ಬಂಗಾಳದಲ್ಲಿ ಧರ್ಮ ಸ್ಥಾಪನೆಯಾಗುವುದು ಯಾವಾಗ ಆದರಣೀಯ ಪ್ರಧಾನಿ?

ಬಂಗಾಳದಲ್ಲಿ ಧರ್ಮ ಸ್ಥಾಪನೆಯಾಗುವುದು ಯಾವಾಗ ಆದರಣೀಯ ಪ್ರಧಾನಿ?
ಹಲವು ದಶಕಗಳ ಕಾಲ ರಾಜಕೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿ ನಿಂತಿರುವ ಬಂಗಾಳದ ಭೂಮಿಗೆ ನವಚೈತನ್ಯದ ಹುರುಪನ್ನು, ನವಜೀವನದ ಭರವಸೆಯನ್ನು ಮತ್ತೆ ಉಗಮಿಸುವಂತೆ ಮಾಡಿದ್ದು ಆದರಣೀಯ ಪ್ರಧಾನಿಯವರ ದೇಶಭಕ್ತಿಯ, ದೇಶಾಭಿವೃದ್ಧಿಯ ನುಡಿಗುಚ್ಛಗಳು. ಪರಿವರ್ತನೆಯನ್ನು ಬಯಸಿ ಎಲ್ಲಾ ಹಿಂಸಾಚಾರ, ಅರಾಜಕತೆಗಳಿಗೆ ಅಂತ್ಯ ಹಾಡಲು ತಮ್ಮ ಕುಟುಂಬವನ್ನೇ ಪಣಕ್ಕಿಟ್ಟು ತಮ್ಮ ಜೀವವನ್ನೇ ಧರ್ಮ ಸ್ಥಾಪನೆಯ ಯುದ್ಧದಲ್ಲಿ ಶಸ್ತ್ರವನ್ನಾಗಿ ಮಾಡಿಕೊಂಡ ಬಂಗಾಳದ ವೀರಯೋಧರ ತ್ಯಾಗ-ಬಲಿದಾನಗಳ ಪರಿಣಾಮವಾಗಿ ಭಾಜಪಾ 3ರಿಂದ 75 ಸ್ಥಾನಗಳವರೆಗೆ ಹೆಚ್ಚುವರಿಯಾಗಿದೆ. ಬಿಜೆಪಿ ಸರ್ಕಾರವನ್ನು ರಚನೆ ಮಾಡುವಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ ನಿಜ, ಆದರೆ ಕಳೆದ ಬಾರಿಗಿಂತ 15ಪಟ್ಟು ಹೆಚ್ಚು ಸ್ಥಾನ ಪಡೆದು ಸಫಲವಾಗಿದೆ ಎಂಬುವುದೇ ದೊಡ್ಡ ಗೆಲುವು. ಇನ್ನು ಮಮತಾ ಬ್ಯಾನರ್ಜಿ ಅವರು 215 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಗೆಲುವನ್ನು ದಾಖಲಿಸಿದಾಗ್ಯು, ತಮ್ಮ ಪ್ರತಿಷ್ಠೆಯ ಕಣ ನಂದಿಗ್ರಾಮದಲ್ಲಿ ಪರಾಜಯಗೊಳ್ಳುವ ಮೂಲಕ ಹಾಗೂ ತಮ್ಮ ಕಾರ್ಯಕರ್ತರ ಮೂಲಕ ನಡೆಯುತ್ತಿರುವ ಅಮಾನವೀಯ ಅಶೋಭನೀಯ ರಾಕ್ಷಸೀಕೃತ್ಯ ತೆರನಾದ ಬಿಜೆಪಿ ಕಾರ್ಯಕರ್ತರ ಹತ್ಯೆಯ ಮೂಲಕ ಗೆದ್ದೂ ಸೋತಿದ್ದಾರೆ.

ಬಂಗಾಳದ ಚುನಾವಣಾ ಫಲಿತಾಂಶ ಬಂದ ಬಳಿಕ ಆರಂಭವಾದ ಟಿಎಂಸಿಯ ವಿಜಯಯಾತ್ರೆ ಅರ್ಥಾತ್ ಬಿಜೆಪಿ ಕಾರ್ಯಕರ್ತರ ಶವಯಾತ್ರೆ ಹಾಗೂ ಅವರ ಕುಟುಂಬಗಳ ಹಿಂಸಾಯಾತ್ರೆಗಳು ನಿಶ್ಚಿಂತೆಯಿಂದ ನಿರ್ಭೀತಿಯಿಂದ ಮುಂದುವರಿಯುತ್ತಲೇ ಇರುವುದು ಭಾರತದ ಸಂವಿಧಾನಕ್ಕೆ ದೊಡ್ಡ ಕಳಂಕವೇ ಸರಿ. ಈ ಬಾರಿಯ ಚುನಾವಣಾ ಸಮಯದಲ್ಲಿ ಬಿಜೆಪಿಯು ಬಂಗಾಳಿಗರ ವಿಶ್ವಾಸ ಗಳಿಸಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಸೃಷ್ಟಿಯಾದ ಅಸುರಕ್ಷಿತಾಭಾವವು ಟಿಎಂಸಿ ಕಾರ್ಯಕರ್ತರ ದ್ವಾರ ನೂರಾರು ಬಿಜೆಪಿ ಕಾರ್ಯಕರ್ತರ ಹತ್ಯೆಯ ನಿರಂಕುಶ ಅನ್ಯಾಯದ ಯುದ್ಧದ ವಿಜಯವು ತನ್ನ ಗೆಲುವಿನ ಯಾತ್ರೆಯಲ್ಲಿ ಬಿಜೆಪಿಯ ಸಮರ್ಥನೆ ಮಾಡಿದ್ದ ಹಲವಾರು ಕಾರ್ಯಕರ್ತರ ಹತ್ಯೆಯೊಂದಿಗೆ ಆ ಕುಟುಂಬಗಳ ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯದೊಂದಿಗೆ ಸಾಗುತ್ತಿದೆ. ಯಾವುದೇ ಪಕ್ಷದ ಕಾರ್ಯಕರ್ತರ ಮೇಲೂ ಈ ರೀತಿಯ ದೌರ್ಜನ್ಯ ಆಗಕೂಡದು. ಭಾರತ ಸಂವಿಧಾನವು ಪ್ರಜೆಗಳಿಗೆ ತಮ್ಮ ನೆಚ್ಚಿನ ವ್ಯಕ್ತಿಗೆ ಬೆಂಬಲಿಸಿ ಮತ ಹಾಕುವ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. 

ಇವರಿಗೆಲ್ಲಾ ಅಮೂಲ್ಯ ಜೀವಗಳಿಗಿಂತ ರಾಜಕೀಯವೇ ಮೇಲಾಯಿತಾ? ಹತ್ಯೆಗೊಳಗಾದವರ ಕುಟುಂಬದ ಸ್ಥಿತಿ, ಅವರ ಮಕ್ಕಳ ದುಃಸ್ಥಿತಿ ಏನಾಗಬಹುದೆಂಬ ಕರುಣಾಜನಕ ಸಂದೇಶವನ್ನಾದರೂ ಅವರ ಅಂತಃಕರಣ ಕಳುಹಿಸಲಿಲ್ಲವೆ? ಅಮಾಯಕ ಜನರ ಹತ್ಯೆಯ ಕರ್ಮಫಲದ ಘೋರ ದಂಡನೆಯ ಭಯಾನಕ ಸಂದೇಶವನ್ನಾದರೂ ಕಳುಹಿಸಲಿಲ್ಲವೆ? ಮುಂದೆ ತಮ್ಮ ಜೀವನದಲ್ಲೂ ಹೀಗೇನಾದರೂ ಆದರೆ ತಮ್ಮನ್ನೇ ನೆಚ್ಚಿಕೊಂಡಿರುವವರ ಸ್ಥಿತಿ ಹೇಗೆ ಶೋಚನೀಯವಾಗಬಹುದೆಂಬ ನೊಂದ ಜನರ ಘೋರ ಶಾಪದ ಸಂದೇಶವನ್ನಾದರೂ ಕಳುಹಿಸಲಿಲ್ಲವೆ? ಇದೆಲ್ಲ ಬಿಡಿ, ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಖಂಡಿತ ಶಿಕ್ಷೆಯಾಗುವುದು ಎಂಬ ಸಾಮಾನ್ಯ ಜ್ಞಾನದ ಸಂದೇಶವನ್ನಾದರೂ ಕಳುಹಿಸಲಿಲ್ಲವೆ? ಟಿಎಂಸಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ, ಸಕ್ಷಮ ಆಡಳಿತ ವ್ಯವಸ್ಥೆ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ವ್ಯವಸ್ಥೆಗಳು ಅಸ್ತಿತ್ವದಲ್ಲಿದೆಯೊ ಇಲ್ಲವೊ? ಧರ್ಮ, ನ್ಯಾಯ, ನೀತಿ, ಮಾನವೀಯತೆ, ಕರುಣೆ, ದಯೆಯಂತಹ ಸುಭದ್ರ ಸಮಾಜದ ತತ್ತ್ವಗಳು ಅಸ್ತಿತ್ವದಲ್ಲಿದೆಯೊ ಇಲ್ಲವೊ?

ಕೇಂದ್ರೀಯ ಮಂತ್ರಿ ಮುರುಳೀಧರನ್ ಅವರು ಕಾರ್ ನಲ್ಲಿ ಚಲಿಸುತ್ತಿರುವಾಗ ಅವರ ಮೇಲೂ ದಾಳಿಯಾಗಿದೆ, ಇನ್ನು ನೀವೆ ಚಿಂತಿಸಿ ಕೇಂದ್ರೀಯ ಮಂತ್ರಿಗಳಿಗೇ ಈ ಪರಿಸ್ಥಿತಿ ಉಂಟಾಗಿರುವಾಗ ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಯಾವ ಹಂತದಲ್ಲಿರಬಹುದು? ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಸ್ವತಃ ರಾಜ್ಯಪಾಲರೆ ಅವರ ಎದುರಿಗೆ ಹಿಂಸಾಚಾರವನ್ನು ನಿಲ್ಲಿಸಿ ಸಂವಿಧಾನಾತ್ಮಕವಾದ ಆಡಳಿತ ಶುರುವಾಗಿ ಶಾಂತಿಯನ್ನು ಕಾಪಾಡಬೇಕೆಂದು ವಿನಂತಿಸಿದರು. ಇಷ್ಟೆಲ್ಲಾ ಪ್ರಚಲಿತದಲ್ಲಿರುವ ದೌರ್ಭಾಗ್ಯ ಪೂರ್ಣ ಸಂಗತಿಗಳ ದುಃಖವನ್ನು, ಆಕ್ರೋಶವನ್ನು ಅನುಭವಿಸಿದ ಮೇಲೂ ಮತ್ತೊಂದು ಇದಕ್ಕಿಂತ ಹೆಚ್ಚು ದೌರ್ಭಾಗ್ಯ ಪೂರ್ಣ ಸಂಗತಿಯೊಂದು ತೆರೆದುಕೊಳ್ಳುತ್ತದೆ. ಅದುವೇ ಮಮತಾ ಬ್ಯಾನರ್ಜಿ ಅವರ ಗೆಲುವನ್ನು ಸಂಭ್ರಮಿಸಿ ಅಭಿನಂದನೆ ಸಲ್ಲಿಸಿ ಇಡೀ ದಿನ ರಾರಾಜಿಸಿದ ಪಕ್ಷಗಳ ಯಾವೊಬ್ಬ ನಾಯಕರೂ ಪ್ರಚಲಿತ ಅಮಾನುಷ ಹಿಂಸಾಚಾರದ ಹತ್ಯೆಯನ್ನು ಖಂಡಿಸಿ ಒಂದೇ ಒಂದು ಮಾತು ಸಹ ಆಡಿಲ್ಲ. ಜೊತೆಗೆ ತಮ್ಮನ್ನು ತಾವು ವಾಕ್ ಸ್ವಾತಂತ್ರ್ಯದ ಹೋರಾಟಗಾರರು, ಅತ್ಯಂತ ಶ್ರೇಷ್ಠ ಬುದ್ಧಿಜೀವಿಗಳು, ಜಾತ್ಯತೀತವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು ಎಂದೆಲ್ಲಾ ಶೀರ್ಷಿಕೆಗಳನ್ನು ಕೊಟ್ಟು ಕೊಂಡು ಅದರ ಹಿಂದೆ ಮಾತ್ರ ನಿರ್ದಿಷ್ಟವಾದ ಅಜೆಂಡಾ ಪರ ಕಾರ್ಯ ನಿರ್ವಹಿಸುತ್ತಿರುವವರು ಯಾರು ಭಯೋತ್ಪಾದಕರನ್ನು ಸಮರ್ಥಿಸಿಕೊಂಡು ಭಾರತೀಯ ಸೈನಿಕರನ್ನು ಅವಹೇಳನ ಮಾಡಲು ಸಂಕೋಚ ಪಡುವುದಿಲ್ಲವೊ, ಯಾರು ಪಾಶ್ಚಿಮಾತ್ಯ ಸಂಸ್ಕೃತಿಯನ್ನೇ ಸಮರ್ಥಿಸಿಕೊಂಡು ಭಾರತೀಯ ಆತ್ಮ ಧರ್ಮ-ಸಂಸ್ಕೃತಿಯನ್ನೇ ಅವಹೇಳನ ಮಾಡಲು ಸಂಕೋಚ ಪಡುವುದಿಲ್ಲವೊ ಅವರು ಯಾರೂ ಸಹ ಬಂಗಾಳದ ಹಿಂಸಾಚಾರವನ್ನು ಖಂಡಿಸಿಲ್ಲ. ಬದಲಾಗಿ ಕೆಲವರು ಸಮರ್ಥಿಸಿಕೊಂಡಿಯೂ ಇದ್ದಾರೆ. ಹಾಗೆಯೇ ಧೈರ್ಯದಿಂದ ಸಾಹಸದಿಂದ ಸಮಾಜಕ್ಕೆ ಸತ್ಯವನ್ನು ತಿಳಿಸಿ, ಅರ್ಥೈಸುವ ಮೂಲಕ ಪ್ರಜೆಗಳನ್ನು ಜಾಗರೂಕರನ್ನಾಗಿಸಬೇಕಾದ ಜವಾಬ್ದಾರಿಯನ್ನು ಹೊತ್ತಿರುವ ಮುಖ್ಯ ಮಾಧ್ಯಮದವರು ಯಾರು ಚುನಾವಣಾ ಫಲಿತಾಂಶದ ದಿನವಿಡೀ ಮಮತಾ ಬ್ಯಾನರ್ಜಿಯ ಸಾಧನೆಯನ್ನು ಕೊಂಡಾಡುವುದಕ್ಕಾಗಿ ದೇಶವನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಕೊರೊನಾದ ಬಗೆಗಿನ ಪ್ರಸಾರವನ್ನು ನಿಲ್ಲಿಸಿದ್ದರೊ ಅವರಲ್ಲಿ ಕೆಲವು ರಾಷ್ಟ್ರವಾದಿ ಪತ್ರಕರ್ತರ ಹೊರತಾಗಿ ಬೇರೆ ಯಾರೂ ಕೂಡ ಜೋರಾದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಬಂಗಾಳದಲ್ಲಿ ಕೊರೊನಾ ವೈರಸ್ ಗಿಂತ ಅಧಿಕವಾಗಿ ಟಿಎಂಸಿ ವೈರಸ್ ನಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಬಂಗಾಳಿಗರ ದುಃಖದ ಅತಿ ದೊಡ್ಡ ಆತಂಕದ ಸುದ್ದಿಯನ್ನು ಹೆಚ್ಚಾಗಿ ಪ್ರಸಾರ ಮಾಡಿ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ಇಂತಹ ಕಾಠಿಣ್ಯತೆಯ ಸಂದರ್ಭದಲ್ಲಿ ಸಂಜೀವಿನಿಯಾಗಿ ಸಹಕರಿಸುತ್ತಿರುವುದೇ ಸಾಮಾಜಿಕ ಜಾಲತಾಣಗಳು. ಈ ರೀತಿಯ ಕೆಳಸ್ತರದ ಮಾನಸಿಕತೆಯ ಜನರು ರಾಷ್ಟ್ರಹಿತವನ್ನೇ ಮರೆತು ಸ್ವಹಿತಾಸಕ್ತಿಯ ತಮ್ಮ ರಾಜಕೀಯವನ್ನು, ಪ್ರೊಪಗ್ಯಾಂಡವನ್ನು ನಡೆಸಲು ಸತ್ಯಪಥದಿಂದ ರಾಷ್ಟ್ರಸರ್ವೋಪರಿ ಪಥದಿಂದ ವಿಮುಖವಾಗಿರುವುದು ಅಶೋಭನೀಯ. ಒಗ್ಗಟ್ಟಿನ ಶಕ್ತಿಯ ಮತಗಳ ಲಾಭವನ್ನು ಗಳಿಸಲು ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡುವ, ಪಾಶ್ಚಿಮಾತ್ಯ ಆರ್ಥಿಕತೆಗೆ ಬಲಿಯಾಗಿ ದೇಶದ ಪ್ರಾಮುಖ್ಯತೆಯನ್ನು ಕಡೆಗಣನೆ ಮಾಡಿ ಪತ್ರಿಕಾಗಾರಿಕೆ ನಡೆಸುವ, ಭಾರತ ಭೂಮಿಯ ಮೂಲಭೂತ ತತ್ತ್ವವೇ ಆಗಿರುವ ಹಿಂದೂ ಧರ್ಮ-ಸಂಸ್ಕೃತಿಯ ಮೌಲ್ಯವನ್ನು ಅರಿಯದೆಯೋ ಅಥವಾ ಅನ್ಯ ಸಂಸ್ಕೃತಿಗಳ ಭಯ ಹಾಗೆಯೇ ಬಲವಂತದ ಮತಾಂತರದ ಕಾರಣದಿಂದಲೋ ಅಥವಾ ಸನಾತನ ಧರ್ಮದ ಬಗೆಗಿನ ಅಜ್ಞಾನದಿಂದ ಅನ್ಯ ಸಂಸ್ಕೃತಿಯೆಡೆಗೆ ಆಕರ್ಷಿತರಾಗಿ ಅವರು ನಡೆಸುತ್ತಿರುವ ಪ್ರಭಾವದ ಜಾಲದಲ್ಲಿ ಬಿದ್ದು ಈ ದೇಶದ ಶ್ರೇಷ್ಠ ಸಂಸ್ಕೃತಿಯನ್ನೇ ನಿಂದನೆ ಮಾಡುವ ಅನುಚಿತ ಕಾರ್ಯಗಳು ಹೀಗೇ ಮುಂದುವರಿಯುತ್ತಿದ್ದರೆ ಈ ವೈಚಾರಿಕ ಸಮರವು ಘೋರ ಅನರ್ಥ ಪರಿಣಾಮವನ್ನು ಎದುರಿಸಬೇಕಾಗುವುದು. ಭಾರತೀಯ ಧರ್ಮ-ಸಂಸ್ಕೃತಿಯು ಸಾವಿರಾರು ಸಂವತ್ಸರಗಳ ಇತಿಹಾಸವನ್ನು ಹೊಂದಿರುವ, ಸಾವಿರಾರು ಮಹಾನ್ ಸಾಧಕರ ಜ್ಞಾನ ಭಂಡಾರವನ್ನು ಹೊಂದಿರುವ, ದೈಹಿಕ- ಮಾನಸಿಕ- ಆಧ್ಯಾತ್ಮಿಕ ಎಲ್ಲಾ ಸ್ತರಗಳಲ್ಲೂ ಮಾನವಕಲ್ಯಾಣವನ್ನು ಸಾಧಿಸಲು ಅಗ್ನಿ ಪ್ರಜ್ವಲಿತ ತಪಸ್ಸಿನ ಸತ್ಯ ಭೋದನೆಗಳನ್ನು ಹೊಂದಿರುವ ಪ್ರಪಂಚದ ಕಲ್ಯಾಣಕಾರಿ ಮಾರ್ಗವಾಗಿದೆ. ಇಂತಹವರ ಅಜ್ಞಾನದಿಂದಲೋ ಅಥವಾ ಲೋಭಗೊಂಡ ಜ್ಞಾನದಿಂದಲೋ ಇವರು ಮಾಡುತ್ತಿರುವ ಕಾರ್ಯಗಳು ಇಡೀ ವಿಶ್ವದ ಅಭ್ಯುದಯಕ್ಕೆ ಬೆಳಕನ್ನು ನೀಡುವ ಸಾಮರ್ಥ್ಯ ಹೊಂದಿರುವ ಸನಾತನ ಧರ್ಮದ ಪ್ರಖರ ಜ್ಯೋತಿಯನ್ನು ನಂದಿಸಲು ಮಾಡುತ್ತಿರುವ ಪ್ರಯತ್ನಗಳಾಗಿ ಮಾರ್ಪಟ್ಟಿದೆ. ಸಮಾಜದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿಗಳು ಸುಭದ್ರವಾಗಿರಲು ಈ ಪ್ರಯತ್ನಗಳು ಸಫಲವಾಗಲು ಅವಕಾಶ ನೀಡಬಾರದು.

ಯಾರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರಾಜಕೀಯ ಹಿಂಸಾಚಾರದ ಅಂತ್ಯಕ್ಕೆ ಸಮರ್ಥನೆ ನೀಡಿ ರಣರಂಗಕ್ಕೆ ಧಾವಿಸಿದರೊ ಅವರ ಜೀವ, ಜೀವನ ಎರಡೂ ಸಂಕಷ್ಟದಲ್ಲಿದೆ. ಮೋದೀಜಿ ನೀವು ಪ್ರಜಾಪ್ರಭುತ್ವವನ್ನು ವಿರೋಧಿಸಬಾರದೆಂದೊ ಅಥವಾ ಪ್ರಪಂಚದ ಮಾಧ್ಯಮಗಳು ನಿಮ್ಮನ್ನು ಹೇಗೆ ಚಿತ್ರಿಸುತ್ತವೆಂದೊ ಅಥವಾ ದೇಶವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಸಮಸ್ಯೆಯ ಒತ್ತಡದಿಂದ ಹೊರ ಬರಲಾಗುತ್ತಿಲ್ಲವೆಂದೊ ಇಂದು ನೀವು ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟು ನಿಮ್ಮ ಪಕ್ಷಕ್ಕಾಗಿ ಕಾರ್ಯ ಮಾಡಿದ ಕಾರ್ಯಕರ್ತರ ಜೀವನವನ್ನು ಸಂರಕ್ಷಿಸಲಾಗಲಿಲ್ಲವೆಂದರೆ ನಿಮ್ಮ ಎಲ್ಲಾ ದೇಶಭಕ್ತ ಅಭಿಮಾನಿಗಳ ನಂಬಿಕೆ ಮುರಿಯುವುದು. ನರ ಸಂಹಾರದ ಘೋರ ಪಾಪದ ಕೃತ್ಯವನ್ನು ಮಾಡುತ್ತಿರುವ ಟಿಎಂಸಿ ಕಾರ್ಯಕರ್ತರಿಗೆ ಸೌಜನ್ಯ ಭಾಷೆ ಅರ್ಥವಾಗುವುದಿಲ್ಲ, ಅವರ ಕರ್ಮಕ್ಕೆ ತಕ್ಕ ದಂಡನೆ ನೀಡಿ. ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ ಮಹಾನ್ ಸಂತ, ದೇಶಭಕ್ತರಿಗೆ ಜನ್ಮ ನೀಡಿದ ಪುಣ್ಯಭೂಮಿ ಬಂಗಾಳವನ್ನು ರಕ್ಷಿಸಿ. ನಿಮ್ಮ ಅತೀವ ಸಜ್ಜನಿಕೆಯ ಧೋರಣೆಯು ಅಪರಾಧಿಗಳಿಗೆ ಶಿಕ್ಷೆ ಕೊಡಲಾಗುವುದಿಲ್ಲವೆಂದರೆ, ನಿಮ್ಮನ್ನು ಬೆಂಬಲಿಸಿದಕ್ಕಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವ ಕಾರ್ಯಕರ್ತರ ಬಲಿದಾನ ನಿಮಗೆ ಸ್ವೀಕಾರವಿದೆಯೆ? ಆ ನೊಂದ ಪರಿವಾರಗಳಿಗೆ ನೀವು ಖಂಡಿತ ನ್ಯಾಯವನ್ನು ಒದಗಿಸುತ್ತೀರೆಂಬ ನಂಬಿಕೆ ಇನ್ನೂ ಜೀವಂತವಿದೆ. 

ಟಿಎಂಸಿಯ ಕಾರ್ಯಕರ್ತರು ತಮ್ಮ ವಿಜಯಯಾತ್ರೆಯಲ್ಲಿ ಪರಾಜಿತರ ಅಂಗಡಿಗಳನ್ನು ಲೂಟಿ ಮಾಡುವಾಗ, ಅವರ ಮನೆಯ ಆಸ್ತಿ-ಸಂಪತ್ತನ್ನು ಲೂಟಿ ಮಾಡುವಾಗ, ಅವರ ಕುಟುಂಬದ ಮಹಿಳೆಯರ ಅತ್ಯಾಚಾರ-ದೌರ್ಜನ್ಯವನ್ನು ಮಾಡುವಾಗ ಕೆಲವರು ತಾವು ಟಿಎಂಸಿಗೆ ಮತ ನೀಡಿದ್ದೇವೆ ಎಂದು ಹೇಳಿದರೂ ಅವರು ಹಿಂದೂ ಎನ್ನುವ ಕಾರಣಕ್ಕಾಗಿ ಅವರ ಮೇಲೆ ಶೋಷಣೆ ನಡೆಸಲಾಗುತ್ತಿದೆ. ಈ ರೀತಿಯ ಪ್ರಕರಣಗಳು 1946ರಲ್ಲಿ ಮೊಹಮ್ಮದ್ ಜಿನ್ನಾ ಅವರು ಕರೆ ನೀಡಿದ್ದ ಡೈರೆಕ್ಟ್ ಆಕ್ಷನ್ ಡೇ ಯನ್ನು ನೆನಪಿಸುತ್ತಿದೆ. ಸಾವಿರಾರು ಜನರು ಬಂಗಾಳದಿಂದ ಅಸ್ಸಾಂ ಗೆ ಸ್ಥಳಾಂತರಗೊಂಡಿದ್ದಾರೆ. ಇಷ್ಟೆಲ್ಲಾ ಶೋಷಣೆಗಳು ಜಾರಿಯಲ್ಲಿದ್ದರೂ ಅಪರಾಧಿಗಳಿಗೆ ಶಿಕ್ಷೆಯಾಗದ, ಶೋಷಿತರಿಗೆ ಬೆಂಬಲ ಸಿಗದ, ಸರ್ಕಾರ- ಮಾಧ್ಯಮಗಳ ಸಂರಕ್ಷಣೆ ದೊರೆಯದ ಇಂದಿನ ಬಂಗಾಳದ ಸ್ಥಿತಿಯು ಕಾಶ್ಮೀರಿ ಹಿಂದೂಗಳ ಸ್ಥಿತಿಯನ್ನು ಸ್ಮರಿಸುತ್ತಿದೆ. ಹೇಗೆ ಅವರು ಅಸಹಾಯಕರಾಗಿ ಯಾರ ಬೆಂಬಲವೂ ಸಿಗದೆ, ದುಷ್ಟ ರಾಕ್ಷಸರಿಂದ ತಮ್ಮ ಜೀವ ಉಳಿಸಿಕೊಳ್ಳಲು ಪಲಾಯನ ಮಾಡಿದರೊ ಅಂತಹ ಅಸಹಾಯಕ ಪರಿಸ್ಥಿತಿ ಮತ್ತೆಂದೂ ಮರುಕಳಿಸಬಾರದೆಂದು ಒಂದು ವೇಳೆ ಸರ್ಕಾರಗಳು ಬಂಗಾಳದ ಹಿಂದೂ ಸಮಾಜಕ್ಕೆ ಸಂರಕ್ಷಣೆ ನೀಡುವುದಿಲ್ಲವಾದರೆ ಬಂಗಾಳಕ್ಕೆ ಆಗಮಿಸಿ ಸ್ವತಃ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳಗಳೇ ಅಭಯವನ್ನು ನೀಡುವುದಾಗಿ ಷೋಷಿಸಿವೆ. ಹಿಂದೂ ಸಮಾಜವು ಯಾವಾಗಲೂ ಒಗ್ಗಟ್ಟಾಗಿದ್ದರೆ ಮಾತ್ರ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂಬುದು ಈ ವಾಸ್ತವಿಕ ಘಟನೆಗಳಿಂದ ಮತ್ತಷ್ಟು ಮನದಟ್ಟಾಗುತ್ತಿದೆ.

~ಸಿಂಚನ ಎಂ.ಕೆ ಮಂಡ್ಯ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ