ಶ್ರೀರಾಮನ ಹೆಸರಲ್ಲಿ ಸರ್ವೋಚ್ಚ ಬಲಿದಾನ ಮಾಡಿದ ರಿಂಕು ಶರ್ಮಾರನ್ನು ಹಿಂದೂ ಸಮಾಜವು ಎಂದೂ ಮರೆಯದಿರಲಿ: ಮತ್ತೆಂದೂ ಹೀಗಾಗದಿರಲು ಜಿಹಾದಿ ವಿಕೃತ್ಯದ ವಿರುದ್ಧ ಹೋರಾಡಲು ಸನ್ನಲ್ಧರಾಗಲಿ

ಶ್ರೀರಾಮನ ಹೆಸರಲ್ಲಿ ಸರ್ವೋಚ್ಚ ಬಲಿದಾನ ಮಾಡಿದ ರಿಂಕು ಶರ್ಮಾರನ್ನು ಹಿಂದೂ ಸಮಾಜವು ಎಂದೂ ಮರೆಯದಿರಲಿ: ಮತ್ತೆಂದೂ ಹೀಗಾಗದಿರಲು ಜಿಹಾದಿ ವಿಕೃತ್ಯದ ವಿರುದ್ಧ ಹೋರಾಡಲು ಸನ್ನದ್ಧವಾಗಲಿ.
ಶ್ರೀರಾಮನ ಭಕ್ತ, ಭಜರಂಗಿಯ ಭಕ್ತ ರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ಅತ್ಯಂತ ಉಲ್ಲಾಸ-ಉತ್ಸಾಹದಿಂದ ರಾಲಿಗಳನ್ನು ಮಾಡಿ ಧನ ಸಂಗ್ರಹಿಸುತ್ತಿದ್ದ. ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಪಠಿಸುತ್ತಾ ಭಕ್ತಿಯ ಸೇವೆ ಸಲ್ಲಿಸುತ್ತಿದ್ದ. ತನ್ನ ಶ್ರೇಷ್ಠ ಹಿಂದೂ ಧರ್ಮದ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಭಜರಂಗದಳವನ್ನು ಸೇರಿ ಕಾರ್ಯಕರ್ತನಾಗಿದ್ದ. ತಮ್ಮ ಧರ್ಮದ ಮೇಲೆ ಅಭಿಮಾನ ಹೊಂದಿರುವ ಪ್ರತಿಯೊಬ್ಬರೂ ಹೇಗೆ ಜವಾಬ್ದಾರಿಯುತವಾಗಿ ಧರ್ಮದ ಕಾರ್ಯಗಳನ್ನು ಮಾಡಲಿಚ್ಛಿಸುವರೊ ಹಾಗೆ ಮಾಡುತ್ತಾ ಸುಸಂಸ್ಕೃತ ಜೀವನ ನಡೆಸುತ್ತಿದ್ದ. ಆದರೆ ಇದನ್ನು ಸಹಿಸಲಾಗದ ಆತನ ಏರಿಯಾದ ಮುಸ್ಲಿಂ ಕುಟುಂಬದವರು ಮಾಡಿದ್ದೇನು? ಆತನ ಹತ್ಯೆ, ಘೋರ ಹತ್ಯೆ. ರಾತ್ರಿಯ ವೇಳೆಯಲ್ಲಿ ಗುಂಪು ಕಟ್ಟಿಕೊಂಡು ಬಂದು ತಾವು ತಂದಿದ್ದ ಲಾಠಿ, ಚಾಕು ಆಯುಧಗಳನ್ನು ಮೇಲಿಂದ ಮೇಲೆ ಪ್ರಯೋಗಿಸಿ ಆತನನ್ನು ನಿರ್ಮಮವಾಗಿ ಹತ್ಯೆಗೈದರು. 26 ವರ್ಷದ ರಿಂಕು ಶರ್ಮಾರಂತಹ ಸಮರ್ಥ, ಯೋಗ್ಯವಂತ, ತೇಜಸ್ವಿ ಯುವಕನನ್ನು ಕೊಲ್ಲಲು ಅವರ ಕೈಗಳು ನಡುಗಲಿಲ್ಲವೆ? ಆತನೂ ತಮ್ಮ ಮಗನ ಹಾಗೆಯೇ ಬದುಕಿ ಬಾಳಬೇಕಾದ ಹುಡುಗನೆಂದು ಅವರ ಅಂತಃಕರಣ ತಿಳಿಸಲಿಲ್ಲವೆ? ಸಾಂಪ್ರದಾಯಿಕತೆಯ ದೃಷ್ಟಿ ಬಿಡಿ, ಸಾಮಾಜಿಕ ದೃಷ್ಟಿಯಿಂದಾದರೂ ಮಾನವೀಯತೆಯ ದೃಷ್ಟಿಯಿಂದಾದರೂ ತಮ್ಮಂತೆ ಮಾನವ ಜನ್ಮವನ್ನು ಪಡೆದು ಬದುಕುತ್ತಿರುವ ಯುವಕನನ್ನು ನಿರ್ಮಮವಾಗಿ ಹತ್ಯೆಗೈಯ್ಯಲು ಅವರ ಆತ್ಮಸಾಕ್ಷಿ ತಡೆಯಾಜ್ಞೆ ನೀಡಲಿಲ್ಲವೆ? ಸುತ್ತ ಮುತ್ತಲಿನ ಮನೆಗಳ ಯಾರೊಬ್ಬರಿಗೂ ಆ ಅಮೂಲ್ಯವಾದ ಯುವಜೀವದ ರಕ್ಷಣೆಗಾಗಿ ಹೋರಾಡಬೇಕೆಂಬ ಶೌರ್ಯ-ಸಾಹಸಗಳು ಪುಟಿದೇಳಲಿಲ್ಲವೆ, ಯಾರೊಬ್ಬರಿಗೂ ಆತನ ಆಕ್ರಂದನದ ಕೂಗು ಕೇಳಲೇ ಇಲ್ಲವೆ? ಅಂದು ನಡೆದದ್ದು ರಿಂಕು ಶರ್ಮಾರ ಹತ್ಯೆಯೋ ಅಥವಾ ಮಾನವೀಯತೆಯ ಹತ್ಯೆಯೋ? ತನ್ನ ಮೃತ್ಯುವಿನ ಸಾನ್ನಿಧ್ಯದಲ್ಲೂ ಆ ರಾಮಭಕ್ತ ಪಠಿಸಿದ್ದು ಒಂದೇ ಮಂತ್ರ 'ಜೈ ಶ್ರೀರಾಮ್'. ತನ್ನ ಇಷ್ಟದೈವ ರಾಮನ ಹಾಗೂ ತನ್ನ ಪ್ರೀತಿಯ ತಾಯಿಯ ಹೆಸರನ್ನೇ ಉಚ್ಛರಿಸುತ್ತಾ ಸರ್ವೋಚ್ಚ ಬಲಿದಾನ ಮಾಡಿ ಹೋದ ಈತನ ಋಣವನ್ನು ಹಿಂದೂ ಸಮಾಜವು ಎಂದೂ ಮರೆಯದಿರಲಿ. ಶ್ರೀರಾಮ ಮಂದಿರದ ಹೋರಾಟದಲ್ಲಿ ಅಮರರಾದ ವೀರಪುತ್ರರ ಸಾಲಿನಲ್ಲಿ ರಿಂಕು ಶರ್ಮಾರಿಗೆ ಅಗ್ರಸ್ಥಾನ ನೀಡಿ ಗೌರವಿಸಲಿ.

ಆ ಭೀಕರ ದೃಶ್ಯಾವಳಿಯಲ್ಲಿ ದಾಖಲಾಗಿರುವಂತೆ ಸರಿ ಸುಮಾರು 10-15 ಜನರು ಸೇರಿ ಈ ಕೃತ್ಯವನ್ನು ಎಸಗಿದ್ದಾರೆ. ಇದರಲ್ಲಿ ಮೊಹಮ್ಮದ್ ಇಸ್ಲಾಂ, ಡ್ಯಾನಿಶ್ ನಸ್ರುದ್ದೀನ್, ದಿಲ್ಷನ್ ಹಾಗೂ ದಿಲ್ಷದ್ ಇಸ್ಲಾಂ ಎಂಬುವವರು ಮಾತ್ರ ಅರೆಸ್ಟ್ ಆಗಿದ್ದಾರೆ. ಆ ದೃಶ್ಯಾವಳಿಯಲ್ಲಿ ರಿಂಕು ಶರ್ಮಾರ ಮೇಲೆ ಹಲ್ಲೆ ಮಾಡುತ್ತಿದ್ದದರ ಜೊತೆಗೆ ಆತನ ಸಂಪೂರ್ಣ ಕುಟುಂಬವನ್ನು ನಾಶ ಮಾಡಲು ಸಿಲಿಂಡರ್ ಲೀಕ್ ಮಾಡಲು ಪ್ರಯತ್ನಿಸುತ್ತಿದ್ದದ್ದು ಕೂಡ ದಾಖಲಾಗಿದೆ. ಈ ಕೃತ್ಯದಲ್ಲಿ ಮಹಿಳೆಯರು ಕೂಡ ಶಾಮೀಲಾಗಿದ್ದರು ಎಂಬುದು ದುರಾದೃಷ್ಟಕರ. ಆ ಮಹಿಳೆಯರಲ್ಲೇ ಒಬ್ಬರಿಗೆ ಆಕೆಯ ಹೆರಿಗೆ ಸಂದರ್ಭದಲ್ಲಿ ರಕ್ತದ ಅನಿವಾರ್ಯತೆಯೊದಗಿದ್ದಾಗ ಈತ ಈ ರಿಂಕು ಶರ್ಮಾನೆ ರಕ್ತದಾನ ಮಾಡಿದ್ದನು ಎನ್ನುವುದು ಮತ್ತಷ್ಟು ದುರಾದೃಷ್ಟಕರ. ಆತನು ರಕ್ತದಾನ ಮಾಡಿದ್ದರ ಫಲವಾಗಿ ಆತನ ರಕ್ತವನ್ನೇ ಹರಿಸಲಾಯಿತು. ಇದಕ್ಕಿಂತ ದೌರ್ಭಾಗ್ಯಪೂರ್ಣವಾದ ಸಂಗತಿ ಏನಿರಲು ಸಾಧ್ಯ?

ತಮ್ಮ ಕಣ್ಣ ಮುಂದೆಯೇ ತಾವು ಜೀವಿತವಾಗಿದ್ದರೂ ಅಸಹಾಯಕತೆಯಿಂದ ತಮ್ಮ ಪ್ರಿಯ ಪುತ್ರನ ದುರ್ಮರಣವಾಗುವುದನ್ನು ಕಂಡ ಆ ತಂದೆ-ತಾಯಿಯರ ಸ್ಥಿತಿ ಎಷ್ಟು ಚಿಂತಾಜನಕವಾಗಿರಬಹುದು, ಯೋಚಿಸಿದ್ದೀರಾ? ರಿಂಕು ಶರ್ಮಾರ ಹತ್ಯೆಯ ನಂತರ ಒಮ್ಮೆ ಸುದರ್ಶನ್ ನ್ಯೂಸ್ ನಲ್ಲಿ ಆತನ ತಂದೆ ತೀವ್ರ ದುಃಖ ಆಘಾತದಿಂದ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾರ ಸಂಪರ್ಕಕ್ಕೂ ಬರದೆ ದುಃಖದ ಮಡುವಿನಲ್ಲಿ ಮುಳುಗಿ ಹೋಗಿದ್ದಾರೆ. ತನ್ನ ಕರುಳಕುಡಿಯ ನೋವಿನ ಮರಣವು ತಾಯಿಯನ್ನು ಶೋಕ ಸಾಗರಕ್ಕೆ ತಳ್ಳಿದಂತಾಗಿದೆ. ಮನೆಯ ಆಧಾರಸ್ತಂಭವಾಗಿ ತನ್ನ ಸಹೋದರರನ್ನು ಓದಿಸುತ್ತಿದ್ದ ಅಣ್ಣನು ಹೀಗೆ ದುರಂತ ಅಂತ್ಯವನ್ನು ಕಂಡಿರುವುದು ತಮ್ಮಂದಿರಿಗೆ ದಿಕ್ಕು ತೋಚದಂತೆ ಮಾಡಿದೆ. ಆ ಏರಿಯಾದ ಹಿಂದೂಗಳು ಸಂಘಟಿತರಾಗಿ ಜಾಗೃತರಾಗಿ ಮುಂದೆ ಬಂದು ಮತ್ತಿನ್ನೆಂದೂ ಹೀಗಾಗದಂತೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡಿದ್ದಾರೆ. ಎಷ್ಟೇ ದುಃಖ, ನೋವು, ಆಕ್ರೋಶ, ಜಾಗೃತಿ ಬಂದರೂ ಎಷ್ಟೇ ಬೆಲೆಯನ್ನು ಕಟ್ಟಲು ಸಿದ್ಧವಾದರೂ ಹೋಗಿರುವ ಪ್ರಾಣ ಮರಳಿ ಬರುತ್ತದೆಯೇ? ಈಗ ನಾವು ಭವಿಷ್ಯದ ಕುರಿತು ಮಾತನಾಡಬೇಕಿದೆ. ರಿಂಕು ಶರ್ಮಾರಿಗೆ ಎಂತಹ ಸಂಕಷ್ಟಗಳನ್ನು ಎದುರಿಸಿಯಾದರೂ ನ್ಯಾಯವನ್ನು ದೊರಕಿಸಿಕೊಡಲೇ ಬೇಕಾದ ಮಹತ್ತರ ಜವಾಬ್ದಾರಿ ಸಮಸ್ತ ಹಿಂದೂ ಜನಾಂಗದ ಮೇಲಿದೆ. 

ಆದರೆ, ವಾಸ್ತವದಲ್ಲಿ ದೆಹಲಿ ಪೊಲೀಸರು ಹಾಗೂ ಸರ್ಕಾರವು ಹೇಗೆ ವರ್ತಿಸುತ್ತಿದ್ದಾರೆ ತಿಳಿದಿದೆಯೇ? ಪೊಲೀಸರು ಹೇಳುತ್ತಾರೆ ಇದು ಒಂದು ಬರ್ತ್ ಡೇ ಪಾರ್ಟಿಯ ಘರ್ಷಣೆಯಲ್ಲಿ ನಡೆದ ಹತ್ಯೆ, ವ್ಯವಹಾರಕ್ಕೆ ಸಂಬಂಧಿಸಿದ ಹತ್ಯೆ ಎಂದು. ಹಾಗೇ ಅವರು ಆರೋಪಿಗಳ ಕುಟುಂಬಕ್ಕೆ ರಕ್ಷಣೆ ನೀಡುವುದರಲ್ಲಿ ವ್ಯಸ್ತವಾಗಿದ್ದಾರೆ. ಸರ್ಕಾರದ ಪ್ರತಿಕ್ರಿಯೆಯ ಕಥೆಯಂತು ಕೇಳುವುದೇ ಬೇಡ ಬಿಡಿ. ಅರವಿಂದ್ ಕೇಜ್ರಿವಾಲ್ ಎಂಬ ಕರುಣಾಮಯಿ ಮುಖ್ಯಮಂತ್ರಿ, ಯಾರು 2015ರಲ್ಲಿ ದೂರದ ಉತ್ತರಪ್ರದೇಶದ ಮೃತ ಇಖ್ಲಾಕ್ ಎಂಬುವವರ ಕುಟುಂಬಕ್ಕೆ ಸಹಾಯಹಸ್ತ ಚಾಚಲು ಹೋಗಿದ್ದರೊ ಅವರಿಗೆ ತಮ್ಮದೇ ರಾಜ್ಯದ ಮೃತ ರಿಂಕು ಶರ್ಮಾರ ನಿವಾಸಕ್ಕೆ ಭೇಟಿ ನೀಡಿ ಆ ಕುಟುಂಬದವರಿಗೆ ಪರಿಹಾರ ನೀಡಲಾಗಲಿಲ್ಲ. ಸ್ವತಃ ರಿಂಕು ಶರ್ಮಾರ ಸಹೋದರ ಮನು ಶರ್ಮನು ಮುಖ್ಯಮಂತ್ರಿಯನ್ನು ಭೇಟಿಯಾಗಬೇಕೆಂದು ಜನರ ಸಹಯೋಗದೊಂದಿಗೆ ಹೋಗಿ 3-4 ಗಂಟೆಗಳ ಕಾಲ ಕಾದರೂ ದರ್ಶನವಾಗಲಿಲ್ಲ. ಆದರೆ, ರಿಂಕು ಶರ್ಮಾರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಅವರ ನಿವಾಸಕ್ಕೆ ಆಗಮಿಸುತ್ತಿರುವ ಹಿಂದೂಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಪಿಲ್ ಮಿಶ್ರಾರವರ ಮುಂದಾಳತ್ವದಲ್ಲಿ ಸನಿಹ 1 ಕೋಟಿ ಹಣವನ್ನು ಸಂಗ್ರಹಿಸಿ ಆತನ ಕುಟುಂಬಕ್ಕೆ ಪರಿಹಾರ ಧನವಾಗಿ ನೀಡಲು ತಯಾರಿ ನಡೆದಿದೆ. ಹಿಂದೂ ಸಮಾಜವು ಒಗ್ಗಟ್ಟಾಗಿ ಭರಪೂರ ಬೆಂಬಲ ನೀಡುತ್ತಿರುವುದು ಇದರಿಂದ ಪ್ರಮಾಣಿತವಾಗುತ್ತದೆ. ಪ್ರತಿಯೊಂದಕ್ಕೂ ಸರ್ಕಾರದ ಮೇಲೆ ನಿರ್ಭರವಾಗುವ ಮಾನಸಿಕತೆಗೆ ವಿರುದ್ಧವಾಗಿ ಮಾಡಿದ ಕಾರ್ಯವು ಯಶಸ್ಸನ್ನು ತಂದು ಕೊಟ್ಟಿದೆ. ಇನ್ನು ಎಂದಿಗೂ ನಾವು ಹಿಂದೂ ಸಮಾಜಕ್ಕೆ ಸಂಕಟವೊದಗಿ ಬಂದಾಗ ಜಾತ್ಯಾತೀತವೆಂದು ಕರೆದುಕೊಳ್ಳುವ  ಸರ್ಕಾರಗಳು, ಮೀಡಿಯಾಗಳು, ಬುದ್ಧಿಜೀವಿಗಳು, ಬಾಲಿವುಡ್ ಇವುಗಳಿಗ್ಯಾವುದಕ್ಕೂ ಧ್ವನಿ ಎತ್ತುವಂತೆ ಸವಾಲು ಹಾಕುವುದು, ಪ್ರಶ್ನಿಸುವುದು ಬೇಡ. ಅದೆಲ್ಲ ಶುದ್ಧ ವ್ಯರ್ಥ ಪ್ರಯತ್ನವೆಂದು ಸಾಬೀತಾಗಿದೆ. ಅವರೆಲ್ಲರ ಡಬಲ್ ಸ್ಟ್ಯಾಂಡರ್ಡ್ಸ್ ಪ್ರಪಂಚದ ಮುಂದೆ ಅನಾವರಣಗೊಂಡಿದೆ. ಅವರ ರಾಷ್ಟ್ರವಿರೋಧಿ, ಧರ್ಮ ವಿರೋಧಿ ನಿಲುವುಗಳಿಗೆ ತಕ್ಕ ಶಿಕ್ಷೆ ಕೊಡಿಸುವುದೊಂದೇ ಆಗಬೇಕಿರುವ ಕಾರ್ಯ.

ಹಲವಾರು ಮೀಡಿಯಾಗಳು ಪೊಲೀಸರ ಹೇಳಿಕೆಯನ್ನೇ ಮುಂದಿರಿಸಿಕೊಂಡು ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ರಿಂಕುಶರ್ಮಾರ ಈ ಕೇಸ್ ನಲ್ಲಿ ಪೊಲೀಸರ ಮಾತನ್ನು ಒಪ್ಪಿಕೊಳ್ಳುತ್ತಿರುವ ಮೀಡಿಯಾಗಳು, 2017ರ ಜುನಾಯದ್ ಖಾನ್ ಕೇಸ್ ಅನ್ನು ಪೊಲೀಸರು ಕೋಮುವಾದದ ಕೇಸ್ ಅಲ್ಲವೆಂದು ಸ್ಪಷ್ಟ ಪಡಿಸಿದ್ದರೂ ಅದನ್ನು ತಿರಸ್ಕರಿಸಿದ್ದವು. ಹೀಗೆಯೇ ಇಂತಹ ಪ್ರಕರಣಗಳಲ್ಲಿ ಯಾವುದು ಕೋಮುವಾದ ಯಾವುದು ಅಲ್ಲವೆಂದು ಮೀಡಿಯಾಗಳು ನಿರ್ಧರಿಸುತ್ತಿವೆ, ಯಾವ ಪ್ರಕರಣದಲ್ಲಿ ಆರೋಪಿಗಳ ಧರ್ಮವನ್ನು ಪ್ರಕಟಿಸಬೇಕು ಯಾವುದರಲ್ಲಿ ಪ್ರಕಟಿಸಬಾರದು ಎಂಬುದನ್ನೂ ಸಹ ಮೀಡಿಯಾಗಳು ನಿರ್ಧರಿಸುತ್ತಿವೆ! ಆರೋಪಿ ಹಿಂದುವಾಗಿದ್ದು ಮುಸ್ಲಿಂ ಹತ್ಯೆಗೊಳಗಾಗಿದ್ದರೆ ಆರೋಪಿಯ ಹೆಸರನ್ನು ಹೈಲೈಟ್ ಮಾಡಿ ತೋರಿಸಲಾಗುತ್ತದೆ. ಆದರೆ ಆರೋಪಿ ಮುಸ್ಲಿಂ ಆಗಿದ್ದು ಹಿಂದೂ ಹತ್ಯೆಗೊಳಗಾಗಿದ್ದರೆ ಆರೋಪಿಯ ಹೆಸರನ್ನು ಮುಚ್ಚಿಡುವ ಪ್ರಯತ್ನವಾಗುತ್ತದೆ. ಜಿಹಾದಿಗಳಿಗೆ ಹೆದರಿ ಅವರನ್ನು ಎದುರಿಸಲಾಗದೆ, ಸುದ್ದಿ ಪ್ರಸಾರದ ಪ್ರಾಮಾಣಿಕತೆಯನ್ನು ಕಳೆದು ಕೊಂಡು ಸತ್ಯಸುದ್ದಿಗಳನ್ನು ಜನರಿಗೆ ತಲುಪಿಸಲಾಗದಂತಹ ದುಃಸ್ಥಿತಿಯಲ್ಲಿರುವ  ಮೀಡಿಯಾಗಳಿಗೆ ನಮ್ಮ ಧಿಕ್ಕಾರವಿರಲಿ. ಈ ಸಾಲಿನಲ್ಲೇ ನಿಲ್ಲುವ, ವಿಭಿನ್ನ ಮಾರ್ಗದ ಮೂಲಕ ಸತ್ಯವನ್ನು ಮರೆಮಾಚುತ್ತಿರುವ ಸರ್ಕಾರಗಳು, ಬುದ್ಧಿಜೀವಿಗಳು, ಬಾಲಿವುಡ್ ನವರಿಗೂ ಕೂಡ ನಮ್ಮ ಧಿಕ್ಕಾರವಿರಲಿ. ರಿಂಕುಶರ್ಮಾರ ಸುದ್ದಿಯನ್ನು ಧೈರ್ಯವಾಗಿ ಮೊದಲು ಪ್ರಸರಿಸಿದ ಹಿಂದುತ್ವಕ್ಕಾಗಿ, ರಾಷ್ಟ್ರದ ಏಳಿಗೆಗಾಗಿ ಮಾತ್ರವೇ ಕಾರ್ಯ ನಿರ್ವಹಿಸುತ್ತಿರುವ ಸುದರ್ಶನ್ ನ್ಯೂಸ್ ತಂಡಕ್ಕೆ ನಾವೆಲ್ಲ ಆಭಾರಿಯಾಗಿರಬೇಕು.

ತಮ್ಮ ಮನೆಯ ಮಗನು ರಾಮಮಂದಿರ ನಿರ್ಮಣದ ಕಾರ್ಯಕ್ಕಾಗಿ ಧನ ಸಂಗ್ರಹಿಸುತ್ತಿದ್ದರಿಂದ, ಸಂತೋಷವಾಗಿ ರಾಲಿ ಮಾಡಿದ್ದರಿಂದ ಹಾಗೆ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರಿಂದಲೇ ಅದನ್ನು ಸಹಿಸಲಾಗದೆ ಮುಸ್ಲಿಂ ಕುಟುಂಬದವರು ಹತ್ಯೆಗೈದಿದ್ದಾರೆ ಎಂಬ ಕಂಪ್ಲೇಂಟ್ ನೀಡಿದ್ದರೂ, ಪುನಃ ಪುನಃ ಆತನ ಸಹೋದರ ಮನುಶರ್ಮ ಸುದ್ದಿವಾಹಿನಿಗಳಿಗೆ ಸರಿಯಾದ ವಿವರ ನೀಡುತ್ತಿದ್ದರೂ ಹಲವಾರು ಮೀಡಿಯಾಗಳು ಪೊಲೀಸರ ಹೇಳಿಕೆಯನ್ನೇ ಸಮರ್ಥಿಸಿಕೊಳ್ಳುತ್ತಿವೆ. ಈ ದುರಂತ ಘಟನೆಯಿಂದ ನೊಂದು ಬೆಂದಿರುವ ಆತನ ಕುಟುಂಬದವರು ಸುಳ್ಳು ಹೇಳಲು ಸಾಧ್ಯವೇ? ರಿಂಕುಶರ್ಮಾ ಯಾವುದೇ ವ್ಯವಹಾರವನ್ನು ನಡೆಸುತ್ತಲೇ ಇರಲಿಲ್ಲವೆಂದ ಮೇಲೆ ವ್ಯಾವಹಾರಿಕ ಕಲಹವಾಗಲು ಸಾಧ್ಯ? ಕಾನೂನಿನ ಕಟಕಟೆಯ ಮುಂದೆ ಪೊಲೀಸರು ತಾವು ಎಫ್.ಐ.ಆರ್ ನಲ್ಲಿ ದಾಖಲಿಸಿರುವುದರ ಬಗ್ಗೆ ಸಮರ್ಥನೆ ನೀಡಲೇಬೇಕಾಗುತ್ತದೆ. ಆಗ ಸತ್ಯವನ್ನು ಹೇಗೆ ಕಟ್ಟಿಹಾಕಲು ಸಾಧ್ಯ? ಮತ್ತೊಂದು ಗಂಭೀರ ಸಂಗತಿಯೆಂದರೆ ರಿಂಕುಶರ್ಮಾರ ಕುಟುಂಬದವರು ನೀಡಿರುವ ದೂರಿನಲ್ಲಿ ದಾಖಲಾಗಿರುವ ಮುಖ್ಯ ಆರೋಪಿ ತಾಜುದ್ದೀನ್ ಎಂಬಾತನ ಹೆಸರು ಪೊಲೀಸರು ದಾಖಲು ಮಾಡಿರುವ ಎಫ್.ಐ.ಆರ್ ನಲ್ಲಿ ಇಲ್ಲವೇ ಇಲ್ಲ. ಮುಖ್ಯ ಆರೋಪಿಯ ಹೆಸರೇ ಅಲ್ಲಿ ಇಲ್ಲದಿರಲು ಹೇಗೆ ಸಾಧ್ಯ? ಸಾಧ್ಯವಾಗಿ ಹೋಗಿದೆ. ಏಕೆಂದರೆ ಆತ ದೆಹಲಿಯ ಪೊಲೀಸ್ ಇಲಾಖೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಲ್ಲದೆ ಆ ಆರೋಪಿಯ ಮನೆ ಮುಂದೆ ಆಮ್ ಆದ್ಮಿ ಪಾರ್ಟಿಯ ಪೋಸ್ಟರ್ಸ್ ಇರುವುದನ್ನು ಕಂಡು ಕೆಲವು ರಿಪೋರ್ಟರ್ಸ್ ಪ್ರಶ್ನಿಸಿದಾಗ, ಸುತ್ತ ಮುತ್ತಲಿನ ಜನರು ಇವರು ಆ ಪಕ್ಷದ ಕಾರ್ಯಕರ್ತರೆಂದು ತಿಳಿಸಿದ್ದಾರೆ. ಯಾವಾಗ ಬೌದ್ಧಿಕ ವರ್ಗವು ತಮ್ಮ ವಿದ್ಯೆಯನ್ನು ಮಾರಿಕೊಂಡು, ರಾಷ್ಟ್ರಕ್ಕೆ ಅಹಿತಕರವಾಗಿ ಸುಳ್ಳನ್ನೇ ಸತ್ಯವೆಂದು ಸಾಬೀತು ಪಡಿಸಲು ಹೊರಡುವುದೊ ಅಲ್ಲಿಂದ ಆ ರಾಷ್ಟ್ರದ ಅವನತಿ ಪ್ರಾರಂಭವಾಗುವುದೆಂದು ಜ್ಞಾನಿಗಳು ನುಡಿದು ಹೋಗಿದ್ದಾರೆ. ಕಣ್ಣಿಗೆ ಕಾಣದ, ಜನ ಮಾನಸದಲ್ಲಿ ಹೆಚ್ಚು ಅರಿವಿಗೆ ಬಾರದ ಆದರೆ ದೊಡ್ಡದಾಗಿ ಬೆಳೆಯುತ್ತಿರುವ ಸಮಸ್ಯೆ ಎಂದರೆ ಇದೇ. 

ಹಿಂದೂಗಳು ಯಾರಿಗೂ ಭಯಪಡಬೇಕಿಲ್ಲ. ನಮ್ಮ ಇತಿಹಾಸವು ಶೌರ್ಯದ ಇತಿಹಾಸ, ಪೌರುಷದ ಇತಿಹಾಸ, ಕ್ಷಾತ್ರತೇಜದ ಇತಿಹಾಸ, ಸಾಹಸದ ಇತಿಹಾಸ, ಒಟ್ಟಾರೆ ಧರ್ಮದ ಇತಿಹಾಸ. ಅಸಂಖ್ಯಾತ ಅಸಂಖ್ಯಾತ ವೀರ ಪೂರ್ವಜರ ಶಕ್ತಿ ನಮ್ಮೊಂದಿಗಿದೆ. ಅಸಾಧಾರಣ ಅಸಾಧಾರಣ ಮಹಾಸಂಜೀವಿನಿ ಧರ್ಮಗ್ರಂಥಗಳು ನಮ್ಮೊಂದಿಗಿದೆ. ಅವಿಸ್ಮರಣೀಯ ಅವಿಸ್ಮರಣೀಯ ಧರ್ಮಯುದ್ಧದ ಶೌರ್ಯಗಾಥೆಗಳು ನಮ್ಮೊಂದಿಗಿದೆ. ನಾವು ಸಾಕ್ಷಾತ್ ಭಗವಂತ ರಾಮ, ಕೃಷ್ಣರ ವಂಶಜರು. ನಾವು ಸ್ವಾಮಿವಿವೇಕಾನಂದರಂಹ ಮಹಾನ್ ಸಂತರ ಶಿಷ್ಯರು. ನಾವು ಭಾರತಮಾತೆಯ ಮಕ್ಕಳು. ಅಧರ್ಮದ ವಿರುದ್ಧ ಧ್ವನಿಯೆತ್ತದಂತೆ ಭಯ ಭ್ರಮಿತ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವ ಅಧರ್ಮಿಗಳ ಶಕ್ತಿಯನ್ನು ತೊಡೆದು ಹಾಕಿ ಧರ್ಮದ ಶಕ್ತಿಯನ್ನು ಪಸರಿಸಬೇಕಿದೆ. ಡಾ. ನಾರಾಂಗ್, ರಾಮಲಿಂಗಮ್, ಧ್ರುವತ್ಯಾಗಿ, ಅಂಕಿತ್ ಸಕ್ಸೇನಾ, ಹೀನಾ ತಲ್ರೇಜಾ, ಅಂಕಿತ್ ಶರ್ಮಾ, ಚಂದನ್ ಗುಪ್ತಾ, ಬಂಧು ಪ್ರಕಾಶ್, ಟ್ಟಿಂಕಲ್ ಶರ್ಮಾ, ಕಮಲೇಶ್ ತಿವಾರಿ, ಪ್ರಿಯಾಂಕಾ ರೆಡ್ಡಿ, ದಿಲ್ಬರ್ ನೇಗಿ, ರಚಿತ್ ಜಟ್, ನಿಖಿತಾ ರಜಪೂತ್, ರಿಂಕು ಶರ್ಮಾ ಇನ್ನೆಷ್ಟು ಬಲಿದಾನಗಳಾಗಬೇಕು ಸೆಕ್ಯುಲರಿಸಂ ನ ಭ್ರಮೆಯಲ್ಲಿ ಜೀವಿಸುತ್ತಿರುವ ಸೆಕ್ಯುಲರ್ ಹಿಂದೂಗಳು ಜಾಗೃತವಾಗಲು? ಜಿಹಾದಿಗಳ ವಿಕೃತ್ಯ ಮಾನಸಿಕತೆಯು ಹೇಗೆ ಈ ದುರಂತ ಘಟನೆಗಳಿಗೆ ಕಾರಣವಾಗಿದೆಯೊ ಅದಕ್ಕಿಂತ ಒಂದು ಪಟ್ಟು ಹೆಚ್ಚು ಸೆಕ್ಯುಲರ್ ಹಿಂದೂಗಳ ಮಾನಸಿಕತೆಯೂ ಕಾರಣವಾಗಿದೆ. 50 ಸಾವಿರ, 1 ಲಕ್ಷ ಮೌಲ್ಯದ ಮೊಬೈಲ್-ಐಫೋನ್ ಗಳನ್ನು ಖರೀದಿಸುವವರಿಗೆ ಆತ್ಮರಕ್ಷಣೆಗಾಗಿ ಸಾಂವಿಧಾನಿಕಬದ್ಧ ರೀತಿಯಲ್ಲಿ ಒಂದು ಆಯುಧವನ್ನು ಖರೀದಿಸಲಾಗುವುದಿಲ್ಲವೇ? ಐಫೋನ್ ಗಳು ನಿಮ್ಮ ಜೀವವನ್ನು ಉಳಿಸುತ್ತವೆಯೇ? ನಮ್ಮ ಯಾವ ದೇವ-ದೇವಿಯರ ಬಳಿ ಆಯುಧವಿಲ್ಲ ಹೇಳಿ? ಧರ್ಮ ರಕ್ಷಣಾ ಕಾರ್ಯವನ್ನು ಮಾಡುವ ಆಯುಧಗಳಿಗೆ ಮೊದಲಿನಿಂದಲೂ ಶ್ರೇಷ್ಠಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ನೀಡಲಾಗಿದೆ. ವಾಸ್ತವ ಸತ್ಯದ ಅರಿವಾಗಿ ಜಾಗೃತಗೊಂಡಿರುವವರಿಗೆ ಒಂದು ಪೆನ್, ಒಂದು ಮೈಕ್ ಕೂಡ ಆಯುಧವಾಗುತ್ತದೆ. ಸತ್ಯವನ್ನು ಉಚ್ಛರಿಸುವ ಬೌದ್ಧಿಕ ಸ್ಥೈರ್ಯ ಇಂದು ಅವಶ್ಯಕವಾಗಿರುವುದು. ಪ್ರತಿಯೊಬ್ಬ ಹಿಂದುವೂ ಪರಶುರಾಮನಂತೆ ವೇದ-ಶಾಸ್ತ್ರಗಳ ಅಧ್ಯಯನ ಮಾಡುವುದರಲ್ಲೂ, ಧರ್ಮರಕ್ಷಣೆಗೆ ಅಗತ್ಯತೆಯೊದಗಿ ಬಂದಾಗ ಯುದ್ಧ ಮಾಡುವುದರಲ್ಲೂ ಸಮರ್ಥವಾಗಿರಬೇಕು. ಶ್ರೀರಾಮ ಭಕ್ತ ರಿಂಕು ಶರ್ಮಾರಿಗೆ ನ್ಯಾಯ ದೊರಕಲಿ, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಜೈ ಶ್ರೀರಾಮ್.

~ಸಿಂಚನ.ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ