ದೇಶ ಭಕ್ತಿ ಗೀತೆ ರಚನೆ

ದೇಶಭಕ್ತಿ ಗೀತೆ ರಚನೆ🇮🇳🕉

ಹೇ ಮಾತಾ, ವಂದನೀಯ ಪೂಜನೀಯ ಮಾತಾ
ಇಂಥ ಪುಣ್ಯಭೂಮಿಯಲ್ಲಿ ಜನಿಸಿದ ನಾವೇ ಧನ್ಯ

ದೇಶಭಕ್ತಿಗೇ ಘನತೆ ತಂದದ್ದು ಈ ದೇಶ ನಮ್ಮ ದೇಶ ಭಾರತ
ಈ ಮಣ್ಣಿನ ಕಣ-ಕಣವೂ ಪವಿತ್ರ, ಜೀವಿಯ ಮನ-ಮನವೂ ದೇವಸ್ಥಾನ
ಸಾಕ್ಷಾತ್ ಭಗವಂತನ ಅವತಾರದ ಕಾರ್ಯಕ್ಕೆ ಕರ್ಮಭೂಮಿಯಾದ ಹಿಂದೂಸ್ಥಾನ
ವೇದ ಉಪನಿಷತ್ತುಗಳ ಮಹಾಜ್ಞಾನವನ್ನು ಜಗತ್ತಿಗೆ ನೀಡಿದ ಭವ್ಯಭೂಮಿ ಭಾರತ
ಮಾತೃದೇವೋಭವ ಪಿತೃದೇವೋಭವ ಗುರುದೇವೋಭವ ಸಂಸ್ಕೃತಿಯ ಸಾರ ಭಾರತ
ಹಿಮಾಲಯದ ಸೌಂದರ್ಯ, ಸಸ್ಯ ಸಮೃದ್ಧ ಔದಾರ್ಯ ಹಲವು ವಿಸ್ಮಯ ಜೀವಿಗಳ ಆಶ್ಚರ್ಯ
ಆಧ್ಯಾತ್ಮಿಕತೆಯ ಔನ್ನತ್ಯ, ಶೌರ್ಯ-ಸಾಹಸ-ಬಲಿದಾನದ ಪರಾಕಾಷ್ಠ

ಅತ್ಯಂತ ಪ್ರಾಚೀನ ನಾಗರೀಕತೆಯ ಸೃಷ್ಟಿಸಿದ್ದ ಕಾಲ, ಉಳಿದಲ್ಲೆಲ್ಲ ಇನ್ನೂ ಆಗುತ್ತಿತ್ತು ಜೀವದ ವಿಕಾಸ
ತ್ರೇತಾಯುಗದ ಶ್ರೀರಾಮ, ದ್ವಾಪರಯುಗದ ಶ್ರೀಕೃಷ್ಣನ ವೈಭವಶಾಲಿ ಸ್ಮೃತಿಯ ಸೌಭಾಗ್ಯ
ಜನುಮ ಜನುಮ ಕಳೆದರೂ ಮುಗಿಯದ ಧರ್ಮದ ಪಾಠ ರಾಮಾಯಣ ಮಹಾಭಾರತ
ಮಹಾ-ಮಹಾ ಗ್ರಂಥಗಳ ಸಾಹಿತ್ಯ ಸಾಗರ, ಕಲಿಕೆ ಅಪಾರ, ಶ್ರದ್ಧೆಯೊಂದೇ ಆಧಾರ
ಮಾತಾ ನಿನ್ನ ಕೀರ್ತಿ ಪತಾಕೆಯನ್ನು ಹಾರಿಸಿದವರೆಷ್ಟು ಜನ ಮಾತಾ ಎಷ್ಟು ಜನ
ಆ ಕೀರ್ತಿಯ ಹಾದಿಯಲ್ಲಿ ಮಡಿದು ಹುತಾತ್ಮರಾದವರೆಷ್ಟು ಜನ
ಯಾವ ವೀರನ ಸ್ಮರಣೆ ಮಾಡಲಿ, ಯಾವ ವೀರನ ಮರೆತು ಬಿಡಲಿ

ಇಸ್ಲಾಂ ಕ್ರೈಸ್ಟ್ ವಿದೇಶಿ ಆಕ್ರಮಣಕ್ಕೆ ನಿರ್ನಾಮವಾದವು ದೊಡ್ಡ ದೊಡ್ಡ ರಾಷ್ಟ್ರಗಳು
ಹಿಂದೂಸ್ಥಾನದ ಪರಾಕ್ರಮದ ಮುಂದೆ ಶರಣಾಗತರಾದರು ಆಕ್ರಮಣಕಾರರು
ಧೀರಾದಿಧೀರ ರಾಜರ ಶೌರ್ಯಗಾಥ, ಸ್ವಾತಂತ್ರ್ಯ ಹೋರಾಟ ಎಂದೆಂದಿಗೂ ಅಮರಾಮರ
ಪಾಕೀ-ಚೀನೀಯರ ಮೋಸ ಕಪಟದಾಟ, ಭಯೋತ್ಪಾದಕತೆಯ ಕಾಟ
ಪ್ರತ್ಯುತ್ತರ ನೀಡಿ ಪಾಠ ಕಲಿಸುತ್ತಿದೆ ಭಾರತೀಯ ಸೇನೆಯ ಯಶೋಗಾಥ
ಈ ಶತಮಾನದಲ್ಲಿ ಆರಂಭವಾಗಿದೆ ದೇಶದ್ರೋಹಿಗಳ ವಿರುದ್ಧ ಹೋರಾಟ
ಅಧರ್ಮ ಅನುಚಿತ ಕಾರ್ಯಗಳ ಮೌಲ್ಯವ ತೆಗೆದುಕೊಳ್ಳದೆ ಬಿಡದು ದೇಶಭಕ್ತರ ಬೀಡು ಭಾರತ

-ಸಿಂಚನ ಎಂ ಕೆ

Comments

Popular posts from this blog

ಭೂಪತಿಯ ಬಾಳಿನ ಕ್ಷಮಯಾಧರಿತ್ರಿ......

ಸ್ವಾಭಿಮಾನದಿಂದ ಕಟ್ಟಲ್ಪಟ್ಟ ಸಾಹಸಿಗರ ಬೀಡು ಕನ್ನಡನಾಡು

ಕಾರ್ಗಿಲ್ ವೀರರ ಸಾಹಸಗಾಥೆ