ಮೋದಿ ಹಂತಕ, ಶಾ ಕಿರಾತಕ, ಯೋಗಿ ಮಾಂತ್ರಿಕ: 2024- ಟೂಲ್ ಕಿಟ್

ಮೋದಿ ಹಂತಕ, ಶಾ ಕಿರಾತಕ, ಯೋಗಿ ಮಾಂತ್ರಿಕ: 2024- ಟೂಲ್ ಕಿಟ್ 
ಹೌದೇ, 2024ರ ಟೂಲ್ ಕಿಟ್ ಆಗಲೇ ರೆಡಿಯಾಗಿದ್ಯಾ? ಸತ್ಯ ಖಚಿತವಾಗಿಯೂ ಹೌದು ಎಂದು ಸಾಬೀತುಪಡಿಸುತ್ತಿದೆ ದೇಶವಿರೋಧಿ ಒಕ್ಕೂಟದ ಇತ್ತೀಚಿನ ಬೆಳವಣಿಗೆಗಳು! 2024 ದೇಶಭಕ್ತರು ಹಾಗೂ ದೇಶವಿರೋಧಿಗಳು ಇಬ್ಬರ ಪಾಲಿಗೂ ಅತಿ ಮುಖ್ಯವಾದ ವರ್ಷ. 2024ಕ್ಕೆ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದಲ್ಲಿ ಲೋಕಸಭೆ ಚುನಾವಣೆ ಜರುಗಲಿದೆ. ಅದಲ್ಲ ಕಣ್ರೀ ಈ ಚುನಾವಣೆಗಳು ಬಂದರೆ ಸಾಕು, ವಿವಿಧ ವಿಚಾರ-ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳವರು ಯಾಕಷ್ಟು ಜಟಾಪಟಿ ಮಾಡುತ್ತಾರೆ, ರಾಜಕೀಯ ಅಧಿಕಾರಕ್ಕಾಗಿ ಯಾಕಷ್ಟು ಗುದ್ದಾಡಿ ಕೊಳ್ಳುತ್ತಾರೆ? ಆ ಅಧಿಕಾರದಲ್ಲಿ ಅಂಥದ್ದೇನಿದೆ? ನೀವು ಇಷ್ಟ ಪಡಿ ಅಥವಾ ಪಡದಿರಿ, ರಾಜಕೀಯದಲ್ಲಿ ನೀವು ಆಸಕ್ತಿ ವಹಿಸಿ ಅಥವಾ ವಹಿಸದಿರಿ ಅದು ನಿಮ್ಮ ದಿನನಿತ್ಯದ ಜೀವನದಲ್ಲಿ ಒಂದಲ್ಲಾ ಒಂದು ತೆರನಾಗಿ ಪರಿಣಾಮವನ್ನು ಬೀರುತ್ತದೆ. ಆದ್ದರಿಂದಲೇ ಮೊಘಲರು, ಪಠಾಣರು, ಪೋರ್ಚುಗೀಸರು, ಬ್ರಿಟಿಷರು ಮುಂತಾದ ವಿದೇಶಿ ಆಕ್ರಮಣಕಾರರು ನಮ್ಮ ರಾಜಕೀಯ ಅಧಿಕಾರವನ್ನು ಕಸಿದುಕೊಂಡಾಗಲೆಲ್ಲಾ ಅದರ ವಿರುದ್ಧ ಸಿಡಿದೆದ್ದು ನಾವು ಸ್ವಾತಂತ್ರ್ಯ ಹೋರಾಟವನ್ನು ಮಾಡಿದ್ದು! ಈ ವಿದೇಶಿ ಆಕ್ರಮಣಕಾರರು ನಮ್ಮ ತಾಯ್ನಾಡನ್ನು ಅವರ ದೇಶದಂತೆ (ಅವರ ಸಂಸ್ಕೃತಿಯಂತೆ) ಪರಿವರ್ತಿಸಲು ಹೊರಟಾಗ ಛತ್ರಪತಿ ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್, ಗುರು ಗೋವಿಂದ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಹೋರಾಟಗಾರರು ಭಾರತವನ್ನು ಭಾರತವಾಗಿಯೇ ಉಳಿಸಲು ಅಂದರೆ ನಮ್ಮ ಸಂಸ್ಕೃತಿಯನ್ನು ಉಳಿಸಲು ಸಂಘರ್ಷ ಮಾಡಿದ್ದರಿಂದ ಅವರನ್ನು ಇಂದಿಗೂ ನಾವು ಆರಾಧಿಸುತ್ತಿರುವುದು! ಮಹರ್ಷಿ ಅರವಿಂದರ ವಾಣಿಯಂತೆ "ರಾಜಕೀಯ ಸ್ವಾತಂತ್ರ್ಯವು ರಾಷ್ಟ್ರದ ಉಸಿರು. ಈ ರಾಜಕೀಯ ಸ್ವಾತಂತ್ರ್ಯವನ್ನು ಮೊದಲಾಗಿ ಮತ್ತು ಅಗ್ರಗಣ್ಯವಾಗಿ ಗುರಿಯಾಗಿಸಿ ಸಾಧಿಸದೆ ಸಾಮಾಜಿಕ ಸುಧಾರಣೆ, ಶೈಕ್ಷಣಿಕ ಸುಧಾರಣೆ, ಕೈಗಾರಿಕಾ ವಿಸ್ತರಣೆ, ಜನಾಂಗದ ನೈತಿಕ ಸುಧಾರಣೆಗಳಿಗೆ ಪ್ರಯತ್ನಿಸುವುದು ಅಜ್ಞಾನ ಮತ್ತು ನಿರರ್ಥಕತೆಯ ಪರಮಾವಧಿಯಾಗಿದೆ." ಮಾನವ ಜನಾಂಗ ಜೀವಂತವಾಗಿರುವವರೆಗೂ ರಾಜಕೀಯ ಸ್ವಾತಂತ್ರ್ಯದ ಹೋರಾಟವೂ ಜೀವಂತವಾಗಿರುವುದು.

ಅಂದು ನಮ್ಮ ಪೂರ್ವಜರು ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಟ ಮಾಡುತ್ತಿದ್ದಾಗಲೂ ಶತ್ರುಗಳ ಜೊತೆ ನಿಂತು ಬೆನ್ನಿಗೆ ಚೂರಿ ಹಾಕಿದ ಗದ್ದಾರ್ ಗಳು (ದೇಶದ್ರೋಹಿಗಳು) ಇದ್ದರು, ಈಗಲೂ ಇದ್ದಾರೆ. ಈಗ ಆ ಗದ್ದಾರ್ ಗಳ ಸಂತಾನವು ಬಿಬಿಸಿ (ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್) ಪರ ನಿಂತಿವೆ. ಬ್ರಿಟಿಷರೇನೊ ಭೌತಿಕವಾಗಿ 1947ರಲ್ಲಿ ನಮ್ಮ ದೇಶದಿಂದ ಕಾಲ್ಕಿತ್ತರು, ಆದರೆ ಹೊರಡುವಾಗ ತಾವೇ ಮೆಕಾಲೆ ಶಿಕ್ಷಣ ಪದ್ಧತಿಯಿಂದ ನಿರ್ಮಿಸಿದ ಶರೀರದಿಂದ ಭಾರತೀಯರಾಗಿ ಬುದ್ಧಿಯಿಂದ ಬ್ರಿಟಿಷರಾಗಿದ್ದ ಕಪ್ಪು ಬ್ರಿಟಿಷರ ಮೆದುಳನ್ನು ಅವರೊಡನೆ ಕೊಂಡೊಯ್ದರು. ಮೇರೆ ಪ್ಯಾರೆ ದೇಶವಾಸಿಯೋ ವಸಾಹತು ಶಾಹಿ ಮನಸ್ಥಿತಿಯಿಂದ ಸಂಪೂರ್ಣ ಮುಕ್ತರಾಗಿ, ಆತ್ಮನಿರ್ಭರತೆಯಿಂದ ದೇಶವನ್ನು ಕಟ್ಟಿ ಬೆಳೆಸಿ ಎಂದು ಪ್ರಧಾನಮಂತ್ರಿಗಳಾದ ಪೂಜ್ಯ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಎಷ್ಟೇ ಬಗೆಯಾಗಿ ಹೇಳಿದರೂ ಇವರಿಗೆ ಅರ್ಥವಾಗುವುದಿಲ್ಲ. ಅಯ್ಯೋ ಬಿಡಿ, ಇವರೆಲ್ಲಾ ಮೋದೀಜಿ ಅವರ ಭಾಷಣದಲ್ಲಿ ಅವರನ್ನು ಕೋಮುವಾದಿ, ಸರ್ವಾಧಿಕಾರಿ ಎಂದು ಬಿಂಬಿಸಲು ಯಾವುದಾದರೂ ಶಬ್ದಗಳು ಸಿಗುತ್ತವೆಯೇ ಎಂದಷ್ಟೇ ಹುಡುಕುತ್ತಿರುತ್ತಾರೆ. ಇಂತಹ ಮನಸ್ಥಿತಿ ಹೊಂದಿರುವುದರಿಂದಲೇ ಇಂದು ಇವರೆಲ್ಲಾ ಯಾವುದೋ ದೇಶ ಅದರಲ್ಲೂ 2 ಶತಮಾನಗಳ ಕಾಲ ನಮ್ಮ ಮೇಲೆ ನಿರಂತರ ದೌರ್ಜನ್ಯವೆಸಗಿ ಆಳ್ವಿಕೆ ಮಾಡಿದಂತಹ ಬ್ರಿಟಿಷರ ದೇಶದ ಬಿಬಿಸಿ ಸುದ್ದಿವಾಹಿನಿಯು ಎಂದಿನಂತೆ ತಮ್ಮ ಹಿಂದೂ ವಿರೋಧಿ, ಭಾರತ ವಿರೋಧಿ ಪ್ರೋಪಗ್ಯಾಂಡವನ್ನು ಬಿತ್ತರಿಸಲು ಹಿಂದೂ ಸಂಸ್ಕೃತಿಯ ಭಾರತ ದೇಶದ ರಕ್ಷಣೆಗೆ ಕಟಿಬದ್ಧವಾಗಿರುವ ಮಹಾ ರಾಜಕೀಯ ಶಕ್ತಿ ಮೋದೀಜಿ ಅವರ ವಿರುದ್ಧ ಬಿಡುಗಡೆ ಮಾಡಿರುವ ಗೋದ್ರಾ ಹತ್ಯಾಕಾಂಡದ ಬಗೆಗಿನ 'ಇಂಡಿಯಾ: ದ ಮೋದಿ ಕೊಶ್ಶನ್' ಎಂಬ ಡಾಕ್ಯುಮೆಂಟರಿಯನ್ನು ಬೇಷರತ್ತಾಗಿ ಬೆಂಬಲಿಸುತ್ತಿರುವುದು. 20 ವರ್ಷಗಳ ಕಾಲ ನಿರಂತರವಾಗಿ ವಿಪಕ್ಷಗಳಿಂದ ಪ್ರತೀ ಚುನಾವಣೆಯಲ್ಲೂ ಈ ಗೋದ್ರಾ ಹತ್ಯಾಕಾಂಡದ ಬಗೆಗಿನ ಪ್ರಶ್ನೆ, ನಿಂದನೆಗಳ ಆಕ್ರಮಣವನ್ನು ತಮ್ಮ ತಪ, ತಾಳ್ಮೆ, ತಿತಿಕ್ಷೆ ಸ್ವಭಾವದಿಂದ ಎದುರಿಸಿ ಕೊನೆಗೆ ಎಸ್.ಐ.ಟಿ ಹಾಗೂ ಸುಪ್ರೀಂ ಕೋರ್ಟ್ ಎರಡರಿಂದಲೂ ಮೋದಿ ಅವರು ಕ್ಲೀನ್ ಚಿಟ್ ಪಡೆದುಕೊಂಡರು. ಕೇವಲ ಒಂದು ಐಟಿ ರೇಡ್ ನ ವಿಚಾರಣೆಗೆ ಹೆದರಿ ಗುಂಪು ಗುಂಪಾಗಿ ಹೋರಾಟ ಮಾಡಿಕೊಂಡು ಹಾಜರಾಗುವ ರಾಜಕೀಯ ನಾಯಕರ ಮಧ್ಯೆ ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಭರವಸೆಯಿದೆ ಎಂದು ಹೇಳಿ ಎಲ್ಲಾ ರೀತಿಯ ದೀರ್ಘಾವಧಿಯ ವಿಚಾರಣೆಗಳಿಗೆ ಸಹಕರಿಸಿ, ಅಂತಿಮವಾಗಿ ಗೆದ್ದ ಮೇಲೂ ಈಗ ಮತ್ತೆ ಅವರ ಮೇಲೆ ಬಿಬಿಸಿಯ ಡಾಕ್ಯುಮೆಂಟರಿ ಆಕ್ರಮಣವಾಗಿದೆ. ಹೆಲೋ ಬಿಬಿಸಿ ಇಂತಹ ನಾನಾ ಆಕ್ರಮಣಗಳು ಮೋದಿ ಅವರ ಮೇಲೆ ಆದಾಗಲೆಲ್ಲಾ ನಮ್ಮಂತಹ ಕೋಟ್ಯಂತರ ಭಾರತೀಯರ ಮತಾಶೀರ್ವಾದವು ಶ್ರೀರಕ್ಷೆಯಾಗಿ ಅವರನ್ನು ಕಾಪಾಡಿದೆ, ಗೋದ್ರಾ ಹತ್ಯಾಕಾಂಡದ ಗಲಭೆಯನ್ನು ಹತ್ತಿಕ್ಕಲು ಅವರು ಮುಖ್ಯಮಂತ್ರಿಯಾಗಿ ಸಕಲ ಪ್ರಯತ್ನಗಳನ್ನು ಮಾಡಿದ್ದರಿಂದಲೇ ಹಾಗೂ ಅವರು ನಿರ್ದೋಷಿ ಆಗಿರುವುದರಿಂದಲೇ ಇದರ ನಂತರವೂ 2 ಬಾರಿ ಮತ್ತೆ ಗುಜರಾತ್ ನ ಮುಖ್ಯಮಂತ್ರಿಯಾದರು ಹಾಗೂ 2 ಬಾರಿ ದೇಶದ ಪ್ರಧಾನಿಯೂ ಆದರು. 

ಬಿಬಿಸಿಯ ಡಾಕ್ಯುಮೆಂಟರಿಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಧಕ್ಕೆ ಎಂದು ಹೇಳುತ್ತಿರುವ ಮೋದಿ ವಿರೋಧಿಗಳೇ, ನೀವು ಮೋದಿ ಅವರನ್ನು ಎಷ್ಟಾದರೂ ವಿರೋಧಿಸಿ, ನಮ್ಮ ದೇಶದ ಅತಿಯಾದ ಪ್ರಜಾಪ್ರಭುತ್ವ ಸರ್ಕಾರವು ಆ ಅವಕಾಶವನ್ನು ನಿಮಗೆ ನೀಡಿದೆ. ಆದರೆ ನಮ್ಮ ದೇಶದ ಆಂತರಿಕ ವಿಚಾರವಾದ ಸರ್ವೋಚ್ಛ ನ್ಯಾಯಾಲಯದಿಂದ ಇತ್ಯರ್ಥವಾಗಿ ಹೊರಬಂದಿರುವ ತೀರ್ಪಿನ ವಿರುದ್ಧ ನಮ್ಮ ಪ್ರಧಾನಮಂತ್ರಿಯನ್ನು, ನ್ಯಾಯಾಂಗವನ್ನು ಅವಮಾನ ಮಾಡಲು ಈ ಡಾಕ್ಯುಮೆಂಟರಿ ಬಿಡುಗಡೆ ಮಾಡಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದರೆ ಅವರಿಗೆ ಬೆಂಬಲವಾಗಿ ನಿಂತಿದ್ದೀರಲ್ಲ, ಮೋದಿ ಅವರು ನಿಮಗೂ ಪ್ರಧಾನಿಯಲ್ಲವೆ? ನೆಹರು ಅವರು ಪ್ರಧಾನಿಯಾಗಿದ್ದಾಗ ಇದ್ದ ಅಮೆರಿಕಾವನ್ನು ನಮ್ಮ ಮತ್ತು ಚೀನಾದ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಬೇಡಿಕೊಳ್ಳುತ್ತಿದ್ದ ದುರ್ಬಲ ಕಾಲವೆಲ್ಲಾ ಮುಗಿದು ಹೋಯ್ತು, ಈಗೇನಿದ್ದರೂ ರಷ್ಯಾ-ಉಕ್ರೇನ್ ದೇಶಗಳ ಯುದ್ಧದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಿ ಮಾತುಕತೆ ಮಾಡಬೇಕಾದ ಮೋದಿ ಅವರ ಸಬಲ ಕಾಲ! ಈ ಡಾಕ್ಯುಮೆಂಟರಿಯಿಂದ ಮುಸಲ್ಮಾನರನ್ನು ಮೋದಿ ಅವರ ವಿರುದ್ಧ ಎತ್ತಿಕಟ್ಟಿ ದೇಶದಲ್ಲಿ ಅಶಾಂತಿ ಸೃಷ್ಟಿಸಿ, ಎಂದಿನ ತಮ್ಮ ಒಡೆದು ಆಳುವ ನೀತಿಯಿಂದ 2024ರಲ್ಲಿ ಅವರನ್ನು ಸೋಲಿಸಿ ತಮ್ಮ ಕೈಗೊಂಬೆಯನ್ನು ಪ್ರಧಾನಿಯನ್ನಾಗಿಸಲು ರಚಿಸಲಾಗಿರುವಂತೆ ಬಿಂಬಿತವಾಗುತ್ತಿರುವ ಈ ಟೂಲ್ ಕಿಟ್ ನಲ್ಲಿ ನೀವು ಭಾಗಿಯಾಗಿದ್ದೀರಾ? ನಿಮಗಾಗಿ ತಮ್ಮ ಮನೆ -ಮಠ ತೊರೆದು ಒಂದು ದಿನವೂ ರಜೆ ತೆಗೆದುಕೊಳ್ಳದೆ ದಿನಕ್ಕೆ 18-20 ಗಂಟೆಗಳ ಕಾಲ ರಾಷ್ಟ್ರಕಾರ್ಯ ಮಾಡುತ್ತಾರಲ್ಲ ಮೋದಿಯವರು, ಅದಕ್ಕೆ ಇದೇನಾ ನಿಮ್ಮ ಕೊಡುಗೆ? ಏಕೆ ಈ ದೇಶದ ಒಬ್ಬ ಚಾಯ್ ವಾಲಾ ಸ್ವಂತ ಶಕ್ತಿಯಿಂದ ಬೆಳೆದು ಪ್ರಧಾನಿಯಾದದ್ದನ್ನು ಒಪ್ಪಿಕೊಳ್ಳಲಾಗುತ್ತಿಲ್ಲವೆ? ಏಕೆ ಆ ಪ್ರಧಾನಿ ನೀವೆಲ್ಲಾ ಇಷ್ಟು ವರ್ಷಗಳ ಕಾಲ ನಮ್ಮಲ್ಲಿ ನಮ್ಮ ಧರ್ಮ-ಸಂಸ್ಕೃತಿಯ ಬಗೆಗೆ ತುಂಬಿಸಿದ್ದ ಕೀಳರಿಮೆಯನ್ನು ತೊಡೆದು ಹಾಕಿ ನಮ್ಮ ವಿರಾಸತ್ತಿನ ಹಿರಿಮೆ-ಗರಿಮೆಗಳನ್ನು ಪುನರುಚ್ಛರಿಸುತ್ತಾ ಎಲ್ಲರ ಹೃದಯದಲ್ಲಿ ಆತ್ಮಸಮ್ಮಾನದ ಜ್ವಾಲೆಯನ್ನು ಬೆಳಗಿಸುತ್ತಿದ್ದೀರಲ್ಲ ಅದಕ್ಕಾಗಿ ಅವರನ್ನು ಒಪ್ಪಿಕೊಳ್ಳಲಾಗುತ್ತಿಲ್ಲವೆ? ನ ಖಾವೂಂಗಾ ನ ಖಾನೆದೂಂಗಾ ಎಂಬ ಧ್ಯೇಯದಡಿ ಖಡಕ್ಕಾಗಿ ಕಾರ್ಯ ನಿರ್ವಹಿಸುವ ಪ್ರಧಾನಿ ಸ್ವಾತಂತ್ರ್ಯಾನಂತರವೂ ದಶಕ-ದಶಕಗಳ ಕಾಲ ಉದ್ದೇಶಪೂರ್ವಕವಾಗಿ ನಮ್ಮನ್ನು ಅವಕಾಶವಂಚಿತರನ್ನಾಗಿಸಿ ತೆರೆದಿದ್ದ ನಿಮ್ಮ ಭ್ರಷ್ಟ ಅಂಗಡಿಗಳನ್ನೆಲ್ಲಾ ಬಂದ್ ಮಾಡಿಸಿ, ಸ್ವಿಸ್ ಬ್ಯಾಂಕ್ ನ ಮಾರ್ಗವನ್ನು ಮುಚ್ಚುತ್ತಿದ್ದಾರಲ್ಲ ಅದಕ್ಕಾಗಿ ಅವರನ್ನು ಒಪ್ಪಿಕೊಳ್ಳಲಾಗುತ್ತಿಲ್ಲವೆ? ಪಕ್ಕದ ದೇಶಗಳ ನಡುವಿನ ಗಡಿ ವಿವಾದವಾಗಲಿ, ದೇಶದ ಒಳಗಿನ ಭಯೋತ್ಪಾದನೆಯ ಸಮಸ್ಯೆಯಾಗಲಿ ಅಥವಾ ಗಡಿಗಳಾಚೆಗಿನ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಸ್ಥಾನಮಾನಕ್ಕೆ ಧಕ್ಕೆಯುಂಟಾಗಿದ್ದ ವಿಷಯದಲ್ಲಾಗಲಿ ಎಲ್ಲದರಲ್ಲೂ ಈಗ ರಾಜತಾಂತ್ರಿಕವಾಗಿ ಗೆಲುವನ್ನು ದಾಖಲಿಸುತ್ತಿದ್ದಾರಲ್ಲ, ಅದಕ್ಕಾಗಿ ಅವರನ್ನು ಒಪ್ಪಿಕೊಳ್ಳಲಾಗುತ್ತಿಲ್ಲವೆ? ಬಿಬಿಸಿಯಾಗಲಿ ಮತ್ತೊಂದು ವಿದೇಶಿ ಶಕ್ತಿಯಾಗಲಿ ಅಥವಾ ಒಳಗಿನ ದೇಶವಿರೋಧಿಗಳೇ ಆಗಲಿ ಅವರೆಲ್ಲಾ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ ಎಂದರೆ ವಾಸ್ತವದಲ್ಲಿ ನಮ್ಮನ್ನು (ಭಾರತೀಯರನ್ನು) ವಿರೋಧಿಸುತ್ತಿದ್ದಾರೆ ಎಂದೇ ಅರ್ಥ! ಮೋದಿ ಅವರು ನಮ್ಮ ಮತ್ತು ಶತ್ರುಗಳ ನಡುವಿನ ಯುದ್ಧದಲ್ಲಿ ನಮ್ಮ ನಾಯಕರಾಗಿದ್ದಾರೆ. ಅಂತೆಯೇ ಅಮಿತ್ ಶಾ ಅವರನ್ನು ಕಿರಾತಕ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಮಾಂತ್ರಿಕ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಬಿಸಿ ಪರ ಬ್ಯಾಟಿಂಗ್ ಮಾಡುತ್ತಿರುವ ವಿಪಕ್ಷಗಳು, ಬುದ್ಧಿ ಜೀವಿಗಳು, ಜೆ.ಎನ್.ಯುನಂತಹ ವಿಶ್ವವಿದ್ಯಾಲಯಗಳು ಹಾಗೂ ಇನ್ನಿತರ ತುಕ್ಡೆ ತುಕ್ಡೆ ಗ್ಯಾಂಗ್ ಗಳು ಯಾರು ದಿನ ಬೆಳಗಾದರೆ ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುತ್ತಾರೊ ಅವರು ಸಂವಿಧಾನ, ಸುಪ್ರೀಂ ಕೋರ್ಟ್ ಗಳನ್ನೇ ತಮ್ಮ ರಕ್ಷಾಕವಚವಾಗಿ ಬಳಸಿಕೊಳ್ಳುವುದು. ಆದರೆ ತಮ್ಮ ಪ್ರೋಪಗ್ಯಾಂಡಗಳಿಗೆ ಸಹಕಾರಿಯಾಗದ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪಿಗೂ ಇವರು ಗೌರವ ಕೊಡುವುದಿಲ್ಲ ಎಂದು ಮತ್ತೊಮ್ಮೆ ಸಮಾಜದ ಮುಂದೆ ತೋರ್ಪಡಿಸಿ ಕೊಂಡಿದ್ದಾರೆ. ಅಂದು ಹಿಂದೂ ಕಾಶ್ಮೀರಿ ಪಂಡಿತರ ವೇದನೆಯನ್ನು ಜನರಿಗೆ ಮುಟ್ಟಿಸಲು ನಿರ್ಮಿಸಿದ 'ದ ಕಾಶ್ಮೀರಿ ಫೈಲ್ಸ್ ' ಚಿತ್ರವನ್ನು ಪ್ರೋಪಗ್ಯಾಂಡ ಎಂದೆಲ್ಲಾ ಅವಮಾನಿಸಿ ನಾಲಿಗೆ ಹರಿಬಿಟ್ಟಿದ್ದ ಇವರು ಕರಸೇವಕರ ಸಾವಿಗೆ ಅವಮಾನ ಮಾಡಿರುವ, ದೇಶದ ಪ್ರಧಾನಿ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿರುವ ಬಿಬಿಸಿಯ 'ಇಂಡಿಯಾ: ದ ಮೋದಿ ಕೊಶ್ಶನ್' ಡಾಕ್ಯುಮೆಂಟರಿಯನ್ನು ಬೆಂಬಲಿಸುತ್ತಿದ್ದಾರೆ. ಸ್ವಲ್ಪವೂ ನಾಚಿಕೆಯಿಲ್ಲದೆ ಈ ಡಾಕ್ಯುಮೆಂಟರಿಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಗೋದ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಗುಜರಾತ್ ಸಿಎಂ ಆಗಿದ್ದ ಮೋದಿ ಅವರು ಶಾಂತಿ ಸುವ್ಯವಸ್ಥೆ ಕಾಪಾಡಲು ಅನಿವಾರ್ಯವಾಗಿದ್ದ ಪೋಲೀಸ್ ಪಡೆಯನ್ನು ಗುಜರಾತ್ ಗೆ ಕಳುಹಿಸಬೇಕೆಂದು ಪಕ್ಕದ 3 ರಾಜ್ಯಗಳಲ್ಲೂ ಇದ್ದ ಕಾಂಗ್ರೆಸ್ ಸರ್ಕಾರವನ್ನು ವಿನಂತಿಸಿಕೊಂಡರೂ ಅವರು ಸಹಾಯ ಮಾಡಲಿಲ್ಲ. ಬೇಕಿದ್ದರೆ ಈ ನಿಮ್ಮ ಅಮೋಘ ನಟನೆಯ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ಸೂಪರ್ ಹಿಟ್ ಮಾಡಬಹುದು ನೋಡಿ. ಮೋದಿ ಅವರು ಮುಖ್ಯಮಂತ್ರಿಯಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಆದರೆ ಅನಿವಾರ್ಯತೆಯಿದ್ದ ಆ ಸಂದರ್ಭದಲ್ಲಿ ಸಹಾಯ ಮಾಡದೆ ತಮಾಷೆ ನೋಡಿದ ಕಾಂಗ್ರೆಸ್ ಹಾಗೂ ಈ ಪ್ರಕರಣವನ್ನು ಅನಾವಶ್ಯಕವಾಗಿ 20 ವರ್ಷಗಳ ಕಾಲ ಜೀವಂತವಾಗಿರಿಸಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಂಡ ಆಂದೋಲನ ಜೀವಿಗಳಿಗೆ ಇನ್ನೂ ಯಾವುದೇ ಕಠಿಣ ಶಿಕ್ಷೆಯಾಗಿಲ್ಲ. 

ಹೆಲೋ ಬಿಬಿಸಿ, 2024 ಹತ್ತಿರ ಬರುತ್ತಿರುವಾಗಲೇ ಏಕೆ ಈ ಡಾಕ್ಯುಮೆಂಟರಿಯನ್ನು ಹೊರ ತಂದಿದ್ದೀರಿ? ನಾವು ಆಳ್ವಿಕೆ ಮಾಡಿ ಸಕಲ ಸಂಪತ್ತನ್ನು ದೋಚಿ ಬಡವಾಗಿಸಿದ್ದ ದೇಶವು ಇಂದು ನಮ್ಮನ್ನೇ ಹಿಂದಿಕ್ಕಿ ಪ್ರಪಂಚದ ಐದನೇ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ಅಥವಾ ನಾವು ಆಳ್ವಿಕೆ ಮಾಡಿದ ದೇಶದವರೇ ಆದ ಹಿಂದೂ ರಿಷಿ ಸುನಕ್ ಇಂದು ನಮ್ಮ ದೇಶವನ್ನು ಆಳುತ್ತಿದ್ದಾರೆ ಎಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ಅಥವಾ 2023ರ ಜಿ-20 ಸಭೆಯ ಅಧ್ಯಕ್ಷತೆಯ ಮಹಾ ಜವಾಬ್ದಾರಿಯು ಭಾರತದ ಪಾಲಾಯಿತೆಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ದ ಸೋ ಕಾಲ್ಡ್ ಪ್ರಜಾಪ್ರಭುತ್ವದ ಭೋದಕರಾದ ಇಂಗ್ಲೆಂಡ್ ನವರಾದ ನಾವೇ ಇತ್ತೀಚೆಗೆ ಸ್ಥಿರ ಸರ್ಕಾರವಿಲ್ಲದೆ ಹಲವು ಬಾರಿ ಪರಿತಪಿಸಿದ್ದರೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮಾತ್ರ ಈ ಮೋದಿ ಸರ್ಕಾರ ಸುಸ್ಥಿರವಾಗಿ ಸಮೃದ್ಧವಾಗಿಯೇ ಇದೆ ಎಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ಕೊರೊನಾ ಸಮಯದಲ್ಲಿ ಜಗತ್ತಿನ ರಕ್ಷಕ ಸ್ಥಾನದಲ್ಲಿ ನಿಂತು 70ಕ್ಕೂ ಅಧಿಕ ದೇಶಗಳಿಗೆ ವ್ಯಾಕ್ಸಿನ್ ನೀಡಿ ಸಂಕಟ ಮೋಚನ ಮಾಡಿದ ಭಜರಂಗಿ ಭೂಮಿ ಭಾರತ ನೀವೇ ಈ ಜಗತ್ತನ್ನು (ಕರಿಯರನ್ನು) ರಕ್ಷಿಸಬೇಕಾದವರು ಎಂಬ ನಿಮ್ಮ 'ವೈಟ್ ಮ್ಯಾನ್ಸ್ ಬರ್ಡನ್' ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಂಡಿತು ಎಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ಉತ್ತರಿಸಿ.

ವೈಟ್ ಮ್ಯಾನ್ಸ್ ಬರ್ಡನ್ ಸಿದ್ಧಾಂತವು ವೈಟ್ ಮ್ಯಾನ್ಸ್ ಬರ್ನಿಂಗ್ ಸಿದ್ಧಾಂತವಾಗಿ ಪರಿವರ್ತನೆಯಾಗುತ್ತಿರುವ ಈ ಕಾಲವನ್ನು ಜಗತ್ತು ವೀಕ್ಷಿಸುತ್ತಿದೆ. ಮಾನವೀಯತೆಯ ಹಕ್ಕುಗಳ ಪ್ರತಿಪಾದಕರು ನಾವೇ ಎಂದು ಹೇಳಿಕೊಳ್ಳುವ ಬ್ರಿಟಿಷರಾದ ನೀವು ಜಗತ್ತಿನೆಲ್ಲೆಡೆ ನಾನಾ ದೇಶಗಳ ಮೇಲೆ ಆಳ್ವಿಕೆ ಮಾಡುವಾಗ ನಡೆಸಿದ ಅಮಾನವೀಯ ಕೃತ್ಯಗಳನ್ನು ಜಗತ್ತಿನ ಮುಂದೆ ಎಂದು ಪ್ರದರ್ಶಿಸುವಿರಿ, ಅಲ್ಲೆಲ್ಲಾ ಹೇಗೆ ಮಾನವೀಯತೆಯ ಹತ್ಯೆಯನ್ನು ಮಾಡಿದಿರಿ ಎಂಬುದರ ಬಗ್ಗೆ ಯಾವಾಗ ಡಾಕ್ಯುಮೆಂಟರಿ ಮಾಡುವಿರಿ? ಬೇರೆಲ್ಲಾ ದೇಶಗಳನ್ನು ಬಿಟ್ಟು ಬಿಡಿ, ನಮ್ಮ ದೇಶದಲ್ಲಿ ನೀವು ನಡೆಸಿದ ಸಾವಿರಾರು ಜನರ ನಿರ್ದಯ ಸಾವಿಗೆ ಕಾರಣವಾದ ಅತ್ಯಂತ ಘೋರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ವಿಂಗ್ ಸ್ಟನ್ ಚರ್ಚಿಲ್ ನಿಂದ ಕೃತಕವಾಗಿ ಸೃಷ್ಟಿಸಲಾಯಿತು ಎನ್ನಲಾದ 1943ರ ಬಂಗಾಳ ಕ್ಷಾಮದಲ್ಲಾದ 30 ಲಕ್ಷಕ್ಕೂ ಅಧಿಕ ಜನರ ಮಾರಣಹೋಮ ಮುಂತಾದ ವಿಷಯಗಳ ಬಗ್ಗೆ ಯಾವಾಗ ಡಾಕ್ಯುಮೆಂಟರಿ ಮಾಡುವಿರಿ? ಬಂಧುಗಳೆ ಈ ಬ್ರಿಟಿಷರಂತೆ ಹಲವು ಆಕ್ರಮಣಕಾರರು ನಮ್ಮ ದೇಶದ ಅಮೂಲ್ಯ ಸಂಪತ್ತನ್ನೆಲ್ಲಾ ದೋಚಿ ನಮ್ಮನ್ನು ಬಡವಾಗಿಸಿದರೂ ನಮ್ಮನ್ನು ಇತರ ವಸಾಹತು ಶಾಹಿ ದೇಶಗಳಂತೆ ಅವರ ಸಂಸ್ಕೃತಿಗೆ ಪರಿವರ್ತಿಸಲಾಗಲಿಲ್ಲ. ಆದ್ದರಿಂದಲೇ ಅವರಿಗೆ ನಮ್ಮ ಮೇಲೆ ಹೆಚ್ಚು ದ್ವೇಷ ಹಾಗೂ ಅದಕ್ಕಾಗಿಯೇ ಈ ಆಕ್ರಮಣಗಳು! 2024 ಹತ್ತಿರವಾದಂತೆ ಮತ್ತಷ್ಟು ಮಗದಷ್ಟು ಟೂಲ್ ಕಿಟ್ ನ ಯೋಜನೆಗಳು ಜಾರಿಯಾಗುವುದು ಖಚಿತ. ಇನ್ನೂ ಬಿಬಿಸಿಯ ಡಾಕ್ಯುಮೆಂಟರಿಯ ಬಿಸಿಯೇ ತಣ್ಣಗಾಗಿಲ್ಲ, ಆಗಲೆ ಅದಾನಿ ಕಂಪನಿಯನ್ನು ಟಾರ್ಗೆಟ್ ಮಾಡಿಕೊಂಡು ಮೋದಿಯವರ ಮೇಲೆ ಮತ್ತೊಂದು ಪರೋಕ್ಷ ದಾಳಿಯನ್ನು ಆರಂಭಿಸಿದ್ದಾರೆ. ಕೊನೆಯದಾಗಿ ಚಾಣಕ್ಯ ಅವರ ನುಡಿ: "ಎಲ್ಲಿಯವರೆಗೆ ಒಂದು ರಾಷ್ಟ್ರವು ತನ್ನ ಧರ್ಮ, ಸಂಸ್ಕೃತಿಯ ಮೌಲ್ಯಗಳನ್ನು ಸಂರಕ್ಷಿಸುವುದೋ ಅಲ್ಲಿಯವರೆಗೆ ಅದನ್ನು ಪರಾಜಯಗೊಳಿಸಲು ಸಾಧ್ಯವಿಲ್ಲ".

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ