅಷ್ಟರಲ್ಲೇ ಮಗ್ನರಾಗುವುದು ಎಷ್ಟು ಸರಿ? ದೇಶವಿರೋಧಿಗಳ, ಧರ್ಮವಿರೋಧಿಗಳ ಆರ್ಥಿಕ ವ್ಯವಸ್ಥೆ, ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ವ್ಯವಸ್ಥೆ ಬೃಹತ್ತಾಗಿ ಬೆಳೆದಿರುವಾಗ ಅವರ ವಿರುದ್ಧ ಹೋರಾಡಲು ಸರ್ಕಾರಕ್ಕೆ ಮತ್ತಷ್ಟು ಶಕ್ತಿ ತುಂಬಬೇಕಾದ ಅವಶ್ಯಕತೆಯಿದೆ. ಇತ್ತೀಚೆಗೆ ಪ್ರಧಾನಮಂತ್ರಿ ಮೋದಿ ಅವರು ಭಾವುಕರಾಗಿ ಮಾತನಾಡಿ ಐತಿಹಾಸಿಕ ಕೃಷಿ ಕಾನೂನುಗಳನ್ನು ಹಿಂಪಡೆದದ್ದು ಇದಕ್ಕೆ ಪುಷ್ಟಿ ನೀಡುತ್ತದೆ. ರಾಜಕೀಯ ಚದುರಂಗದಾಟ ಅಥವಾ ಅಧಿಕಾರದಾಟ ಬೇಡವೆಂದು ಅದರಿಂದ ದೂರ ಸರಿದು ಸಂಘ-ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಹಿಂದುತ್ವವಾದಿ-ರಾಷ್ಟ್ರವಾದಿ ಮುಖಂಡರು ರಾಜಕೀಯ ನಾಯಕರಾಗಬೇಕಾದ ಸಂದರ್ಭ ಈಗ ಬಂದಿದೆ.
ಛತ್ರಪತಿ ಶಿವಾಜಿ, ಶ್ರೀಕೃಷ್ಣದೇವರಾಯ, ಗುರು ಗೋವಿಂದ್ ಸಿಂಗ್, ಮಹಾರಾಣಾ ಪ್ರತಾಪ್ ರಿಂದ ಹಿಡಿದು ಇಂದಿನ ನರೇಂದ್ರ ಮೋದಿ, ಯೋಗಿ ಆದಿತ್ಯನಾಥರಂತಹ ಪ್ರಖ್ಯಾತ ದೇಶಭಕ್ತ ಧರ್ಮವೀರ ದೊರೆಗಳು ಹಿಂದೂ ಸಂಸ್ಥಾನವನ್ನು ಬೆಳೆಸಿ ಈ ಮಾತೃಭೂಮಿಯನ್ನು ರಕ್ಷಿಸದೆ, ಈ ರಾಜಕೀಯ ತಲೆಶೂಲೆಯೆಲ್ಲಾ ನಮಗೆ ಏಕೆ? ನಮ್ಮ ಪಾಡಿಗೆ ನಾವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜವಾಬ್ದಾರಿ-ಅಧಿಕಾರಗಳಿಂದ ಮುಕ್ತರಾಗಿ ಬಿಡೋಣ ಎಂದು ತೀರ್ಮಾನಿಸಿದ್ದರೆ ನಮ್ಮ ಅಸ್ತಿತ್ವ ಉಳಿಯುತ್ತಿತ್ತೆ? ಹರ್ಷ ಅವರ ಹತ್ಯೆಗೆ ಪ್ರತೀಕಾರ ಎಂದರೆ ಸಾವಿರ ಸಾವಿರ ಶಿವಾಜಿ ನಿರ್ಮಾಣ! ಸೈತಾನರ ವಿರುದ್ಧ ಹೋರಾಡಬೇಕಾದ ಧೀರರ ನಿರ್ಮಾಣ ಎಂದರೆ ಭೌತಿಕ, ಮಾನಸಿಕ, ಆಧ್ಯಾತ್ಮಿಕ ಎಲ್ಲಾ ಸ್ತರಗಳಲ್ಲೂ ಸಾಧಿಸಬೇಕಾದ ಸಬಲೀಕರಣ. ಇಲ್ಲಿ ಶಿವಾಜಿ ಮಹಾರಾಜರನ್ನೇ ನಿರ್ದಿಷ್ಟವಾಗಿ ಉದಾಹರಿಸಿರಲು ಕಾರಣ, ಅವರು ಧರ್ಮಪಾಲಕ ರಾಜರಂತೆ ರಾಷ್ಟ್ರದ ಕಾಠಿಣ್ಯಾತಿ ಕಾಠಿಣ್ಯ ಸಮಯದಲ್ಲೂ ಧರ್ಮಪಾಲನೆ ಮಾಡುತ್ತಾ ಶತ್ರುಗಳಿಗೆ ದಯೆ ತೋರುವ ಮೂಲಕ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವ ಕಾರ್ಯವನ್ನು ಮಾಡಲಿಲ್ಲ, ಬದಲಾಗಿ ಧರ್ಮಮಾರ್ಗದಲ್ಲೇ ತಿಳಿಸಿದ್ದಂತೆ ಕಠಿಣ ಸಂದರ್ಭದಲ್ಲಿ ಆಪತ್ ಧರ್ಮವನ್ನು ಪಾಲಿಸಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಸಾಹಸವನ್ನು ಮಾಡಿದರು. ಬನ್ನಿ ನಾವೆಲ್ಲರೂ ಈ ಭಾರತ ಭೂಮಿಯ ಶ್ರೇಷ್ಠತೆಯನ್ನು ಅರಿತುಕೊಂಡು ಅದರಲ್ಲಿ ಬದುಕಲು ಯೋಗ್ಯವಾದ ಪ್ರಜೆಗಳಾಗೋಣ ಮತ್ತು ಧೀರರಾಗಿ ಸತ್ವ, ಕ್ಷಾತ್ರಗಳ ಸಮನ್ವಯದಿಂದ ನಮ್ಮ ಸಂಸ್ಕೃತಿಯನ್ನು ಬೆಳೆಸೋಣ.
~ಸಿಂಚನ.ಎಂ.ಕೆ ಮಂಡ್ಯ
Comments
Post a Comment