ಲವ್ ಜಿಹಾದ್ ಗೆ ಬಲಿಯಾದ ನತದೃಷ್ಟ ಹೆಣ್ಣು ಮಗಳು ಶ್ರದ್ಧಾ!

ಲವ್ ಜಿಹಾದ್ ಗೆ ಬಲಿಯಾದ ನತದೃಷ್ಟ ಹೆಣ್ಣು ಮಗಳು ಶ್ರದ್ಧಾ!
ಅಪ್ಪಾ.....ಅಮ್ಮಾ......(ಅತೀವ ವೇದನೆಯಿಂದ ಕೂಡಿರುವ ಚೀರಾಟ, ಕೂಗಾಟ) ಸಾಧ್ಯವಾದರೆ ನನ್ನನ್ನು ಕ್ಷಮಿಸಿ. ನನ್ನ ಈ ಭಯಂಕರ ಭವಿಷ್ಯವನ್ನು ನೀವು ಅಂದೇ ಕಂಡಿದ್ದಿರಿ, ಆದ್ದರಿಂದಲೇ ನಿಮ್ಮ ಕಾಳಜಿ-ಸಂರಕ್ಷಣೆಯಲ್ಲಿ ಬೆಳೆದ ಆ ತವರು ಮನೆಯ ಹೊಸ್ತಿಲನ್ನು ದಾಟಿ ಭಯಂಕರವಾದ 'ಉಗ್ರ'ನ ಮನೆಗೆ ನಾನು ಹೋಗದಿರಲೆಂದು ನಿಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿದಿರಿ. 'ಫಾರ್ವರ್ಡ್-ಮಾಡ್ರನ್' ಎಂಬ ಜಗತ್ತಿನ ವೆಸ್ಟರ್ನ್ ಸೂತ್ರವನ್ನು ಅನ್ವಯಿಸಿಕೊಂಡು ಬಲಿಪಶುಗಳಾಗುವಂತೆ ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗಾಗಿ ನಿರ್ಮಿಸಲಾಗಿರುವ ಖೆಡ್ಡಾಗೆ ಬಿದ್ದೆ. 'ಅಪ್ಡೇಟೆಡ್-ಟ್ರೆಂಡಿಂಗ್' ಎಂಬ ನಾಟಕ ಮಾಡುತ್ತಿರುವವರ ಜಾಲಕ್ಕೆ ಸಿಲುಕಿ ನನ್ನ ಜನನಿ, ಜನ್ಮಭೂಮಿಯ ಮೌಲ್ಯ-ಸಂಸ್ಕೃತಿಗಳನ್ನು ತಿಳಿದುಕೊಳ್ಳಲಾಗದೆ ಅಜ್ಞಾನಿಯಾದೆ, ಅಶಕ್ತಳಾದೆ, ಸಮಸ್ಯೆಗಳನ್ನು ಸಾಹಸದಿಂದ ಎದುರಿಸಲಾಗದೆ ಸಾಮರ್ಥ್ಯಹೀನಳಾದೆ. 'ಎಲ್ಲಾ ಮಾನವರೂ ಒಂದೆ, ಎಲ್ಲಾ ಸಂಸ್ಕೃತಿ-ಆಚರಣೆಗಳು ಒಂದೆ' ಎಂಬ ಅತ್ಯಂತ ದೊಡ್ಡ ಸುಳ್ಳಿನ ಸೆಕ್ಯುಲರಿಸಂನ ಬಾಣಕ್ಕೆ ಗುರಿಯಾಗಿ ನಮ್ಮ ಸಂಸ್ಕೃತಿಗೆ ತದ್ವಿರುದ್ಧವಾದ ನಮ್ಮ ಆಸ್ಥೆಗೆ ಗೌರವವನ್ನೇ ನೀಡದ ಸಂಸ್ಕೃತಿಗೆ ಸೇರಿದ ಅಫ್ತಾಬ್ ನ ಜೊತೆ ಸುಂದರ ಬಾಳನ್ನು ಕಟ್ಟಿಕೊಳ್ಳುವ ಕನಸು ಕಂಡು ಮೋಸಕ್ಕೆ ಬಲಿಯಾದೆ. ಜವಾಬ್ದಾರಿಯನ್ನೇ ವಹಿಸಿಕೊಳ್ಳದೆ ನಿರಾಯಾಸವಾಗಿ, ವಚನವನ್ನೇ ನೀಡದೆ ಬಂಧನರಹಿತವಾಗಿ, ಧರ್ಮವನ್ನೇ ಪಾಲಿಸದೆ ಮೃಗಸದೃಶರಾಗಿ ಬದುಕುವ ಮಾರ್ಗವಾದ 'ಲಿವ್ ಇನ್ ರಿಲೇಷನ್ ಶಿಪ್' ಎಂಬ ಸೆಲೆಬ್ರಿಟಿಗಳ ಪಾಶ್ಚಾತ್ಯ ಶೈಲಿಯನ್ನು ಭಾರತೀಯ ಸಮಾಜದಲ್ಲಿ ರೂಢಿಗೆ ತಂದು ಯಶಸ್ವಿಯಾಗಿಸಲು ನಡೆಸುತ್ತಿರುವ ಹುನ್ನಾರದ ಸುಳಿಯಲ್ಲಿ ಸಿಲುಕಿಕೊಂಡೆ. ಸ್ವರ್ಗದ ದಾರಿ ಎಂದು ಬೋರ್ಡ್ ಹಾಕಿ ನರಕಕ್ಕೆ ನೇರವಾಗಿ ಟಿಕೆಟ್ ನೀಡುವ ಈ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ಬೆಲೆಯನ್ನು ತೆರಬೇಕಾಗುತ್ತದೆ. ಕಾಂಟ್ರಾಕ್ಟ್ ನಂತೆ ಕೆಲಕಾಲ ಜೊತೆಯಲ್ಲೇ ಬದುಕುವ ಹುಡುಗ - ಹುಡುಗಿ ಸಮಯ ಪೂರ್ಣವಾದ ನಂತರ ಇಬ್ಬರಲ್ಲೊಬ್ಬರು ಟೈಮ್ ಪಾಸ್ ಮಾಡಿದ್ದು ಮತ್ತೊಬ್ಬರು ವಾಸ್ತವದಲ್ಲಿ ಆಳವಾಗಿ ಪ್ರೀತಿ ಮಾಡಿದ್ದರೆ ಅವರು ಡಿಪ್ರೆಶನ್ ಗೆ ಹೋಗುವ ಸಾಧ್ಯತೆಯಿರುತ್ತದೆ. ಇಬ್ಬರೂ ಜೊತೆಗೆ ಬಾಳುತ್ತಿರುವಾಗ ಹುಡುಗಿಯು ಗರ್ಭ ಧರಿಸಿದರೆ ಅದರ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದು, ಅದರಿಂದ ಪರಿವಾರ-ಸಮಾಜದವರ ತಿರಸ್ಕಾರ, ಒಂದು ವೇಳೆ ಮಗುವನ್ನು ಉಳಿಸಿಕೊಂಡರೆ ಅದರ ಬೆಳವಣಿಗೆಯ ಮೇಲಾಗುವ ಪರಿಣಾಮ, ಮಗುವಿನ ಜೀವನ ರೂಪಿಸುವಲ್ಲಿನ ಅಡೆತಡೆಗಳು, ಹುಡುಗಿಗೆ ಹುಡುಗನಿಂದ ಶೋಷಣೆಯಾಗುತ್ತಿದ್ದರೂ ಸಾಮಾಜಿಕ ಭಯದಿಂದ ಸಹಿಸಿಕೊಳ್ಳುವುದು ಹೀಗೆ ನಾನಾ ಬಗೆಯ ಜಟಿಲ ಸಮಸ್ಯೆಗಳು! ಅದಕ್ಕೆ ಹೇಳೋದು ಸ್ತ್ರೀ ಗೆ ಆಕೆಯ ಸಚಾರಿತ್ರ್ಯವೇ ಸಂರಕ್ಷಣೆ ಎಂದು. 

ನನ್ನ ಹೊರತಾಗಿ ಇನ್ನೂ 20 ಹಿಂದೂ ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದಂತಹ, ನನ್ನನ್ನು ಅಮಾನವೀಯವಾಗಿ ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದಿರುವ ಬಗ್ಗೆ ಯಾವುದೇ ಪಶ್ಚಾತ್ತಾಪವನ್ನು ಹೊಂದಿರದಂತಹ, ಕಲಿಯುಗದ ಘೋರ ರಾಕ್ಷಸ ಅಫ್ತಾಬ್ ನ ಮೇಲಿನ ಕುರುಡು ಪ್ರೀತಿಯಿಂದ ನಮ್ಮ ಮನೆಯ ವಸಲನ್ನು ದಾಟಿ ಹೋಗುವಾಗ ನನಗೆ ಅರ್ಥವಾಗಲಿಲ್ಲ. ನಾನು ಕೇವಲ ವಸಲನ್ನು ದಾಟಲಿಲ್ಲ, ನನ್ನ ತಂದೆ-ತಾಯಿಯ ಎದೆಗೆ ಒದ್ದು ಅವರ ಹೃದಯವನ್ನು 35ಕ್ಕಿಂತ ಹೆಚ್ಚು ಚೂರುಗಳಾಗಿ ಮಾಡಿ ಹೋಗುತ್ತಿದ್ದೇನೆಂದು!! ಇಂದು ನಾನೇ ಆ ರಾಕ್ಷಸನಿಂದ 35 ಚೂರುಗಳಾಗಿ ಹತ್ಯೆಯಾಗಿದ್ದೇನೆ. ಹಾಗಾದರೆ 35 ಚೂರುಗಳನ್ನಾಗಿ ನನ್ನನ್ನು ಕತ್ತರಿಸಿದ ಅಫ್ತಾಬ್ ನನ್ನನ್ನು ಲವ್ ಮಾಡಿದ್ದಾ ಅಥವಾ ಜಿಹಾದ್ ಮಾಡಿದ್ದಾ??? ಹಿಂದೂಗಳನ್ನು ಕಾಫಿರರು ಎಂದು ಕಾಣುವ ಪರ ಸಂಸ್ಕೃತಿಗರಾದ ಮುಸಲ್ಮಾನರ ಜೊತೆ ಸಂಬಂಧ ಬೆಳೆಸಿದ ಹಿಂದೂ ಹುಡುಗಿಯರು ಸೂಟ್ ಕೇಸ್ ನಲ್ಲಿ ಪ್ಯಾಕ್ ಆಗಿ ಬಂದರು, ಆಸಿಡ್ ದಾಳಿಗೆ ಒಳಗಾಗಿ ಸುಟ್ಟು ಬೂದಿಯಾದರು, ಎತ್ತರದ ಕಟ್ಟಡದಿಂದ ದೂಡಲ್ಪಟ್ಟು ಹೆಣವಾದರು, ಇದಿಷ್ಟು ಲವ್ ಜಿಹಾದ್ ನಿಂದ ಮರ್ಡರ್ ಆದವರ ಪ್ರಕರಣಗಳು. ಐಸಿಸ್ ಗೆ ಕಳುಹಿಸಲ್ಪಟ್ಟು ಸೂಸೈಡ್ ಬಾಂಬರ್ಸ್ಗಳನ್ನಾಗಿ ಮಾಡುವುದು, ಟೆರರಿಸಂ ನ ಕೃತ್ಯಗಳನ್ನು ಮರೆ ಮಾಚಲು ಸಮಾಜದ ಮುಂದೆ ಈ ಮತಾಂತರವಾದ ಹೆಣ್ಣು ಮಕ್ಕಳನ್ನು ಮುಗ್ಧ ಮುಖವಾಡವನ್ನಾಗಿ ಬಳಸಿಕೊಳ್ಳುವುದು ಇದೆಲ್ಲಾ ಟೆರರ್ ನ ಪ್ರಕರಣಗಳು. ನಾನು ಏಕೆ ಎಚ್ಚೆತ್ತು ಕೊಳ್ಳಲಿಲ್ಲ, ಹಿಂದೂ ಹೆಣ್ಣು ಮಕ್ಕಳಾದ ನಾವೆಲ್ಲಾ ಏಕೆ ಈ ಕಠೋರ ಸತ್ಯದ ಬಗೆಗೆ ಜಾಗೃತಗೊಂಡಿಲ್ಲ, ಯಾವ ಕಾಣದ ಕೈಗಳು ಹಿಂದೂ ಸಮಾಜವು ಅದರ ಮೇಲಾಗುತ್ತಿರುವ ಸತ್ಯದ ಆಕ್ರಮಣದಿಂದ ಅವಗತವಾಗದಂತೆ ತಡೆಯುತ್ತಿವೆ? 'ಮೇರಾ ಅಬ್ದುಲ್ ಅಲಗ್ ಹೇ' ಎಂದು ಯೋಚಿಸಿದಕ್ಕಾಗಿ ಸಿಕ್ಕ ದುರಂತಕರ ಫಲವೇ ಇದು? ಮುಸ್ಲಿಂ ಹುಡುಗನ ಪ್ರೀತಿಯನ್ನು ನಿರಾಕರಿಸಿದ ಜಾಗೃತ ಹಿಂದೂ ಹುಡುಗಿಯ ಮೇಲೆ ಆಸಿಡ್ ದಾಳಿ ನಡೆದ ಅಂಕಿತಾಳ ಕೇಸ್ನಲ್ಲಾಗಲಿ ಅಥವಾ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಮದುವೆಯವರೆಗೆ ಬಂದು ಮತಾಂತರವನ್ನು ನಿರಾಕರಿಸಿದಕ್ಕಾಗಿ ನಾಲ್ಕನೆ ಮಹಡಿಯಿಂದ ಹಿಂದೂ ಹುಡುಗಿಯನ್ನು ತಳ್ಳಿದ ನಿಧಿಯ ಕೇಸ್ನಲ್ಲಾಗಲಿ ಅಥವಾ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದು ಆತನ ಕರಾಳ ಜಾಲದಿಂದ ತಪ್ಪಿಸಿಕೊಂಡು ಬರಲೂ ಆಗದೆ, ಮದುವೆಯೂ ಆಗದೆ 35 ಚೂರುಗಳಾಗಿ ಹತ್ಯೆಯಾದ ನನ್ನ (ಶ್ರದ್ಧಾ) ಕೇಸ್ನಲ್ಲಾಗಲಿ ಎಲ್ಲದರಲ್ಲೂ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ನಾಶ ಮಾಡಿದ್ದಾರೆ. ಸರ್ಕಾರ ಹಾಗೂ ನ್ಯಾಯಾಲಯಗಳು ಸಮಾಜದಲ್ಲಿ ಘಾತುಕವಾಗಿ ಪರಿಣಮಿಸುತ್ತಿರುವ ಈ ರೀತಿಯ ಪ್ರಕರಣಗಳನ್ನು ಲವ್ ಜಿಹಾದ್ ನ ದೃಷ್ಟಿಕೋನದಿಂದ ತನಿಖೆ ಮಾಡಲು ಸಿದ್ಧವೇ ಇಲ್ಲವೆಂದರೆ ಇದಕ್ಕೆ ಪರಿಹಾರ ಕಂಡು ಕೊಳ್ಳುವುದಾದರೂ ಹೇಗೆ? ಸತ್ಯದಿಂದ ಇನ್ನೆಷ್ಟು ದೂರ ಓಡುವಿರಿ? ಸತ್ಯವನ್ನು ಎದುರಿಸಲು ತಡ ಮಾಡಿದಷ್ಟು ಅದರ ಕಾಠಿಣ್ಯತೆ ಹೆಚ್ಚುತ್ತಲೇ ಹೋಗುತ್ತದೆ! ಲವ್ ಜಿಹಾದ್ ಎಂಬ ಈ ಸಮಸ್ಯೆಗೆ ಹಿಂದೂ ಹಾಗೂ ಇನ್ನಿತರ ಮುಸ್ಲಿಮೇತರ ಹೆಣ್ಣುಮಕ್ಕಳನ್ನು ಜಾಗೃತಿಗೊಳಿಸುವುದೊಂದೇ ಈಗ ನಮ್ಮ ಬಳಿಯಿರುವ ಬ್ರಹ್ಮಾಸ್ತ್ರ!! 

ಇಷ್ಟೆಲ್ಲಾ ಓದಿದ ನಂತರ ನೀವು ನನ್ನನ್ನು 'ಕೇವಲ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಹೆಣ್ಣು ಮಕ್ಕಳನ್ನು ಶೋಷಿಸಲಾಗುತ್ತಿದೆಯೇ?' ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರ 'ಇಲ್ಲ' ಎಂದೇ. ನಮ್ಮ ಸಂಸ್ಕೃತಿಯು ಸ್ತ್ರೀಯರಿಗೆ ಗೌರವ ನೀಡಿರುವಷ್ಟು ಮತ್ತ್ಯಾವುದೂ ನೀಡಿಲ್ಲ, ಈ ನಾಡಿನ ಎಲ್ಲಾ ಶ್ರೇಷ್ಠತಮ ಸೂಚಕಗಳಾದ ನದಿ, ಭೂಮಿ, ವಿದ್ಯೆ, ಸಂಪತ್ತು ಮುಂತಾದವುಗಳನ್ನು ಸ್ತ್ರೀತ್ವದ ಹೆಸರಿನಿಂದಲೇ ಸೂಚಿಸಲಾಗುತ್ತದೆ. ಆದರೆ ಇತ್ತೀಚಿನ ರಾಷ್ಟ್ರೀಯ ಸುದ್ದಿವಾಹಿನಿಗಳ ಸರ್ವೆಯ ಪ್ರಕಾರ ನಮ್ಮ ದೇಶದಲ್ಲಿ ಪ್ರತೀ ಮೂವರಲ್ಲಿ ಒಬ್ಬ ಸ್ತ್ರೀ ಭೌತಿಕವಾಗಿ, ಮಾನಸಿಕವಾಗಿ ಶೋಷಣೆಗೊಳಪಡುತ್ತಿದ್ದಾಳೆ. ತಾಯಿಯ ಗರ್ಭದಿಂದ ಭೂ ತಾಯಿಯ ಮಡಿಲಿಗೆ ಬರುವ ಪ್ರತಿಯೊಂದು ಹೆಣ್ಣು ಮಗು ತನ್ನ ಜೀವನದುದ್ದಕ್ಕೂ ಅಗ್ನಿಪಥದ ಮೂಲಕವೇ ಸಾಗಬೇಕಾಗುತ್ತದೆ. ಅಧಿಕ ಸಂಖ್ಯೆಯಲ್ಲಿ ಸ್ತ್ರೀಯರು ಆರ್ಥಿಕವಾಗಿ ಪತಿಯ ಮೇಲೆ ಅವಲಂಬನೆಯಾಗಿರುವುದು, ಸಮಾಜದಿಂದ ಸಹಜವಾದ ಪರಿಯಲ್ಲಿ ಸ್ತ್ರೀಯರಿಗೆ ಮಹತ್ತರ ಕೌಟುಂಬಿಕ ಜವಾಬ್ದಾರಿಗಳನ್ನು ನೀಡಿರುವುದು, ಅತ್ತ ತವರು ಮನೆ ಇತ್ತ ಪತಿಯ ಮನೆ ಎರಡರದ್ದೂ ಸಮ್ಮಾನವನ್ನು ರಕ್ಷಣೆ ಮಾಡಬೇಕಿರುವುದು ಹೀಗೆ ಅನೇಕ ಕರ್ತವ್ಯಗಳನ್ನು ನಿರ್ವಹಿಸುವ ಸ್ತ್ರೀ ತನ್ನವರಿಂದ ನೋವಾದರೂ ಅದನ್ನು ಸಹಿಸಿಕೊಂಡು ಪ್ರೀತಿ-ಸಂತೋಷಗಳನ್ನು ಮಾತ್ರ ಹಂಚುತ್ತಾಳೆ. ಸಮಾಜದ ಪವಿತ್ರತೆಯನ್ನು ಕಾಪಾಡುವ ಸ್ತ್ರೀ ಶಕ್ತಿ ಜಾಗೃತವಾಗಲಿ, ಸಮಾಜಕ್ಕೆ ಕಂಟಕವಾಗಿರುವ ಮಹಿಷಾಸುರ ಪ್ರವೃತ್ತಿ ಸಂಹಾರವಾಗಲಿ. ಆದರೆ ಇದೆಲ್ಲಕ್ಕಿಂತ ಭೀಕರವಾಗಿ ನಿಗೂಢವಾಗಿ ಕಾಡುತ್ತಿರುವ, ಹೆಚ್ಚು ಚರ್ಚೆಗೆ ಬರದಿರುವ, ಕೌಟುಂಬಿಕ ಕಲಹಕ್ಕಿಂತ ಸಾವಿರ ಪಟ್ಟು ಅಧಿಕ ಸಮಸ್ಯೆಯನ್ನು ತಂದೊಡ್ಡಬಹುದಾದ, ರಾಷ್ಟ್ರದ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ನಿಲ್ಲಬಹುದಾದ ಈ ಮುಸ್ಲಿಂ ಸಮಾಜದ ಮತಾಂಧರಿಂದ ನಡೆಯುತ್ತಿರುವ ಲವ್ ಜಿಹಾದ್ ಸಮಸ್ಯೆಯ ಬಗ್ಗೆ ನಾವೆಲ್ಲಾ ಚರ್ಚಿಸಲೇಬೇಕು. ಮುಸಲ್ಮಾನನಾದರೂ ಹಿಂದೂ ಹೆಸರಿಟ್ಟುಕೊಂಡು ಹಿಂದೂ ಹೆಣ್ಮಕ್ಕಳನ್ನು ತಮ್ಮ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುವುದು, ಹಿಂದೂಗಳ ವಿವಿಧ ಕುಲ/ಜಾತಿಯನುಸಾರ ಹುಡುಗಿಯರನ್ನು ಪ್ರೀತಿಸಿ ನಾಟಕವಾಡಲು ವಿವಿಧ ಬಗೆಯ ಪೇಮೆಂಟ್ ಗಳನ್ನು ಪಡೆಯುವುದು, ಪ್ರೀತಿಸುವ ನಾಟಕವಾಡುವಾಗ ಸೆಕ್ಯುಲರಿಸಂನ ಭ್ರಮಾಲೋಕವನ್ನು ಸೃಷ್ಟಿಸಿ ಜೀವನಪೂರ್ತಿ ಹೀಗೆಯೇ ಎಲ್ಲಾ ಧರ್ಮಗಳಿಗೂ ತಮ್ಮ ಧರ್ಮದಂತೆ ಗೌರವ ನೀಡುವುದಾಗಿ ಹೇಳಿ ವಂಚಿಸುವುದು ಹೀಗೆ ನಾನಾ ಬಗೆಯ ಆಯಾಮಗಳಲ್ಲಿ ಕಂಡುಬರುತ್ತಿರುವ ಲವ್ ಜಿಹಾದ್ ಸಮಸ್ಯೆಯನ್ನು ಜಾಗೃತ ಸಮಾಜವು ಭೇದಿಸಬೇಕು. ಎರಡೆರಡು ಹಿಂದೂ ಹುಡುಗಿಯರನ್ನು ಮದುವೆಯಾಗಿ ಇಬ್ಬರಿಗೂ ಡೈವೋರ್ಸ್ ನೀಡಿ ಕೈ ಕೊಟ್ಟಂತಹ, ಹಿಂದೂ ದೇವರ ಅಪಮಾನ ಮಾಡಿ ಸಿನಿಮಾ ಮಾಡುವಂತಹ ಅಮೀರ್ ಖಾನ್, ತಮ್ಮ ಸಂತಾನಕ್ಕೆ ಲಕ್ಷ-ಲಕ್ಷ ಹಿಂದೂಗಳ ಕೊಲೆಗಡುಕನಾದಂತಹ ತೈಮೂರ್ ಎಂಬ ರಾಕ್ಷಸನ ಹೆಸರಿಡುವ ಸೈಫ್ ಆಲಿ ಖಾನ್ ಇಂತಹ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳೇ ಹೀಗೆ ಮಾಡುತ್ತಾರೆಂದರೆ ಇನ್ನು ಸಾಮಾನ್ಯರ ಕಥೆ ಏನು? ಇದಕ್ಕೆ ವ್ಯತಿರಿಕ್ತವಾಗಿ ಒಳ್ಳೆಯ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ಹಿಂದೂ-ಮುಸ್ಲಿಂ ದಂಪತಿಗಳ ಉದಾಹರಣೆಯನ್ನು ನೀಡಬಹುದು, ಆದರೆ ಅವರಲ್ಲಿ ಬಹುತೇಕ ಅವರ ಮಕ್ಕಳನ್ನು ಮುಸಲ್ಮಾನರನ್ನಾಗಿಯೇ ಏಕೆ ಬೆಳೆಸುತ್ತಾರೆ ಎಂಬುದರ ಬಗ್ಗೆ ಸ್ವಲ್ಪ ಸಂಶೋಧನೆ ನಡೆಸಿದರೆ ನಿಮಗೇ ಈ ಸಮಸ್ಯೆ ಅರ್ಥವಾಗುತ್ತದೆ. ಅದಕ್ಕಾಗಿಯೇ ಈ ಲೇಖನ. ಇದರಲ್ಲಿ ಶ್ರದ್ಧಾಳ ಆತ್ಮದ ಕೂಗನ್ನು ಸಮಾಜಕ್ಕೆ ಕೇಳಿಸುವ ಪ್ರಯತ್ನ ಮಾಡಿದ್ದೇನೆ. ನ್ಯಾಯಾಂಗವು ಆಕೆಯ ಸಾವಿಗೆ ಸೂಕ್ತ ನ್ಯಾಯ ಒದಗಿಸಲಿ, ರಾಕ್ಷಸ ಅಫ್ತಾಬ್ ಗೆ ನೀಡುವ ಶಿಕ್ಷೆ ಐತಿಹಾಸಿಕವಾಗಿ ಈ ರೀತಿಯ ಘೋರ ಕೃತ್ಯಗಳನ್ನು ಆಮೂಲಾಗ್ರವಾಗಿ ತಡೆಯುವ ಶಕ್ತಿಯುತ ಸಾಧನವಾಗಲಿ. ಆದರೆ ಇದು ಕೇವಲ ಶ್ರದ್ಧಾಳ ನುಡಿಯಲ್ಲ, ಆಕೆಯಂತೆ ಲವ್ ಜಿಹಾದ್ ಗೆ ಬಲಿಯಾದ ಅನೇಕಾನೇಕ ಹಿಂದೂ ಹೆಣ್ಣುಮಕ್ಕಳ ವ್ಯಥೆಯ ನುಡಿಗುಚ್ಛ!

~ಸಿಂಚನ.ಎಂ.ಕೆ ಮಂಡ್ಯ

Comments